ಸಮಗ್ರ ಶಿಕ್ಷಣ ಕರ್ನಾಟಕ
ಸಮಗ್ರ ಶಿಕ್ಷಣ ಕರ್ನಾಟಕ

ಸಮಗ್ರ ಶಿಕ್ಷಣ ಕರ್ನಾಟಕ

ಶಾಲಾ ಶಿಕ್ಷಣ ಇಲಾಖೆ

×
ಅಭಿಪ್ರಾಯ
ಸಮಗ್ರ ಶಿಕ್ಷಣ ಕರ್ನಾಟಕ ಕುರಿತು

Home

ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಮುಖ್ಯ ದ್ಯೇಯವಾಗಿರುತ್ತದೆ. ಇದರ ಮೂಲಕ ನಿರ್ದಿಷ್ಟ ಜ್ಞಾನ, ಕೌಶಲ್ಯ ಮತ್ತು ಮೌಲ್ಯಗಳೊಂದಿಗೆ ಅವರನ್ನು ಸಮಾಜದ ಉತ್ತಮ ಹಾಗೂ ಸಾಮಾಜಿಕ ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡಲು ಮತ್ತು ಅವರು ಶ್ರೇಷ್ಠತೆಯನ್ನು ಸಾಧಿಸಲು ಅನುವು ಮಾಡಿಕೊಡುವುದೆ ಆಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿ-2020ರ ಶಿಫಾರಸ್ಸಿನಂತೆ ಶಾಲಾ ಶಿಕ್ಷಣವನ್ನು ಪೂರ್ವ ಬಾಲ್ಯಾವಸ್ಥೆ ಶಿಕ್ಷಣದಿಂದ 12ನೇ ತರಗತಿಯವರೆಗೆ ಸಮಗ್ರವಾಗಿ ಪರಿಗಣಿಸಲಾಗಿದೆ. ಸಮಗ್ರ ಶಿಕ್ಷಣ-ಕರ್ನಾಟಕವು ಶಾಲಾ ಶಿಕ್ಷಣ ಕ್ಷೇತ್ರಕ್ಕೆ ಪೂರ್ವ-ಪ್ರಾಥಮಿಕ ಹಂತದಿಂದ 12 ನೇ ತರಗತಿಯವರೆಗೆ ವಿಸ್ತರಿಸುವ ಕೇಂದ್ರ ಪ್ರಾಯೋಜಿತ ಕಾರ್ಯಕ್ರಮವಾಗಿದ್ದು, ಕಲಿಕಾ ಫಲಿತಾಂಶಗಳನ್ನುಪರಿಣಾಮಕಾರಿಯಾಗಿ ಸಾಧಿಸುವ ವಿಶಾಲ ಗುರಿಯನ್ನು ಹೊಂದಿದ್ದು, ಎಲ್ಲರಿಗೂ ಸಮಾನ ಕಲಿಕೆಗೆ ಸಮಾನ ಅವಕಾಶಗಳನ್ನು ಒದಗಿಸುತ್ತದೆ.

ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ, 1960 ರ ಸೆಕ್ಷನ್ 21 ರ ಪ್ರಕಾರ ಸರ್ವ ಶಿಕ್ಷಾ ಅಭಿಯಾನ (ಎಸ್‌.ಎಸ್‌.ಎ), ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ (ಆರ್‌.ಎಂ.ಎಸ್‌.ಎ) ಮತ್ತು ಶಿಕ್ಷಕರ ಶಿಕ್ಷಣ (ಟಿ.ಇ) ಈ ಮೂರು ಹಿಂದಿನ ಯೋಜನೆಗಳನ್ನು ದಿನಾಂಕ:05-04-2019 ರಿಂದ ಸಮ್ಮಿಲನಗೊಂಡಿದ್ದು 'ಸಮಗ್ರ ಶಿಕ್ಷಣ ಕರ್ನಾಟಕ ಆಗಿರುತ್ತದೆ.ಗೌರವಾನ್ವಿತ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ 'ಸಮಗ್ರ ಶಿಕ್ಷಣ ಕರ್ನಾಟಕ ಸಮಿತಿ'ಯ ಆಡಳಿತ ಮಂಡಳಿ, ಕರ್ನಾಟಕ ಸರ್ಕಾರದ ಅಭಿವೃದ್ಧಿ ಆಯುಕ್ತರು ಹಾಗೂ ಎಸಿಎಸ್ ಅವರ ಅಧ್ಯಕ್ಷತೆಯಲ್ಲಿ ಸರ್ಕಾರದ ಆದೇಶ ಸಂಖ್ಯೆ: ಇಡಿ 43 ಎಂಸಿಡಿ 2018 , ದಿನಾಂಕ: 06-02-2019 ಪ್ರಕಾರ ರಚಿಸಲಾಗಿದೆ.

ಈ ಉಪಕ್ರಮವು ಎಲ್ಲಾ ಹಂತಗಳಲ್ಲಿ ಅನುಷ್ಠಾನ ಕಾರ್ಯವಿಧಾನಗಳು ಮತ್ತು ವಹಿವಾಟು ವೆಚ್ಚಗಳನ್ನು ಸಮನ್ವಯಗೊಳಿಸಲು ಸಹಾಯ ಮಾಡುತ್ತದೆ, ವಿಶೇಷವಾಗಿ ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದ ವ್ಯವಸ್ಥೆಗಳು ಮತ್ತು ಸಂಪನ್ಮೂಲಗಳನ್ನು ಬಳಸಿಕೊಳ್ಳುವಲ್ಲಿ, ಶಾಲಾ ಶಿಕ್ಷಣದ ಅಭಿವೃದ್ಧಿಗಾಗಿ ಒಂದು ಸಮಗ್ರ ಕಾರ್ಯತಂತ್ರದ ಯೋಜನೆಯನ್ನು ರೂಪಿಸುತ್ತದೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಕಾರ್ಯಕ್ಷಮತೆ ಮತ್ತು ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಿ, ನಿರೀಕ್ಷಿತ ಕಲಿಕಾಫಲಗಳಲ್ಲಿ ಸುಧಾರಣೆ ತರಲು ಗಮನ ಹರಿಸಲಾಗಿದೆ.

‘ಸಮಗ್ರ ಶಿಕ್ಷಣ-ಕರ್ನಾಟಕ’ ರಾಜ್ಯ ಯೋಜನಾ ನಿರ್ದೇಶಕರ ಆಡಳಿತಾತ್ಮಕ ನಿಯಂತ್ರಣದಲ್ಲಿ ಸರ್ಕಾರವು ವಿವರಿಸಿದಂತೆ ನಿರ್ದಿಷ್ಟ ಸಮಯದ ಚೌಕಟ್ಟಿನೊಳಗೆ ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವ ಶಿಕ್ಷಣದವರೆವಿಗೂ ಸಾರ್ವತ್ರೀಕರಣಗೊಳಿಸಲು ಅನುಕೂಲವಾಗುವಂತೆ ಕಾರ್ಯ ನಿರ್ವಹಿಸುತ್ತದೆ.