ಸಮಗ್ರ ಶಿಕ್ಷಣ ಕರ್ನಾಟಕ
ಸಮಗ್ರ ಶಿಕ್ಷಣ ಕರ್ನಾಟಕ

ಸಮಗ್ರ ಶಿಕ್ಷಣ ಕರ್ನಾಟಕ

ಶಾಲಾ ಶಿಕ್ಷಣ ಇಲಾಖೆ

×
ಅಭಿಪ್ರಾಯ
ಓ.ಒ.ಎಸ್.ಸಿ

Home

ಓ.ಒ.ಎಸ್.ಸಿ ಕಾರ್ಯಕ್ರಮ

ಶಿಕ್ಷಣವು  ಸಮಾಜದ ಕನ್ನಡಿಯಾಗಿ ಗುರುತಿಸಲ್ಪಟ್ಟಿದ್ದು, ಶೈಕ್ಷಣಿಕ ಸಂಸ್ಥೆಗಳು ಸಮಾಜದ ಕಿರು ಮಾದರಿಗಳಾಗಿವೆ. ಕಳೆದ ಮೂರು ದಶಕಗಳಿಂದಲೂ ರಾಷ್ಟ್ರೀಯ ಶಿಕ್ಷಣ  ನೀತಿ-1986 (ಎನ್.ಪಿ.ಇ) ಶಿಕ್ಷಣದ ಆಧಾರ/ಅಡಿಪಾಯವಾಗಿದ್ದು ಅದರಂತೆ ಭಾರತದಲ್ಲಿ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಲಾಗಿದೆ.  ಭಾರತದ ಸಂವಿಧಾನದಲ್ಲಿ ತಿದ್ದುಪಡಿ ಮಾಡಿದ ಅನುಚ್ಛೇದ 21(ಎ)ರಂತೆ ಪ್ರಾಥಮಿಕ ಶಿಕ್ಷಣವನ್ನು ಮೂಲಭೂತ ಹಕ್ಕು ಮತ್ತು ಜೀವನದ ಹಕ್ಕಾಗಿ ಪರಿಗಣಿಸಿದೆ. ಈ ವಿಧಿಯಂತೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು 6 ರಿಂದ 14ರ ವಯಸ್ಸಿನ ಮಕ್ಕಳಿಗೆ ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ನೀಡಬೇಕಿದೆ.

          ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಪಡೆಯುವ ಅವಕಾಶ ಹೆಚ್ಚುತ್ತಿದ್ದು, ಯಾರೂ ಅನಕ್ಷರಸ್ಥರಾಗಿರಬೇಕಾದ ಹಾಗೂ ಮುಗ್ಧರಾಗಿರಬೇಕಾದ ಪರಿಸ್ಥಿತಿ ಇಲ್ಲ. ಶಿಕ್ಷಣ ವಂಚಿತ ಸಮುದಾಯದಲ್ಲಿನ ಶಾಲೆಯಿಂದ ಹೊರಗುಳಿದಿರುವ ಮಕ್ಕಳು ಶಾಲಾ ಶಿಕ್ಷಣದ ಮುಖ್ಯವಾಹಿನಿಗೆ ಬರುವಂತೆ ಮಾಡಲು ಆರ್.ಟಿ.ಇ ಅನುಷ್ಠಾನದಿಂದ ಸಾಧ್ಯವಾಗಿದೆ. ಶಾಲೆಯಿಂದ ಹೊರಗುಳಿದಿರುವ ಮಕ್ಕಳು ಮುಖ್ಯವಾಹಿನಿಗೆ ಬರಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರಲ್ಲಿಯೂ ಮುಖ್ಯವಾಗಿ ಎಸ್.ಸಿ/ಎಸ್.ಟಿ ಅಲ್ಪಸಂಖ್ಯಾತ, ವಿಶೇಷ ಚೇತನ ಮಕ್ಕಳು ಮತ್ತು ನಗರ ವಂಚಿತ ಮಕ್ಕಳು ಹೀಗೆ ಎಲ್ಲಾ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ವಿಶೇಷ ಕ್ರಮಕೈಗೊಳ್ಳಲಾಗಿದೆ.

ಪ್ರಸ್ತುತ ಸಮಾಜದಲ್ಲಿ ಅನಕ್ಷರಸ್ಥರಾದವರು ಗೌರವಯುತ ಜೀವನವನ್ನು ನಡೆಸಲು ಕಷ್ಟ ಸಾಧ್ಯವಾಗುತ್ತಿದೆ. ಈ ಹಿನ್ನಲೆಯಲ್ಲಿ ಸಮಗ್ರ ಶಿಕ್ಷಣ ಕರ್ನಾಟಕವು ಶಾಲೆಯಿಂದ ಹೊರಗುಳಿದಿರುವ ಮಕ್ಕಳಿಗೆ ಅಗತ್ಯ ತರಬೇತಿಯನ್ನು ನೀಡುವ ಮೂಲಕ ಶಾಲಾ ಶಿಕ್ಷಣದ ಮುಖ್ಯವಾಹಿನಿಗೆ ತರಲು ಯೋಜನೆಯನ್ನು ರೂಪಿಸಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ.

ರಾಜ್ಯದ ಹೆಚ್ಚಿನ ಸಂಖ್ಯೆಯ ಮಕ್ಕಳು ವಿವಿಧ ಕಾರಣಗಳಿಂದ ಶಾಲೆಯನ್ನು ಅರ್ಧದಲ್ಲೇ ತೊರೆಯುತ್ತಾರೆ ಹಾಗೂ ಇದಕ್ಕೆ ಅನೇಕ ಸಮಸ್ಯೆಗಳು ಕಾರಣವಾಗುತ್ತದೆ. ಅವುಗಳಲ್ಲಿ ವಲಸೆ, ಆರ್ಥಿಕ ಸಮಸ್ಯೆ, ಸಂಸಾರಿಕ ಸಮಸ್ಯೆ ಇವುಗಳು ಮುಖ್ಯವಾಗಿದೆ. ಪೋಷಕರು ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಲಸೆ ಹೋಗುವುದು ಸಾಮನ್ಯವಾಗಿದೆ. ದೇಶದಾದ್ಯಂತ ಪ್ರತಿ ವರ್ಷ ಅನೇಕ ಕುಟುಂಬಗಳು ಹಳ್ಳಿಗಳಲ್ಲಿ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದೇ ತಮ್ಮ ಮನೆಗಳನ್ನು, ಹಳ್ಳಿಗಳನ್ನು ತೊರೆದು ಉದ್ಯೋಗಗಳನ್ನು ಹುಡುಕಲು ವಲಸೆ ಹೋಗುತ್ತಾರೆ. ಇದು ವಲಸೆ ಕುಟುಂಬಗಳ ಮಕ್ಕಳು ಶಾಲೆಯಿಂದ ಹೊರಗುಳಿಯಲು ಕಾರಣವಾಗಿದೆ. ಜಿಲ್ಲೆಯಿಂದ ಜಿಲ್ಲೆಗೆ, ರಾಜ್ಯದಿಂದ ರಾಜ್ಯಕ್ಕೆ ಉದ್ಯೋಗವನ್ನರಸಿ ವಲಸೆ ಬಂದಾಗ ಪೋಷಕರು ತಮ್ಮ ಮಕ್ಕಳನ್ನು ವಲಸೆ ಬಂದ ಸ್ಥಳದಲ್ಲಿಯ ಶಾಲೆಗಳಲ್ಲಿ ದಾಖಲು ಮಾಡಲು ಆಸಕ್ತಿಯನ್ನು ತೋರುತ್ತಿಲ್ಲ. ಇದಕ್ಕೆ ಭಾಷಾ ಮಾಧ್ಯಮವೂ ಕೂಡ ಪ್ರಮುಖ ಕಾರಣವೆಂದು ಪರಿಗಣಿಸಬಹುದಾಗಿದೆ. ಈ ಎಲ್ಲಾ ಅಂಶಗಳನ್ನು ಆಧರಿಸಿ ಶಾಲೆಯಿಂದ ಯಾವ ಮಗುವೂ ಹೊರಗುಳಿಯದಂತೆ ಕ್ರಮಗಳನ್ನು ಕೈಗೊಳ್ಳವುದು ಇಂದಿನ ತುರ್ತು ಅಗತ್ಯವಾಗಿದೆ

 

ಉದ್ದೇಶಗಳು:-

          ಸಂವಿಧಾನತ್ಮಕವಾಗಿ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ನೀಡುವುದು ಕಡ್ಡಾಯವಾಗಿದೆ. ಇದರ ಜೊತೆಗೆ ಮುಂದಿನ ಶಿಕ್ಷಣವನ್ನು ಪಡೆಯಲು ಕೂಡ ಅವಕಾಶ ಮಾಡಿಕೊಡಬೇಕಾಗಿರುತ್ತದೆ. ಶಿಕ್ಷಣವನ್ನು ಮುಂದುವರೆಸಲು ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ತರಬೇತಿಯನ್ನು ನೀಡಿ (ಓಓಎಸ್‌ಸಿ) ಮುಖ್ಯವಾಹಿನಿಗೆ ತರುವ ಧ್ಯೇಯ ಸಾಧನೆಗಾಗಿ ಕೆಳಗಿನಂತೆ ಉದ್ದೇಶಗಳನ್ನು ಗುರುತಿಸಿಕೊಳ್ಳಲಾಗಿದೆ:

  1. 6-14 ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೆ ಕನಿಷ್ಠ 8 ವರ್ಷಗಳ ಔಪಚಾರಿಕ ಶಿಕ್ಷಣವನ್ನು ಕಡ್ಡಾಯವಾಗಿ ನೀಡುವುದು.
  2. ಶಿಕ್ಷಣವನ್ನು ಪಡೆಯಲು ಯಾವುದೇ ಜಾತಿ, ಲಿಂಗ ಭೇಧವಿಲ್ಲದೆ ಎಲ್ಲಾ ಮಕ್ಕಳಿಗೆ ಸಮಾನವಾದ ಏಕರೂಪದ ಶಿಕ್ಷಣವನ್ನು ನೀಡುವುದು.
  3. ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು.
  4. ಶಿಕ್ಷಣದ ಹಕ್ಕು ಕಾಯ್ದೆ -2009ರ ಪ್ರಕಾರ ಅರ್ಹ 6 ರಿಂದ 14 ವರ್ಷ ವಯೋಮಾನದ ಮಕ್ಕಳು ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ಈ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಲು ಎಲ್ಲಾ ಅವಕಾಶಗಳನ್ನು ಕಲ್ಪಿಸುವುದು.
  5. ಐದು ವರ್ಷಗಳಿಗೊಮ್ಮೆ ಸಮಗ್ರ ಮಕ್ಕಳ ಗಣತಿ/ಸಮೀಕ್ಷೆಗಳನ್ನು ಮಾಡಲಾಗುತ್ತದೆ. ಇದರಲ್ಲಿ ಮನೆ ಮನೆ ಸಮೀಕ್ಷೆ ಮತ್ತು ಮಕ್ಕಳು ಸಿಗಬಹುದಾದ ಪ್ರದೇಶಗಳಲ್ಲಿಯೂ ಸಮೀಕ್ಷೆಯನ್ನು ಮಾಡಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸುವುದು.
  6. ಪ್ರತಿ ವರ್ಷ ಪರಿಷ್ಕರಣ ಗಣತಿ ಮಾಡಿ (Updation Survey) ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲಾಗುತ್ತದೆ. ಶಾಲೆಗಳಲ್ಲಿ ಹಿಂದಿನ ವರ್ಷದ ದಾಖಲಾತಿ ಮತ್ತು ಪ್ರಸ್ತುತ ವರ್ಷದ ದಾಖಲಾತಿ ಪರಿಶೀಲಿಸುವುದು ಹಾಗೂ ಮಕ್ಕಳು ದೊರೆಯಬಹುದಾದ ಆಯ್ದ ಪ್ರದೇಶಗಳಲ್ಲಿ ಸಮೀಕ್ಷೆ ಮಾಡಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲಾಗುವುದು.

 

ಶಾಲೆಬಿಟ್ಟ ಹಾಗೂ ಶಾಲೆಗೆ ದಾಖಲಾಗದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಇಲಾಖೆ ಕೈಗೊಂಡಿರುವ ಕ್ರಮಗಳು:

 

  1. ಸಮೀಕ್ಷೆಯಿಂದ ಗುರುತಿಸಲಾದ ಎಲ್ಲಾ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಓಒಎಸ್‌ಸಿ ಕಾರ್ಯತಂತ್ರಗಳ ಅನುಷ್ಠಾನ.
  2. ಹೋಬಳಿ ಮಟ್ಟದಲ್ಲಿ ಇ.ಸಿ.ಒ.ರವರನ್ನು ಹಾಜರಾತಿ ಪ್ರಾಧಿಕಾರವಾಗಿ ನೇಮಿಸಿ ಶಾಲೆಬಿಟ್ಟ ಮಕ್ಕಳನ್ನು ಶಾಲೆಗೆ ದಾಖಲಿಸಿ ಅನುಪಾಲನೆ.
  3. ವಲಸಿತ ಮಕ್ಕಳಿಗೆ ಋತುಮಾನ ವಸತಿಯುತ ಶಾಲೆಗಳನ್ನು ನಡೆಸಲಾಗಿದೆ.
  4. ಶಾಲಾ ಲಭ್ಯತೆಯಿಲ್ಲದ ಪ್ರದೇಶದಿಂದ ನೆರೆಹೊರೆ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ

          ಮಕ್ಕಳಿಗೆ ಸಾರಿಗೆ/ಬೆಂಗಾವಲು ಭತ್ಯೆ ಒದಗಿಸಲಾಗುತ್ತಿದೆ.

  1. ವಲಸಿತ ಮಕ್ಕಳಿಗೆ ವಲಸಿತ ನೀತಿಯನ್ನು ರೂಪಿಸಿ ಅದರಂತೆ ಕ್ರಮವಹಿಸಲಾಗುತ್ತಿದೆ.
  2. ದಾಖಲಾದ ಎಲ್ಲಾ ಮಕ್ಕಳಿಗೂ ಪ್ರೋತ್ಸಾಹ ಯೋಜನೆಗಳ ಸವಲತ್ತುಗಳನ್ನು ಒದಗಿಸಲಾಗಿದೆ.
  3. ದಾಖಲಾದ ಎಲ್ಲಾ ವಿದ್ಯಾರ್ಥಿಗಳ ಮಾಹಿತಿಯನ್ನು ಎಸ್.ಎ.ಟಿ.ಎಸ್ ನಲ್ಲಿ ಅಳವಡಿಸಿ ಶಾಲೆ ಬಿಡದಂತೆ ಜಾಡನ್ನು ಹಿಡಿಯಲಾಗುತ್ತಿದೆ. ಶಾಲೆ ಬಿಟ್ಟಲ್ಲಿ ಅಂತಹ ಮಕ್ಕಳ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಿ ಅನುಪಾಲನೆ ಮಾಡಲು ನಿರ್ದೇಶನ ನೀಡಲಾಗಿದೆ.
  4. ಮಹಿಳಾ ಮತ್ತು ಮಕ್ಕಳ ಇಲಾಖೆ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ಪಂಗಡ ಆಯೋಗ ಮತ್ತು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸಹಯೋಗದೊಂದಿಗೆ ಮಾಹಿತಿ ಹಂಚಿಕೆಯೊಂದಿಗೆ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಕ್ರಮವಹಿಸಿದೆ.
  5. 5 ಮಕ್ಕಳಿಗಿಂತ ಹೆಚ್ಚಿಗೆ ಶಾಲೆಬಿಟ್ಟ ಮಕ್ಕಳು ಕಂಡು ಬಂದರೆ ಅಂತಹ ಪ್ರದೇಶದಲ್ಲಿ ಟೆಂಟ್ ಶಾಲೆಗಳನ್ನು ತೆರೆಯಲಾಗುತ್ತಿದೆ.
  6. ಹೋಬಳಿ ಮಟ್ಟದಲ್ಲಿ ಶಿಕ್ಷಣ ಸಂಯೋಜಕರು ವರನ್ನು ಹಾಜರಾತಿ ಪ್ರಾಧಿಕಾರವಾಗಿ ನೇಮಿಸಲಾಗಿದ್ದು, ಗೈರು ಹಾಜರಾದ ಮಕ್ಕಳ ಪೋಷಕರನ್ನು ಮನವೊಲಿಸಿ ಶಾಲೆಗೆ ದಾಖಲಿಸಿ ಅನುಪಾಲನೆ ಕೈಗೊಳ್ಳುವುದು ಮತ್ತುಗೈರು ಹಾಜರಾದ ಮಕ್ಕಳಿಗೆ ಸಂಬಂಧಿಸಿದಂತೆ VER/WER (Village Enrollment Register /Ward Enrollment Register ದಾಖಲೆ ನಿರ್ವಹಿಸುವುದು.