“ಪ್ರತಿ ಮಗುವೂ ಶಾಲೆಯಲ್ಲಿರಬೇಕು ಮತ್ತು ಚೆನ್ನಾಗಿ ಕಲಿಯಬೇಕು”ಎಂಬ ನೀತಿಯನ್ವಯ ಅಸ್ತಿತ್ವದಲ್ಲಿರುವ ಶಾಲೆಗಳ ಆಡಳಿತಾತ್ಮಕ, ಶೈಕ್ಷಣಿಕ ಮತ್ತು ಕ್ರಿಯಾತ್ಮಕ ಸಂಯೋಜನೆಯೊಂದಿಗೆ ಪೂರ್ವ ಪ್ರಾಥಮಿಕ ಶಾಲೆಯಿಂದ 12 ನೇ ತರಗತಿವರೆಗೆ ಗುಣಾತ್ಮಕ ಶಿಕ್ಷಣ ನೀಡುವ ಸಲುವಾಗಿ 2018-19ನೇ ಸಾಲಿನಿಂದ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಈ ಶಾಲೆಗಳಲ್ಲಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಬೋಧನಾ ಪದ್ಧತಿಯನ್ನು ಅಳವಡಿಸಲಾಗಿದೆ.
ಈ ಶಾಲೆಗಳನ್ನು ಗುಣಮಟ್ಟದ ಶಿಕ್ಷಣ ನೀಡುವ, ವಿದ್ಯಾರ್ಥಿ ಕೇಂದ್ರಿತ, ಸಮುದಾಯ ಮುಖಿ ಮತ್ತು ಸಮುದಾಯ ಬೆಂಬಲಿತ ಶಾಲೆಗಳನ್ನಾಗಿಸಿ, ’ಉತ್ಕೃಷ್ಟತೆಯ ಕೇಂದ್ರಗಳನ್ನಾಗಿ’ (Centre of Excellence) ಪರಿವರ್ತಿಸುವ ಉದ್ದೇಶವಿರುತ್ತದೆ.
2024-25 ನೇ ಸಾಲಿನಲ್ಲಿ ಒಟ್ಟು 308 ಕರ್ನಾಟಕ ಪಬ್ಲಿಕ್ ಶಾಲೆಗಳ ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಮುಕ್ತವಾಗಿ ದಾಖಲಾತಿಗೆ ಅವಕಾಶವಿರುತ್ತದೆ. ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವ ತರಗತಿವರೆಗೆ ಒಟ್ಟು 282932 ವಿದ್ಯಾರ್ಥಿಗಳು ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕೆ.ಪಿ.ಎಸ್ ಶಾಲೆಗಳು: 308
|
ಕ್ರ.ಸಂ
|
ಆದೇಶ ಸಂಖ್ಯೆ
|
ಅನುಮೋದನೆಗೊಂಡ ಶಾಲೆಗಳ ಸಂಖ್ಯೆ
|
ಪ್ರಾರಂಭಿಸಲಾದ ಶಾಲೆಗಳ ಸಂಖ್ಯೆ
|
ಪ್ರಾರಂಭವಾಗಬೇಕಾಗಿರುವ ಶಾಲೆಗಳು
|
|
1
|
ಇಡಿ 04 ಯೋಸಕ 2017, ಬೆಂಗಳೂರು ದಿನಾಂಕ: 05.01.2018
|
176
|
176
|
0
|
|
2
|
ಇಡಿ 230 ಯೋಸಕ 2018, ಬೆಂಗಳೂರು ದಿನಾಂಕ: 18.05.2019
|
100
|
100
|
0
|
|
3
|
ಇಪಿ 204 ಪಿ.ಎಂ.ಸಿ 2021 ಬೆಂಗಳೂರು ದಿನಾಂಕ: 25.10.2021
|
1
|
1
|
0
|
|
4
|
ಇಪಿ 09 ಎಂಪಿಇ 2021 ಬೆಂಗಳೂರು ದಿನಾಂಕ: 04.04.2022
|
5
|
5
|
0
|
|
5
|
ಇಪಿ 09 ಎಂಪಿಇ 2021 ಬೆಂಗಳೂರು ದಿನಾಂಕ: 13.05.2022
|
2
|
2
|
0
|
|
6
|
ಇಪಿ 116 ಎಂಪಿಇ 2022, ಬೆಂಗಳೂರು ದಿನಾಂಕ: 25.01.2023
|
1
|
1
|
0
|
|
7
|
ಇಪಿ 01 ಎಂಪಿಇ 2024 ಬೆಂಗಳೂರು ದಿನಾಂಕ: 05.02.2024
|
1
|
1
|
0
|
|
8
|
ಇಪಿ 104 ಎಂ.ಪಿ.ಇ 2023 ಬೆಂಗಳೂರು ದಿನಾಂಕ: 08.02.2024
|
22
|
22
|
0
|
|
|
ಒಟ್ಟು
|
308
|
308
|
0
|
|
2018-19
|
2019-20
|
2020-21
|
2021-22
|
2022-23
|
2023-24
|
ಒಟ್ಟು
|
|
176
|
100
|
01
|
01
|
07
|
01+22
|
308
|
ಕೆ.ಪಿ.ಎಸ್ ಶಾಲೆಗಳಲ್ಲಿನ ದಾಖಲಾತಿ ವಿವರ:
|
ವರ್ಷ್
|
2019-20
|
2020-21
|
2021-22
|
2022-23
|
2023-24
|
2024-25
|
|
ಶಾಲೆಗಳ ಸಂಖ್ಯೆ
|
276
|
276
|
276
|
283
|
285
|
308
|
|
ಒಟ್ಟು ದಾಖಲಾತಿ
|
234622
|
247123
|
283449
|
286685
|
279343
|
282932
|
ಕೆ.ಪಿ.ಎಸ್ ಶಾಲೆಗಳಿಗೆ ಮೂಲಭೂತ ಸೌಕರ್ಯ ಹಾಗೂ ಕಲಿಕಾ ಸಾಮಗ್ರಿಗಳಿಗೆ ಬಿಡುಗಡೆಯಾದ ಅನುದಾನದ ವಿವರ:
- ಪೂರ್ವ ಪ್ರಾಥಮಿಕ ಶಿಕ್ಷಣ (ECCE) :
ಕೆಪಿಎಸ್ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳಿಂದ 12ನೇ ತರಗತಿಯವರೆಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ಪ್ರಮುಖ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿಗಳಿಗೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
a) ಶಿಶುಸ್ನೇಹಿ ಪೀಠೋಪಕರಣ (Child friendly furnitures):ಪೂರ್ವ ಪ್ರಾಥಮಿಕ ತರಗತಿಗಳಲ್ಲಿ 4 ರಿಂದ 6 ವರ್ಷಗಳ ಮಕ್ಕಳು ವ್ಯಾಸಂಗ ಮಾಡುತ್ತಾರೆ. ಇವರುಗಳು ಸುರಕ್ಷಿತವಾಗಿ ಕುಳಿತು ಕೊಳ್ಳಲು ಅಗತ್ಯವಿರುವ ಶಿಶು ಸ್ನೇಹಿ ಪೀಠೋಪಕರಣಗಳನ್ನು ಒದಗಿಸಲಾಗಿದೆ.
b) ಹೊರಾಂಗಣ ಕ್ರೀಡಾ ಸಾಮಗ್ರಿಗಳು (Out door play materials): ಪೂರ್ವ ಪ್ರಾಥಮಿಕ ತರಗತಿಗಳ ಮಕ್ಕಳು ತರಗತಿಯ ಹೊರಗೆ ಆಟವಾಡಲು ಅನುಕೂಲವಾಗುವಂತೆ ಉಯ್ಯಾಲೆ, ಜಾರುವ ಬಂಡೆ ಮುಂತಾದ ಸಾಮಗ್ರಿಗಳನ್ನು ಒದಗಿಸಲಾಗಿದೆ.
c) ಬೋಧನಾ ಕಲಿಕೋಪಕರಣಗಳು: (TLM) ವಿದ್ಯಾರ್ಥಿಗಳಿಗೆ ಕಲಿಕಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅಗತ್ಯವಿರುವ ಬೋಧನಾ ಕಲಿಕೋಪಕರಣಗಳನ್ನು ಒದಗಿಸಲಾಗಿದೆ.

- ICT – Smart Class
ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಶಾಲಾ ಬೋಧನೆ ಮತ್ತು ಕಲಿಕೆಯಲ್ಲಿ ತಂತ್ರಜ್ಞಾನ ಬಳಸುವ ಸಾಮರ್ಥ್ಯ ಬೆಳೆಸುವ ಸಲುವಾಗಿ ಆಯ್ಕೆಯಾದ ಕೆಪಿಎಸ್ ಶಾಲೆಗಳಿಗೆ LED display, UPS- 1KV ಸಾಮಗ್ರಿಗಳ ಒದಗಿಸಲಾಗಿದೆ.
- Computer Lab
ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಶಾಲಾ ಬೋಧನೆ ಮತ್ತು ಕಲಿಕೆಯಲ್ಲಿ ತಂತ್ರಜ್ಞಾನ ಬಳಸುವ ಸಾಮರ್ಥ್ಯ ಬೆಳೆಸುವ ಸಲುವಾಗಿ ಕೆಪಿಎಸ್ ಶಾಲೆಗಳಿಗೆ ಲ್ಯಾಪ್ಟ್ಯಾಪ್, ಪ್ರೊಜೆಕ್ಟರ್ ಮತ್ತು ಪ್ರಿಂಟರ್/ಸ್ಕಾನರ್ ಸಾಮಗ್ರಿಗಳ ಒದಗಿಸಲಾಗಿದೆ.
- ವಿಜ್ಞಾನ ಮತ್ತು ಗಣಿತ ಕಿಟ್ : (Science Kit & Mathematics Kit):
ತರಗತಿ ಕೋಣೆಯಲ್ಲಿ ಗಣಿತ ಹಾಗೂ ವಿಜ್ಞಾನ ಚಟುವಟಿಕೆಗಳನ್ನು ನಿರ್ವಹಿಸಲು ಅಗತ್ಯವಿರುವ ಉಪಕರಣಗಳನ್ನು ಖರೀದಿಸಲು ಅನುದಾನ ನೀಡಲಾಗಿದೆ.
- ಗ್ರಂಥಾಲಯ (LIBRARY):
ತಮ್ಮ ಶಾಲೆಗಳಿಗೆ ಬಿಡುಗಡೆಯಾಗಿರುವ ಗ್ರಂಥಾಲಯದ ಅನುದಾನವನ್ನು ಶಾಲಾ ಎಸ್.ಡಿ.ಎಂ.ಸಿ ಯವರ ಅನುಮೋದನೆಯಂತೆ ಶಾಲಾ ಮುಖ್ಯ ಶಿಕ್ಷಕರು ಗ್ರಂಥಾಲಯಕ್ಕೆ ಅವಶ್ಯಕತೆ ಇರುವ ಪುಸ್ತಕಗಳನ್ನು ಖರೀದಿಸಿ ಗ್ರಂಥಾಲಯದ ಸ್ಟಾಕ್ ಬುಕ್ ನಲ್ಲಿ ದಾಖಲೆ ಇಡುವುದು. ಮಕ್ಕಳಿಗೆ ಪುಸ್ತಕವನ್ನು ವಿತರಿಸಿ ಮಕ್ಕಳಿಗೆ ಓದುವ ಹವ್ಯಾಸವನ್ನು ರೂಢಿಸಲು ತಿಳಿಸಿದೆ.
- INCERNATORS:
ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲು 6 ರಿಂದ 16 ವರ್ಷದ ಹೆಣ್ಣು ಮಕ್ಕಳಿಗೆ ಮಾಸಿಕ ಋತುಚಕ್ರಕ್ಕೆ ಅನುವಾಗಲು ಮತ್ತು ಅವರ ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಆದ್ಯತೆ ನೀಡಲು ಋತುಚಕ್ರ ಕಾಲದ ಬಳಕೆಗಾಗಿ ನ್ಯಾಪ್ ಕೀನ್ ಗಳನ್ನು ಒದಗಿಸಲು ಮತ್ತು ಅವುಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲು ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ.
- ವೃತ್ತಿ ಶಿಕ್ಷಣ (Vocational Education)
ಪ್ರೌಢ ಶಾಲೆ ಮತ್ತು ಪದವಿಪೂರ್ವ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 09 ರಿಂದ 12ನೇ ತರಗತಿವರೆಗಿನ ಮಕ್ಕಳಿಗೆ ವಿವಿಧ ಉದ್ಯೋಗ ಕೌಶಲ್ಯಗೊಳಿಸಲು ರಾಷ್ಟ್ರೀಯ ಕೌಶಲ್ಯ ಅರ್ಹತ ಚೌಕಟ್ಟು (NSQF) ಅಡಿ ವೃತ್ತಿ ಶಿಕ್ಷಣವನ್ನು ನೀಡಲಾಗುತ್ತಿದೆ.
- IT / ITEs
- Automobile
- Beauty and Wellness
- Retail
- Electronics and Hardware
- Apparels made-ups and home furnishing
- Agriculture
ಇದರ ಜೊತೆಗೆ ವೃತ್ತಿ ಶಿಕ್ಷಣ ಕೋಶ, ಪ್ರಾಜೆಕ್ಟ್ ಇನ್ನೋವೇಶನ್, ಸ್ಕಿಲ್ ಹಬ್ ಇನಿಷಿಯೇಟಿವ್ಸ್ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
- Career Guidance Cell
ಶಾಲಾ ವಿದ್ಯಾರ್ಥಿಗಳಿಗೆ ಅವರ ಔಪಚಾರಿಕ ಶಿಕ್ಷಣದೊಂದಿಗೆ, ವೃತ್ತಿ ಶಿಕ್ಷಣವನ್ನು ಮಿಲಿನಗೊಳಿಸಿ, ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಿಗೆ ಅವರ ಮುಂದಿನ ಶೈಕ್ಷಣಿಕ ಹಾಗೂ ವೃತ್ತಿ ಜೀವನದ ಯೋಜನೆಗಳನ್ನು ತಯಾರು ಮಾಡಲು ಅನುಕೂಲಿಸುವುದರೊಂದಿಗೆ ಅವರಿಗೆ ಅವರ ವೃತ್ತಿ ಯೋಜನೆಯ ಆಸಕ್ತಿದಾಯಕ ಕ್ಷೇತ್ರಗಳನ್ನು ಆಯ್ಕೆ ಮಾಡಿ ಅವುಗಳನ್ನೇ ವೃತ್ತಿಯನ್ನಾಗಿಸುವಲ್ಲಿ ಅವರಿಗೆ ಅನುಕೂಲಿಸುವುದು ವೃತ್ತಿ ಯೋಜನಾ ಕೋಶದ ಪ್ರಮುಖವಾದ ಕಾರ್ಯವಾಗಿದೆ. ಇದನ್ನು ಸ್ಥಾಪಿಸುವುದರ ಮುಖಾಂತರ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನವನ್ನು ನೀಡುವ ಉತ್ತಮ ಕಾರ್ಯ ಸಾಧಿಸಬಹುದೆಂದು ಪರಿಗಣಿಸಿ ಪ್ರತಿ ಶಾಲೆಯಲ್ಲಿ ವೃತ್ತಿ ಯೋಜನಾ ಘಟಕವನ್ನು ಸ್ಥಾಪಿಸುವುದು.
- Supplementary Teaching:
ಪ್ರಾಥಮಿಕ ಮತ್ತು ಪ್ರೌಢವಿಭಾಗ: ಪ್ರಾಥಮಿಕ ಮತ್ತು ಪ್ರೌಢವಿಭಾಗಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ವಿಷಯಾಧಾರಿತ ಇಂಗ್ಲೀಷ್, ವಿಜ್ಞಾನ ಮತ್ತು ಗಣಿತ ಅತಿಥಿ ಶಿಕ್ಷಕರನ್ನು 10 ತಿಂಗಳ ಅವಧಿಗೆ ಮಾಸಿಕ ರೂ 3000/- ದಂತೆ ನೇಮಕ ಮಾಡಿಕೊಳ್ಳುವುದು.
- ಇಂಗ್ಲೀಷ್ನ ವ್ಯಾಕರಣ ಹಾಗೂ ಕ್ಲಿಷ್ಟಕರ ಪಾಠಗಳನ್ನು ಬೋಧಿಸುವುದು.
- ವಿಜ್ಞಾನ ವಿಷಯದಲ್ಲಿ ಕ್ಲಿಷ್ಟಕರ ಪ್ರಯೋಗಗಳನ್ನು ಮತ್ತು ಸಮಸ್ಯೆಗಳಿಗೆ ಪರಿಹಾರ ನೀಡುವುದು.
- ಗಣಿತ ವಿಷಯದಲ್ಲಿ ಕ್ಲಿಷ್ಟಕರ ಸಮಸ್ಯೆಗಳನ್ನು ಬಿಡಿಸುವುದು. ವಿನೋದ ಗಣಿತದಲ್ಲಿ ಮಕ್ಕಳಿಗೆ ಆಸಕ್ತಿ ಮೂಡಿಸುವುದು ಹಾಗೂ ನವೋದಯ, ಆದರ್ಶವಿದ್ಯಾಲಯ, ಮುರಾರ್ಜಿಶಾಲೆ, NNMS & NTSE ಪ್ರವೇಶ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು.
|
ಕೆ ಪಿ ಎಸ್ ಶಾಲೆಗಳಿಗೆ ಬಿಡುಗಡೆಯಾದ ವಾರ್ಷಿಕ ನಿರ್ವಹಣಾ ವೆಚ್ಚ ( ಆಯುಕ್ತರ ಕಛೇರಿಯಿಂದ ಬಿಡುಗಡೆ)
|
|
ಕ್ರ ಸಂ
|
ವರ್ಷ
|
ಕೆ ಪಿ ಎಸ್ ಶಾಲೆಗಳ ಸಂಖ್ಯೆ
|
ಬಿಡುಗಡೆಯಾದ ಅನುದಾನ (ಲಕ್ಷಗಳಲ್ಲಿ)
|
ಬಿಡುಗಡೆಯಾದ ಒಟ್ಟು ಅನುದಾನ
|
ಅನುಷ್ಟಾನದ ವಿವರ
|
|
1
|
2018-19
|
176
|
5.00
|
880.00
|
1. ಕುಡಿಯುವ ನೀರು 2. ಶೌಚಾಲಯಗಳ ನಿರ್ವಹಣೆ 3. ವಿಜ್ಜಾನ ಪ್ರಯೋಗಾಲಯ, 4. ಗ್ರಂಥಾಲಯ 5. ಬೋಧನೋಪಕರಣಗಳು 6. ಕ್ರೀಡಾ ಸಾಮಗ್ರಿಗಳು 7. ಇಂಟರ್ ನೆಟ್ ಸಂಪರ್ಕ 8. ಸಿಸಿಟಿವಿ ಅಳವಡಿಕೆ 9. ಗೋಡೆಯ ಚಿತ್ರ 10. ಕೆ ಪಿ ಎಸ್ ನಾಮಪಲಕ 11. ವಿಜ್ಞಾನ ಕಲೆ ಮತ್ತು ಚಿತ್ರ ಕಲೆ ಪ್ರದರ್ಶನಗಳು 12. ಗಣಕ ಯಂತ್ರ /ಲ್ಯಾಪ್ ಟ್ಯಾಪ್ ಮತ್ತುಪ್ರಿಂಟರ್ ಖರೀದಿ. 13. ಪೂರ್ವ ಪ್ರಾಥಮಿಕ ತರಗತಿಗಳ ಬೋಧನೆಗೆ ತಾತ್ಕಾಲಿಕವಾಗಿ ಆಯ್ಕೆಯಾಗಿರುವ ಇಬ್ಬರು ಶಿಕ್ಷಕಿಯರಿಗೆ ಮಾಸಿಕ ವೇತನ ರೂ 10,000/- ರಂತೆ 10 ತಿಂಗಳಿಗೆ 2,00,000/- ಮತ್ತು ಒಬ್ಬ ಆಯಾರವರಿಗೆ (ಎಲ್ ಕೆ ಜಿ ಮತ್ತು ಯುಕೆಜಿ) ಮಾಸಿಕ ವೇತನ ರೂ 6250/-ರಂತೆ 10 ತಿಂಗಳಿಗೆ ರೂ 62,250/-ಗಳ ವೆಚ್ಚವನ್ನು ಭರಿಸುವುದು. 14. ಗರಿಷ್ಟ ರೂ 50000/- ನ್ನು ಬಳಸಿ ಪೂರ್ವಪ್ರಾಥಮಿಕ (ಯುಕೆಜಿ ಕೊಠಡಿ) ಸಜ್ಜುಗೊಳಿಸುವುದು.ಮತ್ತು ಅವಶ್ಯ ಸಾಧನಾ ಸಾಮಗ್ರಿಗಳನ್ನು ನಿಯಮಾನುಸಾರ ಖರೀದಿಸುವುದು. ಹಾಗೂ ಈ ಮೊತ್ತದಲ್ಲಿ ರೂ 10000/-ರ ಮಿತಿಯಲ್ಲಿ ಸ್ಥಳೀಯ ಚಿತ್ರಕಲಾ ಶಿಕ್ಷಕರನ್ನು ಬಳಸಿಕೊಂಡು ಕೊಠಡಿ ಅಲಂಕಾರ ಮಾಡುವುದು
|
|
2
|
2019-20
|
276
|
5.00
|
1380.00
|
|
3
|
2020-21
|
276
|
5.00
|
1380.00
|
|
4
|
2021-22
|
276
|
4.00
|
1104.00
|
|
5
|
2022-23
|
276
|
4.00
|
1104.00
|
|
6
|
2023-24
|
283
|
5.00
6.00
7.00
9.00
|
1857.00
|
|
|
2024-25
|
283
|
0-500
|
35
|
5.00
|
1857.00
|
|
501-1000
|
126
|
6.00
|
|
1001-1500
|
86
|
7.00
|
|
1500+
|
36
|
9.00
|