ಸಮಗ್ರ ಶಿಕ್ಷಣ ಕರ್ನಾಟಕ
ಸಮಗ್ರ ಶಿಕ್ಷಣ ಕರ್ನಾಟಕ

ಸಮಗ್ರ ಶಿಕ್ಷಣ ಕರ್ನಾಟಕ

ಶಾಲಾ ಶಿಕ್ಷಣ ಇಲಾಖೆ

×
ಅಭಿಪ್ರಾಯ
ಶಾಲಾ ಸುರಕ್ಷತೆ ಮತ್ತು ಭದ್ರತೆ

Home

ಪರಿಚಯ

           ಶಾಲೆಗಳಲ್ಲಿ ಸಮಗ್ರ ಸುರಕ್ಷತೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದಲ್ಲಿ ಆಗಾಗ್ಗೆ ಪ್ರವಾಹಗಳು, ಬರ ಪರಸ್ಥಿತಿಗಳು, ಚಂಡ ಮಾರುತದ ಉಲ್ಬಣ, ಶಾಖದ ಅಲೆಗಳು, ಸಿಡಿಲು, ರಸ್ತೆ ಅಪಘಾತಗಳು, ಮುಳುಗುವಿಕೆ ಘಟನೆಗಳು, ಹಾವು ಕಡಿತಗಳು ಮುಂತಾದ ಅನೇಕ ಅಪಾಯಗಳು ಸಂಭವಿಸುತ್ತವೆ. ತೀವ್ರ ಜಲ ಮತ್ತು ವಾಯು ಮಾಲಿನ್ಯವು ಸಂಬಂಧಿಸಿದ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ನೇರವಾಗಿ ಸಮುದಾಯದ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ಮಕ್ಕಳು ಅನೇಕ ಅಪಾಯಗಳಿಗೆ ಬಲಿಯಾಗುವುದನ್ನು ಗುರುತಿಸಲಾಗಿದೆ. ನಗರ ಪ್ರದೇಶಗಳಲ್ಲಿ ರಚನಾತ್ಮಕ ಸುರಕ್ಷತೆ, ಆಹಾರ ಮತ್ತು ನೀರಿನ ಸುರಕ್ಷತೆ, ಸೈಬರ್ ಬಳಕೆ ಭದ್ರತೆ, ಹಾಗೂ ದುರ್ಬಳಕೆ, ಕಿರುಕುಳಗಳು ಸಹ ಪ್ರಮುಖ ಸವಾಲುಗಳು ಮತ್ತು ಅಪಾಯಗಳಾಗಿವೆ. ಮಕ್ಕಳು ಮನೆಯಿಂದ ಶಾಲೆಗೆ ಪ್ರಯಾಣಿಸುವಾಗ ಮತ್ತು ಶಾಲೆಯಿಂದ ಮನೆಗೆ ಹಿಂದಿರುಗುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಅರಿವಿನ ಅಗತ್ಯವಿದೆ. ಆದುದರಿಂದ ಇಂತಹ ವಿಕೋಪಗಳಿಂದ ಮಕ್ಕಳನ್ನು ಸಂರಕ್ಷಿಸುವುದು ಮತ್ತು ಯಾವುದೇ ಅಪಾಯಗಳಿಗೆ ಒಳಗಾಗದಂತೆ ತಡೆಯುವ ಉದ್ದೇಶದಿಂದ ಶಾಲೆಗಳಲ್ಲಿ ಮಕ್ಕಳಿಗೆ  ಶಾಲಾ ಸುರಕ್ಷತೆ ಮತ್ತು ಭದ್ರತೆಯ ಕುರಿತು ಜಾಗೃತಿ ಮೂಡಿಸುವುದು ಶಿಕ್ಷಣ ಇಲಾಖೆಯ  ಪ್ರಧಾನ ಕಾಳಜಿಗಳಲ್ಲಿ ಒಂದಾಗಿದೆ.

 

       ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ವಿಪತ್ತುಗಳು ಮತ್ತು ಅಪಾಯದ ಸಮಯದಲ್ಲಿ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಉದ್ದೇಶದಿಂದ ಶಿಕ್ಷಣ ಇಲಾಖೆ ಮತ್ತು ಯುನಿಸೆಫ್ ಸಹಯೋಗದೊಂದಿಗೆ (comprehensive school safety CSS) 2023 ರಿಂದ ಪ್ರಾರಂಭಿಸಿದೆ. ರಾಜ್ಯದಲ್ಲಿ ಜಿಲ್ಲೆ, ತಾಲೂಕು, ಮತ್ತು ಶಾಲಾ ಹಂತದವರೆಗೆ ವಿವಿಧ ಹಂತಗಳಲ್ಲಿ ಈ ಕುರಿತು ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ.

 

ಮುಂದುವರೆದು ಶಾಲಾ ಶಿಕ್ಷಕರಿಗೆ ಶಾಲಾ ಸುರಕ್ಷತೆ ಕುರಿತು ತರಬೇತಿ ನೀಡಲು ರಾಜ್ಯ ಹಂತದಲ್ಲಿ ಯೂನಿಸೆಫ್ ಸಹಯೋಗದೊಂದಿಗೆ ಮೊದಲ ಹಂತದ ಅರಿವು ಮೂಡಿಸುವ ಕಾರ್ಯಾಗಾರವನ್ನು ದಿನಾಂಕ:05.08.2024 ರಿಂದ ದಿನಾಂಕ:07.08.2024 ರವರೆಗೆ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು, ಮುಂದುವರೆಗದ ಭಾಗವಾಗಿ  ದಿನಾಂಕ 26.11.2024 ರಿಂದ 27.11.2024 ರವರೆಗೆ ಎರಡು ದಿನಗಳ ಪುನಶ್ಚೇತನ ತರಬೇತಿಯನ್ನು ಬೆಂಗಳೂರಿನ Regional Institute of Co-operative Management, ಇಲ್ಲಿ ನಡೆಸಲಾಯಿತು. SSK ರಾಜ್ಯ ಕಚೇರಿಯಿಂದ ಸಮಿತಿ ರಚನೆ, ಸಮಿತಿಯ ಜವಾಬ್ದಾರಿ ನಿರ್ವಹಿಸುವಂತೆ ನೀಡಿದ್ದ ಸೂಚನೆಯಂತೆ ಜಿಲ್ಲಾ, ತಾಲೂಕು, ಕ್ಲಸ್ಟರ್‌ ಮತ್ತು ಶಾಲಾ ಹಂತಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿರುತ್ತಾರೆ. ಶಾಲಾ ಹಂತದಲ್ಲಿ ನಡೆಸಬೇಕಾದ  ಕಾರ್ಯಕ್ರಮಗಳ ಕ್ಯಾಲೆಂಡರ್‌ ಅನ್ನು ಒಳಗೊಂಡ ವಿವರವಾದ ಸುತ್ತೋಲೆಯನ್ನು ಕಳುಹಿಸಲಾಗಿದೆ. ನಡೆಸಿದ ಕಾರ್ಯಕ್ರಮಗಳ ಭಾವಚಿತ್ರಗಳು.