ಸಮಗ್ರ ಶಿಕ್ಷಣ ಕರ್ನಾಟಕ
ಸಮಗ್ರ ಶಿಕ್ಷಣ ಕರ್ನಾಟಕ

ಸಮಗ್ರ ಶಿಕ್ಷಣ ಕರ್ನಾಟಕ

ಶಾಲಾ ಶಿಕ್ಷಣ ಇಲಾಖೆ

×
ಅಭಿಪ್ರಾಯ
ವೀರಗಾಥಾ

Home

ಪರಿಚಯ

            ವೀರ್ ಗಾಥಾವನ್ನು 2021 ರಲ್ಲಿ ಶೌರ್ಯ ಪ್ರಶಸ್ತಿಗಳ ಪೋರ್ಟಲ್ (GAP) ಅಡಿಯಲ್ಲಿ ಸ್ಥಾಪಿಸಲಾಯಿತು, ವಿದ್ಯಾರ್ಥಿಗಳಲ್ಲಿ ಶೌರ್ಯ ಪ್ರಶಸ್ತಿ ಪುರಸ್ಕೃತರ ಶೌರ್ಯದ ಕಾರ್ಯಗಳ ವಿವರಗಳನ್ನು ಮತ್ತು ಧೈರ್ಯಶಾಲಿಗಳ ಜೀವನ ಕಥೆಗಳನ್ನು ಪ್ರಸಾರ ಮಾಡುವ ಮೂಲಕ ದೇಶಭಕ್ತಿಯ ಉತ್ಸಾಹ, ನಾಗರಿಕ ಪ್ರಜ್ಞೆಯ ಮೌಲ್ಯಗಳನ್ನು ಬೆಳೆಸಲಾಗುತ್ತದೆ. 2021-22ರಲ್ಲಿ ನಡೆಸಿದ ವೀರಗಾಥಾ 1.0ರಲ್ಲಿ 8 ಲಕ್ಷ ಮಂದಿ, 2022-23ರಲ್ಲಿ ನಡೆಸಿದ ವೀರಗಾಥಾ 2.0ರಲ್ಲಿ 19.5 ಲಕ್ಷ ಮಂದಿ ಹಾಗೂ 2023-24ರಲ್ಲಿ ನಡೆಸಿದ ವೀರಗಾಥಾ 3.0ರಲ್ಲಿ 1.37 ಕೋಟಿ ಮಂದಿ ಭಾಗವಹಿಸುವ ಮೂಲಕ ವೀರಗಾಥಾ ಅದ್ಭುತ ಯಶಸ್ಸನ್ನು ಕಂಡಿದೆ. ಗೌರವಾನ್ವಿತ ರಕ್ಷಣ ಮಂತ್ರಿ ಮತ್ತು ಗೌರವಾನ್ವಿತ ಶಿಕ್ಷಣ ಸಚಿವರು ವೀರಗಾಥಾ ಭಾರತದ ವಿದ್ಯಾರ್ಥಿಗಳಲ್ಲಿ ಕ್ರಾಂತಿಗೆ ನಾಂದಿಯಾಗಿದೆ ಎಂದು ಶ್ಲಾಘಿಸಿದ್ದಾರೆ.

ಪ್ರಸ್ತುತ ಸಾಲಿನ ವರದಿ

ವಿದ್ಯಾರ್ಥಿಗಳಲ್ಲಿ ಶೌರ್ಯ ಪ್ರಶಸ್ತಿ ವಿಜೇತ ಯೋಧರೊಂದಿಗೆ ಸಂವಾದದ ಕಾರ್ಯಕ್ರಮ ಏರ್ಪಡಿಸುವುದು, ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಸ್ಪರ್ಧಾ ಚಟುವಟಿಕೆಗಳನ್ನು  ದಿನಾಂಕ:16/09/2024 ರಿಂದ 30/10/2024ರ ವರೆಗೆ  ಆಯೋಜಿಸಿ ಆಯ್ದ ಪ್ರಸ್ತುತಿಗಳನ್ನು My Gov Portal ನಲ್ಲಿ ಆಫ್ಲೋಡ್‌ ಮಾಡಲಾಯಿತು ಜಿಲ್ಲಾ ಹಾಗೂ ರಾಜ್ಯ ಹಂತಗಳಲ್ಲಿ 4 ಮತ್ತು 8 ವಿಜೇತರೆನ್ನು ಆಯ್ಕೆಮಾಡಿ ರಾಷ್ಟ್ರಹಂತಕ್ಕೆ ಸಲ್ಲಿಸಲಾಯಿತು. ಈ ಕಾರ್ಯಕ್ರಮವನ್ನು DSERT ಮತ್ತು DIETಗಳ ವತಿಯಿಂದ ಆಯೋಜಿಸಿ ಯಶಸ್ವಿಗೊಳಿಸಲಾಯಿತು. ರಾಷ್ಟ್ರಹಂತದಲ್ಲಿ ವಿಜೇತರಾದ  8 ವಿದ್ಯಾರ್ಥಿಗಳು ವಿನೀಶ್‌ ಆಚಾರ್ಯ ಉಡುಪಿ, ಸೃಷ್ಟಿ ಎಸ್‌ ವಡ್ಡಾರ್‌ ಹುಬ್ಬಳ್ಳಿ, ಸಾತ್ವಿಕ್‌ ಭಟ್‌ ದಕ್ಷಿಣ ಕನ್ನಡ, ಸ್ನಿಗ್ಧ ಉಡುಪಿ, ಸಾಕ್ಷಿ ಕುಲಕರ್ಣಿ ಹುಬ್ಬಳ್ಳಿ, ರಮಿತಾ ಮೂರ್ತಿ ಬೆಂಗಳೂರು, ವರ್ಷ ಶೆಟ್ಟಿ ಬೆಂಗಳೂರು ಮತ್ತು ಆಫ್ಶೀನ್‌ ಡಿ. ಬಳ್ಳಾರಿ.