ಸಮಗ್ರ ಶಿಕ್ಷಣ ಕರ್ನಾಟಕ
ಸಮಗ್ರ ಶಿಕ್ಷಣ ಕರ್ನಾಟಕ

ಸಮಗ್ರ ಶಿಕ್ಷಣ ಕರ್ನಾಟಕ

ಶಾಲಾ ಶಿಕ್ಷಣ ಇಲಾಖೆ

×
ಅಭಿಪ್ರಾಯ
ಪರೀಕ್ಷ ಪೇ ಚರ್ಚಾ

Home

ಪರಿಚಯ

ಮಾನ್ಯ ಪ್ರಧಾನ ಮಂತ್ರಿಯವರು ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಪೋಷಕರೊಂದಿಗೆ ವಿದ್ಯಾರ್ಥಿಗಳಲ್ಲಿರುವ ”ಪರೀಕ್ಷೆಯ ಒತ್ತಡವನ್ನು” ಕಡಿಮೆ ಮಾಡುವ ಕುರಿತು ನೇರವಾಗಿ ಸಂವಹನ ಕಾರ್ಯಕ್ರಮವನ್ನು ಕಳೆದ 7 ವರ್ಷಗಳಿಂದ ನಡೆಸುತ್ತಿದ್ದು, ಪ್ರಸ್ತುತ 8ನೇ ಆವೃತ್ತಿಯ ಕಾರ್ಯಕ್ರಮವಾಗಿರುತ್ತದೆ

ಉದ್ದೇಶಗಳು:-

ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ನೇರ ಸಂವಹನ ನಡೆಸಿ, ಪರೀಕ್ಷಾ ಪದ್ದತಿ ಕುರಿತು ಅಮೂಲ್ಯವಾದ ಸಲಹೆಗಳನ್ನು ಪಡೆದು ಪರೀಕ್ಷಾ ಪದ್ಧತಿಯನ್ನು ಉತ್ತಮಪಡಿಸುವುದು.                                          ಡಿಸೆಂಬರ್‌ 14/12/2024 ರಿಂದ 14/01/2025ರ ವರೆಗೆ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ ಕಾಲೇಜುಗಳಲ್ಲಿ 6 ರಿಂದ 12ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಹಾಗೂ ಪೋಷಕರು https://innovateindia1.mygov.in/ 2025 ವೆಬ್ ಸೈಟ್ ಗೆ ಭೇಟಿ ನೀಡಿ 'ಪರೀಕ್ಷಾ ಪೆ ಚರ್ಚಾ" 2025 ತಮ್ಮ ಸ್ವವಿವರಗಳನ್ನು ನೀಡಿ, ಆನ್‌ಲೈನ್ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ. ಪ್ರಸಕ್ತ ಸಾಲಿನ ಸ್ಪರ್ಧೆಯು ಬಹು ಆಯ್ಕೆಯ ಪ್ರಶ್ನೆ (MCQ)ಗಳಾಗಿವೆ. ಭಾಗವಹಿಸುವವರೆಲ್ಲರಿಗೂ ಪ್ರಮಾಣ ಪತ್ರ   ಆನ್‌ಲೈನ್ ಮೂಲಕ ಫೆಬ್ರವರಿ ಮಾಹೆಯಲ್ಲಿ ದೊರೆತಿದೆ.

ಪರೀಕ್ಷಾ ಪೆ ಚರ್ಚೆಯ ಭಾಗವಾಗಿ ಜನವರಿ 12, 2025 (ವಿವೇಕಾನಂದರ ಜಯಂತಿಯನ್ನು ರಾಷ್ಟ್ರೀಯ ಯುವ ದಿನ) ರಿಂದ ಜನವರಿ 23, 2025 (ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ) ವರೆಗೆ ಶಾಲಾ ಮಟ್ಟದ ಆಕರ್ಷಕ ಚಟುವಟಿಕೆಗಳ ಸರಣಿಯೊಂದಿಗೆ ಸಮಗ್ರ ಅಭಿವೃದ್ಧಿ ಮತ್ತು ಪರೀಕ್ಷೆಗಳನ್ನು ಉತ್ಸವವಾಗಿ ಆಚರಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಗುರಿಯೊಂದಿಗೆ ಸ್ಥಳೀಯ ಕ್ರೀಡಾಕೂಟಗಳು, ಮ್ಯಾರಥಾನ್ ಓಟಗಳು, ಯೋಗ ಮತ್ತು ಧ್ಯಾನ, ಕವನ / ಹಾಡು / ಪ್ರದರ್ಶನಗಳು  ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.

ಪರೀಕ್ಷೆ ಪೇ ಚರ್ಚಾ (PPC) 2025 ದಿನಾಂಕ: 14/12/2024 ರಿಂದ 14/01/2025 ರ ವರೆಗೆ  ಆನ್‌ ಲೈನ್‌ ನಲ್ಲಿ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಕರ್ನಾಟಕದಿಂದ  ಒಟ್ಟು 207561 ವಿದ್ಯಾರ್ಥಿಗಳು, ಒಟ್ಟು 25141 ಶಿಕ್ಷಕರು, ಒಟ್ಟು 9044 ಪೋಷಕ ನೊಂದಣಿ ಮಾಡಲಾಯಿತು. ರಾಜ್ಯದಿಂದ ಆಯ್ಕೆಯಾದ ಒಬ್ಬ ವಿದ್ಯಾರ್ಥಿಯೊಂದಿಗೆ ಒಬ್ಬರು ಮಾರ್ಗದರ್ಶಿ ಶಿಕ್ಷಕರನ್ನು ಮುಂಬೈನಲ್ಲಿ ನಡೆದ SESSION 05ರ ಚಿತ್ರೀಕರಣಕ್ಕೆ ಕಳುಹಿಸಲಾಯಿತ್ತು.

10/02/2025ರಂದು ಮಾನ್ಯ ಪ್ರಧಾನ ಮಂತ್ರಿರವರು ಸುಂದರ್ ನರ್ಸರಿಯಲ್ಲಿ ಪ್ರತಿ ರಾಜ್ಯದಿಂದ ಒಬ್ಬರಂತೆ ಒಟ್ಟು 36 ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಮುಂದುವರೆದ ಭಾಗವಾಗಿ ವಿವಿಧ ಕ್ಷೇತ್ರಗಳ ಪ್ರಸಿದ್ಧ ವ್ಯಕ್ತಿಗಳಿಂದ ಮಾರ್ಗದರ್ಶನ ನೀಡುವ ಕಾರ್ಯಕ್ರಮದ ವಿವರ ಕೆಳಗಿನಂತಿವೆ.  

ಈ ಎಲ್ಲಾ ಮಾರ್ಗದರ್ಶನದ ನೇರ ಪ್ರಸಾರವು ಡಿ.ಡಿ, ಎ.ಐ.ಆರ್‌ ಎಫ್ಎಂ/ವಿಡಿಯೋಗಳನ್ನು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ವೀಕ್ಷಿಸಲು ಸುತ್ತೋಲೆಯನ್ನು ನೀಡಿ ಕ್ರಮವಹಿಸಲಾಯಿತು.