ಸಮಗ್ರ ಶಿಕ್ಷಣ ಕರ್ನಾಟಕ
ಸಮಗ್ರ ಶಿಕ್ಷಣ ಕರ್ನಾಟಕ

ಸಮಗ್ರ ಶಿಕ್ಷಣ ಕರ್ನಾಟಕ

ಶಾಲಾ ಶಿಕ್ಷಣ ಇಲಾಖೆ

×
ಅಭಿಪ್ರಾಯ
ಆಕ್ಸೆಸ್

Home

ಕಾರ್ಯಕ್ರಮದ ಹೆಸರು

ಶಾಲಾನುದಾನ:

ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಶಾಲಾ ಅನುದಾನವನ್ನು ವಾರ್ಷಿಕವಾಗಿ ದಾಖಲಾತಿ ಆಧಾರದ ಮೇಲೆ ಬಿಡುಗಡೆ ಮಾಡಲಾಗುತ್ತದೆ. ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ಮಂಜೂರಾದ ಶಾಲಾನುದಾನದಲ್ಲಿ ಈ ಕೆಳಕಂಡ ಉದ್ದೇಶಗಳಿಗೆ ನಿಯಮಗಳನ್ನು ಅನುಸರಿಸಿ ವಿನಿಯೋಗಿಸುವುದು.

ಬಿಡುಗಡೆಗೊಳಿಸಲಾದ ಶಾಲಾನುದಾನದ ಶೇಕಡಾ 10 ರಷ್ಟು ಮೊತ್ತವನ್ನು ಶಾಲಾ ಸ್ವಚ್ಚತಾ ಕಾರ್ಯಚಟುವಟಿಕೆಗಳಿಗೆ ಕಡ್ಡಾಯವಾಗಿ ಬಳಸಿಕೊಳ್ಳತಕ್ಕದ್ದು.

ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ನಿಗದಿಪಡಿಸಿರುವ ಘಟಕ ವೆಚ್ಚ – AWP&B 2024-25.

ಕ್ರ. ಸಂ.

ವಿದ್ಯಾರ್ಥಿಗಳ ಸಂಖ್ಯೆ

ಘಟಕ ವೆಚ್ಚ

1

 

1 ರಿಂದ 30 ವಿದ್ಯಾರ್ಥಿಗಳಿರುವ ಶಾಲೆಗಳು

10,000/-

2

31 ರಿಂದ 100 ವಿದ್ಯಾರ್ಥಿಗಳಿರುವ ಶಾಲೆಗಳು

25,000/-

3

101 ರಿಂದ 250 ವಿದ್ಯಾರ್ಥಿಗಳಿರುವ ಶಾಲೆಗಳು

50,000/-

4

251 ರಿಂದ 1000 ವಿದ್ಯಾರ್ಥಿಗಳಿರುವ ಶಾಲೆಗಳು

75,000/-

5

1000 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳು

1,00,000/-

 

ಶಾಲೆಗಳ ಉನ್ನತೀಕರಣ:

‘ರಾಜ್ಯ ದಾಖಲಾತಿ ಹಕ್ಕುಗಳ’ಪ್ರಕಾರ, ಶಾಲೆಗೆ ಹೋಗುವ ಎಲ್ಲಾ ಮಕ್ಕಳಿಗೆ ಪ್ರವೇಶವನ್ನು ಒದಗಿಸಲು ಈ ಕೆಳಗಿನ ನೀತಿ/ನಿಯಮಗಳನ್ನು ರೂಪಿಸಲಾಗಿದೆ. –ಗೆಜೆಟ್ ಅಧಿಸೂಚನೆ ಸಂಖ್ಯೆ: ED 77 YOYOKA 2010 ಬೆಂಗಳೂರು ದಿನಾಂಕ: 28.04.2012.

ಅರ್ಹ ವಸತಿ ಪ್ರದೇಶಗಳಲ್ಲಿ ಶಾಲೆಗಳಿಗೆ 100 ಪ್ರತಿಶತ ಪ್ರವೇಶವನ್ನು ಒದಗಿಸುವುದು ಇಲ್ಲಿನ ಉದ್ದೇಶವಾಗಿದೆ. ಜನಸಂಖ್ಯೆ ಮತ್ತು ವಸತಿ ಪ್ರದೇಶಗಳಲ್ಲಿ ಶಾಲೆಗಳನ್ನು ಪ್ರವೇಶಿಸುವಂತೆ ಮಾಡುವಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಲಾಗಿದೆ.

ಮಕ್ಕಳು ಶಾಲೆಯಿಂದ ಹೊರಗುಳಿಯುವ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಎಲ್ಲಾ ಹಂತಗಳಲ್ಲಿ ಶಿಕ್ಷಣಕ್ಕೆ ಸಾರ್ವತ್ರಿಕ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು, ಪೂರ್ವ ಪ್ರಾಥಮಿಕದಿಂದ 12 ನೇ ತರಗತಿಯವರೆಗೆ ಮೂಲಸೌಕರ್ಯಗಳಿಗೆ ಬೆಂಬಲವನ್ನು ಒದಗಿಸಲಾಗುವುದು (NEP ಪ್ಯಾರಾ 1.4, 1.6, 3.2 ಮತ್ತು 8.8)

GOI-MOEಯ ಈ ಕೆಳಗಿನ ಮಾನದಂಡಗಳನ್ವಯ ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ.

ಹಿರಿಯ ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗಳಿಗೆ ಉನ್ನತೀಕರಣದ ಮಾನದಂಡಗಳು

ಪ್ರೌಢ ಶಾಲೆಯಿಂದ ಪದವಿ ಪೂರ್ವ  ಶಾಲೆಯಾಗಿ ಉನ್ನತೀಕರಿಸುವ ಮಾನದಂಡಗಳು

·       ಹಿರಿಯ ಪ್ರಾಥಮಿಕ ಶಾಲೆಯು 8ನೇ ತರಗತಿಯನ್ನು ಹೊಂದಿರಬೇಕು.

·       ಪ್ರೌಢಶಾಲೆಯಾಗಿ ಮೇಲ್ದರ್ಜೆಗೇರಿಸಲು ಉದ್ದೇಶಿಸಲಾದ ಶಾಲೆಯಿಂದ 5 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ (ಸರ್ಕಾರಿ/ಅನುದಾನಿತ) ಪ್ರೌಢಶಾಲೆ ಇರಬಾರದು.

·       ಉನ್ನತೀಕರಣಕ್ಕಾಗಿ ಪ್ರಸ್ತಾವನೆಯನ್ನು ಸಲ್ಲಿಸುವ ಸಮಯದಲ್ಲಿ 8 ನೇ ತರಗತಿಯಲ್ಲಿ ಶಾಲೆಯಲ್ಲಿ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ 70 ಆಗಿರಬೇಕು.

·       ಗುಡ್ಡಗಾಡು ಪ್ರದೇಶ ಅಥವಾ ಅಂತರರಾಷ್ಟ್ರೀಯ ಗಡಿ ಪ್ರದೇಶ ಮತ್ತು ಇತರ ವಿಶೇಷ ಸಂದರ್ಭಗಳಲ್ಲಿ ದಾಖಲಾತಿಯನ್ನು 50 ಕ್ಕೆ ಸೀಮಿತಗೊಳಿಸಬಹುದು.

·       ಪ್ರೌಢ ಶಾಲೆಯು 10ನೇ ತರಗತಿಯನ್ನು ಹೊಂದಿರಬೇಕು.

·       ಹಿರಿಯ ಮಾಧ್ಯಮಿಕ ಶಾಲೆಯಾಗಿ ಮೇಲ್ದರ್ಜೆಗೇರಿಸಲು ಉದ್ದೇಶಿಸಲಾದ ಶಾಲೆಯಿಂದ 7 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ (ಸರ್ಕಾರಿ/ಅನುದಾನಿತ) ಪ್ರೌಢಶಾಲೆ ಇರಬಾರದು.

·       ಉನ್ನತೀಕರಣಕ್ಕಾಗಿ ಪ್ರಸ್ತಾವನೆಯನ್ನು ಸಲ್ಲಿಸುವ ಸಮಯದಲ್ಲಿ 10 ನೇ ತರಗತಿಯಲ್ಲಿ ಶಾಲೆಯಲ್ಲಿ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ 60 ಆಗಿರಬೇಕು.

ಸಾರಿಗೆ/ಬೆಂಗಾವಲು ಭತ್ಯೆ:

ಅನುದಾನದ ವಿವರ: ಅರ್ಹ ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ರೂ. 600/-ರಂತೆ 10 ತಿಂಗಳಿಗೆ ರೂ 6000/- ಸಾರಿಗೆ ಭತ್ಯೆ ನೀಡಲಾಗುತ್ತಿದೆ - AWP&B 2024-25. 

ಸರ್ಕಾರಿ ಅನುದಾನಿತ ಶಾಲೆಗಳಿಗೆ (1-8ನೇ ತರಗತಿ) ಉಚಿತ ಪಠ್ಯಪುಸ್ತಕ:

ಕೇಂದ್ರ ಸರ್ಕಾರದ ಯೋಜನೆಯಡಿ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಕರ್ನಾಟಕ ಪಠ್ಯಪುಸ್ತಕ ಸಂಘದ ವತಿಯಿಂದ ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ಉಚಿತ ಪಠ್ಯಪುಸ್ತಕ ಸರಬರಾಜು ಮಾಡಲಾಗುತ್ತಿದೆ.