ಸಮಗ್ರ ಶಿಕ್ಷಣ ಕರ್ನಾಟಕ
ಸಮಗ್ರ ಶಿಕ್ಷಣ ಕರ್ನಾಟಕ

ಸಮಗ್ರ ಶಿಕ್ಷಣ ಕರ್ನಾಟಕ

ಶಾಲಾ ಶಿಕ್ಷಣ ಇಲಾಖೆ

×
ಅಭಿಪ್ರಾಯ
ಗ್ರಂಥಾಲಯ

Home

ಹಿನ್ನಲೆ:

         

ಶಾಲಾ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಯೇ ಶಿಕ್ಷಣದ ದ್ಯೇಯವಾಗಿದ್ದು, ಪಠ್ಯ ಪುಸ್ತಕಗಳ ಜ್ಞಾನದ ಜೊತೆಗೆ, ಬುದ್ದಿ ಮತ್ತು ಮೌಲ್ಯದ ವಿಕಸನಕ್ಕಾಗಿ ಇತರೇ ಪುಸ್ತಕಗಳನ್ನು ಓದುವುದು ಅವಶ್ಯಕವಾಗಿರುತ್ತದೆ. ಪುಸ್ತಕ ಓದುವ ಹವ್ಯಾಸವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವಲ್ಲಿ ಶಾಲಾ ಗ್ರಂಥಾಲಯಗಳು ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತವೆ. ಈ ಹಿನ್ನಲೆಯಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಪ್ರತಿ ವರ್ಷ PAB ಅನುಮೋದಿತ ಚಟುವಟಿಕೆಗಳಡಿಯಲ್ಲಿ ಶಾಲಾ ಗ್ರಂಥಾಲಯಗಳಿಗೆ ಪುಸ್ತಕಗಳನ್ನುಕೊಳ್ಳಲು ಗ್ರಂಥಾಲಯ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ.

 

ಉದ್ದೇಶ:

 

ಗ್ರಂಥಾಲಯಗಳು ಜ್ಞಾನಭಂಡಾರ, ಅಷ್ಟೇ ಅಲ್ಲ ವಿದ್ಯಾರ್ಥಿಗಳ ಸಂಪೂರ್ಣ ಮನೋವಿಕಾಸಕ್ಕೆ ಪೂರಕವಾಗಿರುತ್ತವೆ. ಮತ್ತು ಪಠ್ಯ ಪೂರಕ ಓದಿಗೂ ಗ್ರಂಥಾಲಯಗಳು ನೆರವಾಗಿವೆ. ಈ ಎಲ್ಲಾ ಅಂಶಗಳ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಿ ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕೆಂಬುದು ಸಮಗ್ರ ಶಿಕ್ಷಣ ಕರ್ನಾಟಕದ ಆಶಯವಾಗಿದೆ. ಗ್ರಂಥಾಲಯವಿಲ್ಲದ ಶಾಲೆಗಳಲ್ಲಿ ಓದುವ ಮೂಲೆಗಳನ್ನು (Reading Corner) ಸ್ಥಾಪಿಸಲು ಉದ್ದೇಶಿಸಲಾಗಿದೆ.

 

ವ್ಯಾಪ್ತಿ: 

 

ಕೇಂದ್ರ ಶಿಕ್ಷಣ ಮಂತ್ರಾಲಯದಿಂದ (MoE) 2019 ರಲ್ಲಿ ಹೊರಡಿಸಲಾಗಿರುವ ಗ್ರಂಥಾಲಯ ಮಾರ್ಗಸೂಚಿಯು ಗ್ರಂಥಾಲಯ ಚಟುವಟಿಕೆ ಸಂಬಂಧ ವಿವರವಾದ ನಿರ್ದೇಶನ ಮತ್ತು ಮಾರ್ಗದರ್ಶನಗಳನ್ನು ನೀಡಿದ್ದು, ಅದು….”ಓದಿನ ಮಹತ್ವ, ಗ್ರಂಥಾಲಯಗಳ ಅವಶ್ಯಕತೆ, ಹೊಸ ಶಿಕ್ಷಣ ನೀತಿ (NEP-2020) ಯಲ್ಲಿರುವ ಗ್ರಂಥಾಲಯ ಸಂಬಂಧದ ಅವಕಾಶಗಳು, ಗ್ರಂಥಾಲಯ ಪುಸ್ತಕಗಳನ್ನು ಗುರುತಿಸುವ, ಅಚ್ಚು ಹಾಕಿಸುವ ಮತ್ತು ವಿತರಿಸುವ ಸಂಬಂಧ ಅನುಸರಿಸಬೇಕಾದ ಪ್ರಕ್ರಿಯೆಗಳು, ಗ್ರಂಥಾಲಯ ಸ್ಥಾಪನೆ ಮತ್ತು ನಿರ್ವಹಣೆಯನ್ನು ಮಾಡುವ  ವಿಧಾನ, ಅನುಕೂಲಕರ ಗ್ರಂಥಾಲಯ ಪರಿಸರವನ್ನು ನಿರ್ಮಿಸುವ ಬಗೆ, ಗ್ರಂಥಾಲಯವನ್ನು ಕಲಿಕಾ ಕೇಂದ್ರವನ್ನಾಗಿಸುವ ವಿಧಾನ, ಪುಸ್ತಕಗಳ ಪ್ರದರ್ಶನ ಮತ್ತು ನಿರ್ವಹಿಸುವ ಕಲೆ, ಗ್ರಂಥಾಲಯದಿಂದ ನಿರ್ವಹಿಸಬಹುದಾದ ಇನ್ನಿತರೆ ಚಟುವಟಿಕೆಗಳು, ವಿದ್ಯಾರ್ಥಿಗಳಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸುವುದು, ಓದುವ ಮೂಲೆಗಳ ಸ್ಥಾಪನೆ, ಶಿಕ್ಷಕರ ಬುನಾದಿ ಸಾಮರ್ಥ್ಯವನ್ನು ವೃದ್ದಿಪಡಿಸುವುದು ಮತ್ತು ಭಾಷಾ ಹಬ್ಬಗಳನ್ನು ನಡೆಸುವುದು”, ಈ ಎಲ್ಲಾ ಅಂಶಗಳ ಬಗೆಗೆ ವಿವರವನ್ನು ಹೊಂದಿದೆ.

 

 

ಅನುದಾನ ಲಭ್ಯತೆ:

 

ಪುಸ್ತಕಗಳನ್ನು ಖರೀದಿಸುವ  ಮತ್ತು ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ವೃದ್ದಿಗೊಳಿಸುವ ಸಂಬಂಧ ಶಿಕ್ಷಣ ಮಂತ್ರಾಲಯ, ನವದೆಹಲಿ, ಭಾರತ ಸರ್ಕಾರ ಇವರು ಬಿಡುಗಡೆ ಮಾಡಿರುವ  ಗ್ರಂಥಾಲಯ ಮಾರ್ಗಸೂಚಿಯಂತೆ ಆಯಾ ರಾಜ್ಯಗಳ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ರಚಿಸಿರುವ ಆಯ್ಕೆ ಸಮಿತಿಯ ತೀರ್ಮಾನದಂತೆ ವಿದ್ಯಾರ್ಥಿಗಳ ತರಗತಿ / ಹಂತಗಳಿಗೆ ಸಂಬಂಧಿಸಿದಂತೆ, ವಯೋಮಾನಕ್ಕನುಗುಣವಾಗಿ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಖರೀದಿ ಮಾಡಬೇಕಾಗಿರುತ್ತದೆ.

 

ಕರ್ನಾಟಕ ರಾಜ್ಯದಲ್ಲಿ ಗ್ರಂಥಾಲಯ ಮಾರ್ಗಸೂಚಿಯನ್ವಯ ಶಾಲಾ ಗ‍್ರಂಥಾಲಯಗಳಿಗೆ ಪುಸ್ತಕಗಳನ್ನು ಒದಗಿಸುವ ಬಗ್ಗೆ ಸಮಗ್ರ ಶಿಕ್ಷಣ ಕರ್ನಾಟಕವು ಕಾರ್ಯ ಪ್ರವೃತ್ತವಾಗಿದೆ. ಪ್ರಾಥಮಿಕ ಶಾಲೆಗಳಿಗೆ ರೂ.5,000/-, ಹಿರಿಯ ಪ್ರಾಥಮಿಕ ಶಾಲೆಗಳಿಗೆ ರೂ.13,000/-, ಪ್ರೌಢ ಶಾಲೆಗಳಿಗೆ ರೂ.15,000/-ಮತ್ತು ಸೀನಿಯರ್ ಸೆಕೆಂಡರಿ ಶಾಲೆಗಳಿಗೆ ರೂ.20,000/- ದಂತೆ ಗ್ರಂಥಾಲಯ ಪುಸ್ತಕಗಳ ಖರೀದಿಗಾಗಿ ಅನುದಾನ ನಿಗಧಿಪಡಿಸಿ ಬಿಡುಗಡೆಮಾಡಲಾಗುತ್ತದೆ. ಸದರಿ ಅನುದಾನದ ವತಿಯಿಂದ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿವತಿಯಿಂದ DSERT websiteನಲ್ಲಿ ಪ್ರಕಟಿಸಲ್ಪಟ್ಟಿರುವ ಪುಸ್ತಕಗಳ ಪಟ್ಟಿಯಿಂದ ತಮ್ಮ ಶಾಲೆಗೆ ಅಗತ್ಯವಿರುವ ಪುಸ್ತಕಗಳನ್ನು ನಿಯಮಾನುಸಾರ ಖರೀದಿಸಲು ನಿರ್ದೇಶಿಸಲಾಗಿದೆ.

 

2019-20 ರಲ್ಲಿ ಪ್ರಾಯೋಗಿಕ (Pilot) ಕಾರ್ಯಕ್ರಮವಾಗಿ ರಾಜ್ಯದ ಬೆಂಗಳೂರು ದಕ್ಷಿಣ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ಶಾಲಾ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಪೂರೈಸಲಾಗಿದೆ.

 

2020-21 ನೇ ಸಾಲಿನಲ್ಲಿ ಗ್ರಂಥಾಲಯ ಚಟುವಟಿಕೆ ಅನುಷ್ಠಾನದ ಸಂಬಂಧ 01 ರಿಂದ 05 ನೇ ತರಗತಿ ಹೊಂದಿರುವ 18264 ಪ್ರಾಥಮಿಕ ಶಾಲೆಗಳಿಗೆ FLN ಚಟುವಟಿಕೆಗಳಿಗೆ ಅನುಕೂಲಿಸುವಂತೆ ಪುಸ್ತಕ ಖರೀದಿಸಲು ಒಟ್ಟು ರೂ.913.2 ಲಕ್ಷ ಅನುದಾನವನ್ನು ಪಿ.ಎ.ಬಿ ವತಿಯಿಂದ ಬಿಡುಗಡೆ ಮಾಡಲಾಗಿದೆ.

 

2021-22 ನೇ ಸಾಲಿನಲ್ಲಿ ಗ್ರಂಥಾಲಯ ಚಟುವಟಿಕೆ ಅನುಷ್ಠಾನದ 2483 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ರೂ.124.15 ಲಕ್ಷವನ್ನು, 6391 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ರೂ.830.83 ಲಕ್ಷವನ್ನು ಮತ್ತು 134 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ರೂ.13.4 ಲಕ್ಷವನ್ನು ಅನುಕೂಲಿಸುವಂತೆ ಪುಸ್ತಕ ಖರೀದಿಸಲು ಒಟ್ಟು ರೂ.968.38 ಲಕ್ಷ ಅನುದಾನವನ್ನು ಪಿ.ಎ.ಬಿ ವತಿಯಿಂದ ಬಿಡುಗಡೆ ಮಾಡಲಾಗಿದೆ.

 

2022-23 ನೇ ಸಾಲಿನಲ್ಲಿ ರಾಜ್ಯದ 2483 ಪ್ರಾಥಮಿಕ ಶಾಲೆಗಳಿಗೆ ಪುಸ್ತಕಗಳನ್ನು ಖರೀದಿಸಲು ಗ್ರಂಥಾಲಯ ಅನುದಾನವಾಗಿ ಒಟ್ಟು ರೂ.124.15 ಲಕ್ಷಗಳನ್ನು ಪಿ.ಎ.ಬಿ ವತಿಯಿಂದ ಬಿಡುಗಡೆ ಮಾಡಲಾಗಿದೆ.

 

2023-24 ನೇ ಸಾಲಿನಲ್ಲಿ ರಾಜ್ಯದ 14049 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ರೂ.702.45 ಲಕ್ಷವನ್ನು, 8344 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ರೂ.1001.28 ಲಕ್ಷವನ್ನು 1830 ಸರ್ಕಾರಿ ಪ್ರೌಢ ಶಾಲೆಗಳಿಗೆ ರೂ.274.5ಲಕ್ಷವನ್ನು, 48 ಆದರ್ಶ ವಿದ್ಯಾಲಯ ಶಾಲೆಗಳಿಗೆ ರೂ.8.16 ಲಕ್ಷವನ್ನು ಮತ್ತು 76 ಕರ್ನಾಟಕ ಪಬ್ಲಿಕ್‌ ಶಾಲೆಗಳಿಗೆ ರೂ.13.68 ಲಕ್ಷವನ್ನು  ಪುಸ್ತಕಗಳನ್ನು ಖರೀದಿಸಲು ಗ್ರಂಥಾಲಯ ಅನುದಾನವಾಗಿ ಒಟ್ಟು ರೂ.2000.00 ಲಕ್ಷಗಳನ್ನು ರಾಜ್ಯ ಬಜೆಟ್ ವತಿಯಿಂದ ಬಿಡುಗಡೆ ಮಾಡಲಾಗಿದೆ. ‌

 

2023-24 ನೇ ಸಾಲಿನಲ್ಲಿ ರಾಜ್ಯದ  13548 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ರೂ.880.62 ಲಕ್ಷವನ್ನು ಮತ್ತು 1178 ಸರ್ಕಾರಿ ಪ್ರೌಢ ಶಾಲೆಗಳಿಗೆ ರೂ.176.7 ಲಕ್ಷವನ್ನು ಮತ್ತು 713  ಸೀನಿಯರ್‌ ಸೆಕೆಂಡರಿ ಶಾಲೆಗಳಿಗೆ ರೂ.142.6 ಲಕ್ಷವನ್ನು, ಗ್ರಂಥಾಲಯ ಅನುದಾನವಾಗಿ ಪುಸ್ತಕಗಳನ್ನು ಖರೀದಿಸಲು ಒಟ್ಟು ರೂ.1199.92 ಲಕ್ಷಗಳನ್ನು ಪಿ.ಎ.ಬಿ ವತಿಯಿಂದ ಬಿಡುಗಡೆ ಮಾಡಲಾಗಿದೆ.

 

Sl.No

ವರ್ಷ

ಶಾಲಾ ವಿಧ

ಭೌತಿಕ

ಘಟಕ ವೆಚ್ಚ

ಆರ್ಥಿಕ

1.

2020-21 (ಪಿ.ಎ.ಬಿ ಅನುದಾನ)

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗಳು

18264

0.05

913.2

Total

18264

 

913.2

2

2021-22 (ಪಿ.ಎ.ಬಿ ಅನುದಾನ)

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು

2483

0.05

124.15

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು (1st  to 8th Std.)

6391

0.13

830.83

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು (6th to 8th Std.)

134

0.10

13.4

Total

9008

 

968.38

3

2022-23 (ಪಿ.ಎ.ಬಿ ಅನುದಾನ)

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು

2483

0.05

124.15

Total

2483

 

124.12

4

 

2023-24 (ರಾಜ್ಯ ಬಜೆಟ್‌ ಅನುದಾನ)

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು

14049

0.05

702.45

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು

8344

0.12

1001.28

ಸರ್ಕಾರಿ ಪ್ರೌಢ ಶಾಲೆಗಳು

1830

0.15

274.5

ಆದರ್ಶ ವಿದ್ಯಾಲಯಗಳು

48

0.17

8.16

ಕರ್ನಾಟಕ ಪಬ್ಲಿಕ್‌ ಶಾಲೆಗಳು

76

0.18

13.61

Total

24347

 

2000.00

5

2023-24 (ಪಿ.ಎ.ಬಿ ಅನುದಾನ)

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು

13548

0.065

880.62

ಸರ್ಕಾರಿ ಪ್ರೌಢ ಶಾಲೆಗಳು

1178

0.15

176.7

ಸರ್ಕಾರಿ ಸೀನಿಯರ್ ಸೆಕೆಂಡರಿ ಶಾಲೆಗಳು

713

0.20

142.6

ಒಟ್ಟು

15439

 

1199.92

Grand Total

 

 

5205.62

                                                                                                                        (ಲಕ್ಷಗಳಲ್ಲಿ)

 

 

ಶಾಲಾ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಖರೀದಿಸುವುದರ ಜೊತೆಗೆ ವಿದ್ಯಾರ್ಥಿಗಳ ಭಾಷಾ ಕೌಶಲ್ಯಗಳ ಅಭಿವೃದ್ದಿ ಮತ್ತು ಸಾಮಾನ್ಯ ಜ್ಞಾನ ವೃದ್ದಿಗೆ ಪೂರಕವಾಗಿ ಸ್ಥಳೀಯ, ಜಿಲ್ಲಾ ಮತ್ತು ರಾಜ್ಯ ಮಟ್ಟದ ವೃತ್ತ ಪತ್ರಿಕೆ, ಪುರವಣಿ (magazine) ಮತ್ತು ನಿಯತಕಾಲಿಕಗಳನ್ನು ಸಹ ಶಾಲೆಯ ಗ್ರಂಥಾಲಯ ನಿಧಿಯಿಂದ ಖರೀದಿಸಲು ಸೂಚಿಸಲಾಗಿರುತ್ತದೆ.

 

ರಾಜ್ಯದ ಗ್ರಂಥಾಲಯಗಳಿಗೆ ಉತ್ತಮ ಪುಸ್ತಕಗಳನ್ನು ಒದಗಿಸುವ ಸಂಬಂಧ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯ ವತಿಯಿಂದ ನುರಿತ ಸಂಪನ್ಮೂಲ ವ್ಯಕ್ತಿಗಳ ನೇತೃತ್ವದಲ್ಲಿ ನಡೆದ ಕಾರ್ಯಾಗಾರಗಳ ಮೂಲಕ ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಮತ್ತು ಸೀನಿಯರ್‌ ಸೆಕೆಂಡರಿ ಶಾಲೆಗಳಿಗೆ ಆಯಾ ಮಕ್ಕಳ ವಯೋಮಾನಕ್ಕನುಗುಣವಾಗಿ ಸೂಕ್ತ ಪುಸ್ತಕಗಳನ್ನು ಅಯ್ಕೆ ಮಾಡಿದ್ದು, ಸದರಿ ಪುಸ್ತಕಗಳ ಪಟ್ಟಿಯನ್ನು ಪ್ರಕಾಶಕರ ವಿವರದೊಂದಿಗೆ ಡಿ.ಎಸ್.ಇ.ಆರ್.ಟಿ  ವೆಬ್‌ ಸೈಟ್‌ (https://dsert.karnataka.gov.in) ನಲ್ಲಿ ಅಳವಡಿಸಲಾಗಿದ್ದು, ಗ್ರಂಥಾಲಯ ಅನುದಾನ ಪಡೆದ ಶಾಲೆಗಳು ಸದರಿ ಪಟ್ಟಿಯಿಂದ ತಮ್ಮ ಶಾಲೆಗೆ ಅಗತ್ಯವಿರುವ ಪುಸ್ತಕಗಳನ್ನು ಸಂಬಂಧಿಸಿದ ಪ್ರಕಾಶಕರ ಮೂಲಕ ಅಥವಾ ನೇರವಾಗಿ ಅಥವಾ  ತೆರೆದ ಮಾರುಕಟ್ಟೆಯಲ್ಲಿ ನಿಯಮಾನುಸಾರ ಖರೀದಿ ಮಾಡಬೇಕೆಂದು ಸುತ್ತೋಲೆ ಮೂಲಕ ಸೂಚಿಸಲಾಗಿದೆ.

 

 

SSK ಪುಸ್ತಕಗಳ ಅಯ್ಕೆ ಪಟ್ಟಿಗಳು

1.

ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಪ್ರಾಥಮಿಕ ಶಾಲೆಗಳ ಗ್ರಂಥಾಲಯಗಳಿಗೆ ಆಯ್ಕೆ ಮಾಡಲಾಗಿರುವ ಪುಸ್ತಕಗಳ ಪಟ್ಟಿ

2

ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಹಂತ 2) ಗ್ರಂಥಾಲಯಗಳಿಗೆ ಆಯ್ಕೆ ಮಾಡಲಾಗಿರುವ ಪ್ರಕ್ರಿಯೆ -2023 ಪುಸ್ತಕಗಳ ಪಟ್ಟಿ

3

ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಸರ್ಕಾರಿ ಪ್ರೌಢಶಾಲೆ ಗಳಿಗೆ (ಹಂತ 3) ಗ್ರಂಥಾಲಯಗಳಿಗೆ ಆಯ್ಕೆ ಮಾಡಲಾಗಿರುವ ಪ್ರಕ್ರಿಯೆ -2023 ಪುಸ್ತಕಗಳ ಪಟ್ಟಿ

4

ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು(ಹಂತ 4) ಗ್ರಂಥಾಲಯಗಳಿಗೆ ಆಯ್ಕೆ ಮಾಡಲಾಗಿರುವ ಪುಸ್ತಕಗಳ ಪಟ್ಟಿ

5

ಎರಡನೇ ಹಂತದ ಉರ್ದು - ಆಂಗ್ಲ ಪುಸ್ತಕದ ಪಟ್ಟಿ