ಸಮಗ್ರ ಶಿಕ್ಷಣ ಕರ್ನಾಟಕ
ಸಮಗ್ರ ಶಿಕ್ಷಣ ಕರ್ನಾಟಕ

ಸಮಗ್ರ ಶಿಕ್ಷಣ ಕರ್ನಾಟಕ

ಶಾಲಾ ಶಿಕ್ಷಣ ಇಲಾಖೆ

×
ಅಭಿಪ್ರಾಯ
ಆಂಗ್ಲ ಕೋಶ

Home

ಕರ್ನಾಟಕ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಭಾಷಾ ಕಲಿಕೆಯ ಕೌಶಲಗಳನ್ನು ವೃದ್ಧಿಪಡಿಸುವುದಕ್ಕಾಗಿ, ಸಮಗ್ರ ಶಿಕ್ಷಣ ಕರ್ನಾಟಕದಲ್ಲಿ ಆಂಗ್ಲ ಕೋಶವನ್ನು ಸ್ಥಾಪಿಸಲಾಯಿತು. ಆಂಗ್ಲ ಭಾಷಾ ಕಲಿಕೆಗೆ ಪೂರಕವಾಗಿ ಕಲಿಕಾ ವಾತಾವರಣವನ್ನು ಸೃಷ್ಠಿಸುವ ಹಾಗೂ ಕಲಿಕಾರ್ಥಿಗಳನ್ನು ಅರ್ಥಪೂರ್ಣವಾಗಿ ಈ ವಾತಾವರಣಕ್ಕೆ ಒಗ್ಗಿಸುವ ಅವಶ್ಯವಿರುತ್ತದೆ. ಪಠ್ಯಕ್ರಮಕ್ಕೆ ಸಂಬOಧಿಸಿದOತೆ ಸವಾಲುಗಳನ್ನು ಎದುರಿಸುವುದು ತರಗತಿ ಕೋಣೆಗಳಲ್ಲಿ. ಮಗುವಿನ ಭಾಷಾ ಕಲಿಕೆಯು, ಶಾಲೆಯ ಹೊರಗೆ ಮತ್ತು ಒಳಗೆ ಸಂತೋಷದಾಯಕವಾಗಿ ಇರಬೇಕೆಂದು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಆಶಿಸುತ್ತದೆ. ಇದನ್ನೆ ಸಮಗ್ರ ಶಿಕ್ಷಣ ಕರ್ನಾಟಕದ ಆಂಗ್ಲ ಕೋಶವು ತನ್ನ ಪ್ರಮುಖ ಉದ್ದೇಶವನ್ನಾಗಿರಿಸಿಕೊಂಡಿದೆ.

         2018-19ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದು ಆಂಗ್ಲ ಮಾಧ್ಯಮ ವಿಭಾಗವನ್ನು ಪ್ರಾರಂಭಿಸಲು ಸರ್ಕಾರವು ಆದೇಶ ನೀಡಿತು. ಈ ಆಂಗ್ಲ ಮಾಧ್ಯಮ ವಿಭಾಗದಲ್ಲಿ ಬೋಧಿಸುತ್ತಿರುವ ಶಿಕ್ಷಕರಿಗೆ ಅವರ ಭಾಷಾ ಕೌಶಲಗಳನ್ನು ವೃದ್ಧಿಪಡಿಸುವುದು ಹಾಗೂ ಬೋಧನಾ ವಿಧಾನವನ್ನು ಅವರಲ್ಲಿ ಬಲವರ್ಧಿಸುವುದು ಇಲಾಖೆಯ ಒಂದು ಸವಾಲಾಗಿತ್ತು. ಇದನ್ನು ಸರಿದೂಗಿಸಲು ಆಂಗ್ಲ ಕೋಶವನ್ನು ಸಮಗ್ರ ಶಿಕ್ಷಣ ಕರ್ನಾಟಕದಲ್ಲಿ ಸ್ಥಾಪಿಸಿ, ಒಬ್ಬ ಕಾರ್ಯಕ್ರಮಾಧಿಕಾರಿಯನ್ನು ನೇಮಿಸಲಾಯಿತು. ಇದನ್ನು ಸಹನಿರ್ದೇಶಕರ ಮಾರ್ಗದರ್ಶನದಲ್ಲಿ ನಿರ್ವಹಿಸುವಂತೆ ನಿರ್ದೇಶಿಸಲಾಗಿತ್ತು. ಪ್ರಾರಂಭದ ಹಂತದಲ್ಲಿ ಆಂಗ್ಲ ಕೋಶವು ಈ ಕೆಳಕಂಡ ಕಾರ್ಯಕ್ರಮಗಳನ್ನು ಕೈಗೊಂಡಿತ್ತು.

ಈಗಾಗಲೇ ಹಾಲಿ ನಡೆಯುತ್ತಿರುವ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳಲ್ಲಿ ಒಂದು ಆಂಗ್ಲ ವಿಭಾಗಗವನ್ನು ಮಂಜೂರುಮಾಡಲಾಯಿತು. ದ್ವಿ-ಭಾಷಾ ವಿಭಾಗಗಳ ಮಂಜೂರಾದ ಶಾಲೆಗಳ ವಿವರ ಈ ಕೆಳಕಂಡಂತಿದೆ.

         ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಠ್ಯಪುಸ್ತಕದೊಂದಿಗೆ ಇತರೆ ಸಾಹಿತ್ಯ ಸಂಪನ್ಮೂಲಗಳನ್ನು ಬಳಸುವುದು ಅವಶ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಬಹುಭಾಷಾ ಪುಸ್ತಕಗಳು, ದೊಡ್ಡಪುಸ್ತಕಗಳು, ಓದುವ ಕಾ‍‍‍ರ್ಡ್‍ಗಳು  ಇತ್ಯಾದಿಗಳನ್ನು ತರಗತಿ ಕೋಣೆಗಳಲ್ಲಿ ಬಳಸಿಕೊಳ್ಳುವಂತೆ ಪ್ರೇರೆಪಿಸುವುದು. ಆಂಗ್ಲ ಭಾಷಾ ವಾತಾವರಣವಿಲ್ಲದೆ ಕಲಿಕೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಸಾಮೂಹಿಕ ಕಲಿಕಾ ಕೇಂದ್ರಗಳನ್ನು ತೆರೆಯುವುದು ಆಂಗ್ಲ ಕೋಶದ ಉದ್ದೇಶವಾಗಿರುತ್ತದೆ. ಈ ನಿಟ್ಟಿನಲ್ಲಿ ಕೇಂದ್ರಿಯ ವಿದ್ಯಾಲಯಗಳು ದ್ವಿ ಭಾಷಾ ಮಾದರಿಯಲ್ಲಿ ಯಶಸ್ಸನ್ನು ಕಂಡಿವೆ.

        ಕರ್ನಾಟಕದಲ್ಲಿ ದ್ವಿಭಾಷಾ ಮಾಧ್ಯಮ ವಿಭಾಗದ ಶಾಲೆಗಳಲ್ಲಿ, ದ್ವಿಭಾಷಾ ಶಿಕ್ಷಣವನ್ನು ನೀಡಲು ಹಾಗೂ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಮತ್ತು ಮೌಲ್ಯಗಳನ್ನು ಮನದಟ್ಟು ಮಾಡಿಕೊಂಡು, ಶಿಕ್ಷಣದಲ್ಲಿ ಅಳವಡಿಸಲು ಒಂದು ಹೆಜ್ಜೆಯನ್ನು ಮುಂದಿಡಲಾಗಿದೆ. ದ್ವಿಭಾಷಾ ಶಿಕ್ಷಣದ ಮೂಲ ಉದ್ದೇಶವು ವಿದ್ಯಾರ್ಥಿಗಳಿಗೆ ಯಾವುದೇ ಕೌಟುಂಬಿಕ ಹಿನ್ನಲೆ ಇದ್ದರು ಸಹ, ಸ್ವರ್ಧಾತ್ಮಕ ಯುಗದಲ್ಲಿ ಭಾಗವಹಿಸುವಂತೆ ಮಾಡುವುದು.

       ಯಾವುದೇ ಭಾಷೆಯ ಪಾಂಡಿತ್ಯವನ್ನು ಗುರುತಿಸುವುದು ಆ ಭಾಷೆಯ ಮಾತನಾಡುವ ಮತ್ತು ಬರೆಯುವ ಕೌಶಲಗಳಿಂದ. ಇದು ಆಂಗ್ಲ ಭಾಷೆಗೆ ಬೇರೆಯಾಗುವುದಿಲ್ಲ. ಈ ನಿಟ್ಟಿನಲ್ಲಿ ಶಿಕ್ಷಕರು ಯಶಸ್ವಿಯಾಗಿ ತರಗತಿಗಳಲ್ಲಿ ಆಂಗ್ಲ ಭಾಷೆಯಲ್ಲಿಯೇ ಸಂಬೋಧಿಸಲು ಅನುಕೂಲವಾಗುವಂತೆ, ಸಂಪನ್ಮೂಲಗಳನ್ನು ಆರ್.ಐ.ಇ.ಎಸ್.ಐ. ಮತ್ತು ಅಜೀಂ ಪ್ರೇಮ್ ಜೀ ಸಂಸ್ಥೆಯವರಿಂದ ಸಿದ್ಧಪಡಿಸಲಾಗಿದೆ.

         ದ್ವಿಭಾಷಾ ಮಾಧ್ಯಮ ವಿಭಾಗಗಳಲ್ಲಿ ವಿದ್ಯಾರ್ಥಿಗಳು, ಆ ತರಗತಿಯ ಕಲಿಕಾ ಫಲಗಳನ್ನು ಗಳಿಸಲು ಉತ್ತೇಜಿಸುವಂತೆ ಮತ್ತು ಭಾಷಾ ಕೌಶಲಗಳನ್ನು ವೃದ್ಧಿಪಡಿಸಲು, ಕಲಿಕಾ ಸಾಮಾಗ್ರಿಗಳನ್ನು ಸಿದ್ಧಪಡಿಸಿ ಶಾಲೆಗಳಿಗೆ ನೀಡಲಾಗಿದೆ. ಇದರೊಂದಿಗೆ ಒಂದನೇ ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಸಣ್ಣ ಕಥೆಗಳ ಪುಸ್ತಕಗಳನ್ನು, ಸಣ್ಣ ಚಿತ್ರಪಟಗಳನ್ನು ಮತ್ತು ಓದುವ ಸಾಮಾಗ್ರಿಗಳನ್ನು ನೀಡಲಾಗಿದೆ.

        ಕಲಿಕಾ ಚೇತರಿಕೆಯು ಕಲಿಕೆಯಲ್ಲಿ ಉಂಟಾಗಿರುವ ನ್ಯೂನತೆಯನ್ನು ಸರಿದೂಗಿಸುವ ಒಂದು ಕಾರ್ಯಕ್ರಮವಾಗಿದೆ.  ಈ ರೀತಿಯ ಕಲಿಕೆಯನ್ನು ಬುನಾದಿ ಸಾಮರ್ಥ್ಯ ಮತ್ತು ಸಂಖ್ಯಾಶಾಸ್ತ್ರವು ಪ್ರತಿಪಾದಿಸುತ್ತದೆ. ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು, 2 ವರ್ಷಗಳ ಕಲಿಕಾ ಕೊರತೆಯನ್ನು ನೀಗಿಸುವಲ್ಲಿ ಅರ್ಥಪೂರ್ಣವಾಗಿದೆ ಎಂದು ಶ್ಲಾಘಿಸಿದ್ದಾರೆ.

ಆಂಗ್ಲ ಕೋಶವು 2022-23ನೇ ಸಾಲಿನಲ್ಲಿ ಶಿಕ್ಷಕರನ್ನು ಬಲವರ್ಧಿಸಲು ಈ ಕೆಳಕಂಡ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

  1. ಕೆ.ಪಿ.ಎಸ್. ಶಾಲಾ ವಿದ್ಯಾರ್ಥಿಗಳಿಗೆ A Spoken English Course ಅನ್ನು ಆರ್.ಐ.ಇ.ಎಸ್.ಐ. ಸಹಯೋಗದೊಂದಿಗೆ ನಡೆಸಲಾಗಿದೆ. ತರಬೇತಿಯನ್ನು ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಗೆ ನೀಡಲಾಗಿದೆ. 1 ನೇ ತರಗತಿಯಿಂದ 3 ನೇ ತರಗತಿಯವರೆಗೆ ಒಂದನೇ ಹಂತ, 4 ನೇ ತರಗತಿಯಿಂದ 5 ನೇ ತರಗತಿಯವರೆಗೆ ಎರಡನೇ ಹಂತ ಹಾಗೂ 7 ನೇ ಮತ್ತು 8 ನೇ ತರಗತಿಗಳು ಮೂರನೇ ಹಂತ ಎಂದು ವಿಂಗಡಿಸಿಕೊಳ್ಳಲಾಗಿತ್ತು. ಈ ತರಬೇತಿಯನ್ನು ಅಕ್ಟೋಬರ್ 2022 ರಿಂದ ಡಿಸೆಂಬರ್ 2022 ರ ವರೆಗೆ ಆರ್.ಐ.ಇ.ಎಸ್.ಐ. ನಲ್ಲಿ 132 ಶಿಬಿರಾರ್ಥಿಗಳಿಗೆ ನೀಡಲಾಗಿದೆ.
  2. ಚೆನೈನ ಯು.ಎಸ್. ಕಾನ್ಸುಲೇಟ್ ನ ಸಹಯೋಗದೊಂದಿಗೆ Blended TESOL (Teaching English to the Speakers of Other Language) ಅನ್ನು ದಿನಾಂಕ: 09-02-2022 ರಿಂದ ಕರ್ನಾಟಕದ ಸರ್ಕಾರಿ ಶಾಲೆಗಳ 50 ಶಿಕ್ಷಕರಿಗೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಆಂಗ್ಲ ಭಾಷಾ ಕೌಶಲವನ್ನು ವೃದ್ಧಿಪಡಿಸಲಾಯಿತು.
  3. ‘The Teacher Foundation’ ಸಂಸ್ಥೆಯ ವತಿಯಿಂದ ಸೆಪ್ಟಂಬರ್ 2022 ರಿಂದ ಫೆಬ್ರವರಿ 2023 ರವರೆಗೆ ಆನ್ ಲೈನ್ ಮೂಲಕ 2000 ಶಿಕ್ಷಕರಿಗೆ 20 ಅವಧಿಗಳಲ್ಲಿ “English Encounters” ಎಂಬ ಶೀರ್ಷಿಕೆಯಲ್ಲಿ ನಡೆಸಲಾಯಿತು. ಅಂತಿಮವಾಗಿ 753 ಶಿಕ್ಷಕರು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.
  4. ದ್ವಿಭಾಷಾ ಮಾಧ್ಯಮದ ವಿಭಾಗಗಳಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರಿಗೆ ಆಂಗ್ಲ ಮಾಧ್ಯಮದಲ್ಲಿ ಬೋಧಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಭಾಷಾ ಕೌಶಲವನ್ನು ವೃದ್ಧಿಪಡಿಸಲು ಆರ್.ಐ.ಇ.ಎಸ್.ಐ. ಸಹಯೋಗದೊಂದಿಗೆ 2019-20 ರಿಂದ 2022-23 ರವರೆಗೆ ಪ್ರತಿ ವರ್ಷವೂ ಒಂದು ತರಗತಿಗೆ 1 ರಿಂದ 4 ನೇ ತರಗತಿಗಳ ಶಿಕ್ಷಕರಿಗೆ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿತ್ತು.
  5. Step Up India ಸಂಸ್ಥೆಯ ಸಹಯೋಗದೊಂದಿಗೆ ಈ ಕೆಳಕಂಡ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

1.REAP: Remedial English Accelerted Programme ಆ ತರಗತಿಯ ಮಕ್ಕಳು ಆ ತರಗತಿಯ ಕಲಿಕಾ ಫಲಗಳನ್ನು ಗಳಿಸಲು ಹೆಚ್ಚುವರಿ ಬೆಂಬಲವನ್ನು ನೀಡುವ ಸಲುವಾಗಿ ಒಂದು ಗಂಟೆಯ 70 ಅವಧಿಗಳಲ್ಲಿ ವಿಶೇಷ ತರಗತಿಗಳನ್ನು ಹಮ್ಮಿಕೊಳ್ಳಲಾಗುವುದು. 

2.PEP: Primary English Accelerated programme ಸರ್ಕಾರಿ ಶಾಲೆಗಳಲ್ಲಿ ತೊಡಗಿಸಿಕೊಳ್ಳವ ಸ್ವಯಂಪ್ರೇರಿತ ಅಭ್ಯರ್ಥಿಗಳ ಕೌಶಲಗಳನ್ನು ಗುರುತಿಸುವುದು.

3.TEP: Teacher Empowerment programme 3ರಿಂದ 7ನೇ ತರಗತಿಗಳ ವರೆಗೆ ದೂರದ ಗ್ರಾಮೀಣ ಭಾಗಗಳಲ್ಲಿ, ತಕ್ಷಣದ ಸಹಾಯದಿಂದ ವಂಚಿತರಾಗಿರುವ ಶಿಕ್ಷಕರಿಗೆ ಸಹಾಯ ಹಸ್ತವನ್ನು ನೀಡುವುದು. 

4.K- GET Videos: Karnataka Government English Textbook Videos, 3ನೇ ತರಗತಿಯಿಂದ 7ನೇ ತರಗತಿಯವರೆಗೆ ಸಾಕ್ಷ್ಯ ಚಿತ್ರಗಳ ಮೂಲಕ ಹೆಚ್ಚುವರಿ ಸಂಪನ್ಮೂಲವನ್ನು ನೀಡುವುದು

 5.ಮೌಲ್ಯ ಶಿಕ್ಷಣವನ್ನು ಒತ್ತು ನೀಡುವ ಸಲುವಾಗಿ Dream a Dream ಸಂಸ್ಥೆಯೊಂದಿಗೆ ಪ್ರಾರಂಭಿಕವಾಗಿ, ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ಶಾಲಾ ಶಿಕ್ಷಕರಿಗೆ, ಅವರ ಶಾಲಾ ವಿದ್ಯಾರ್ಥಿಗಳು ಜೀವನ ಕೌಶಲಗಳನ್ನು ಆರ್ಥೈಸಿಕೊಂಡು, ಜೀವನದಲ್ಲಿ ಅಳವಡಿಸಿಕೊಳ್ಳವಂತೆ ಫೆಬ್ರವರಿ 2023 ಮಾಹೆಯಲ್ಲಿ ಒಂದು ದಿನದ ಕಾರ್ಯಾಗಾರವನ್ನು ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಶಿಕ್ಷಕರಿಗೆ ಹಮ್ಮಿಕೊಳ್ಳಲಾಯಿತು.