ಹಿನ್ನಲೆ ಮತ್ತು ತಾರ್ಕಿಕತೆ:
ಭಾರತದ ಸಂವಿಧಾನದ 86 ನೇ ತಿದ್ದುಪಡಿಯು 6-14 ನೇ ವಯೋಮಾನದ ಮಕ್ಕಳಿಗೆ ಶಿಕ್ಷಣವನ್ನು ಮೂಲಭೂತ ಹಕ್ಕಿನಡಿ ತಂದಿದೆ. ರಾಜ್ಯದ ಎಲ್ಲಾ ಮಕ್ಕಳು ಶಿಕ್ಷಣ ಪಡೆಯುವುದನ್ನು ಖಾತ್ರಿಪಡಿಸಿಕೊಳ್ಳುವದನ್ನು ಈ ತಿದ್ದುಪಡಿಯು ಕಡ್ಡಾಯಗೊಳಿಸಿದೆ. ಇದು ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಒಳಗೊಂಡಿದೆ.
ಶಿಕ್ಷಣದ ಮೂಲಭೂತ ನೀತಿಯ ಚೌಕಟ್ಟು ಪ್ರಸ್ತುತದಲ್ಲಿರುವ ಅಸಮಾನತೆಯನ್ನು ಸರಿಪಡಿಸಲು ಒತ್ತು ನೀಡುತ್ತದೆ. ಇದು ಶಾಲೆ ಬಿಟ್ಟಿರುವವರ ದರವನ್ನು ಕಡಿಮೆ ಮಾಡಲು, ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಸಾಮಾನ್ಯ ಶಿಕ್ಷಣ ಪಡೆಯಲು ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ ಲಭ್ಯತೆಯನ್ನು ದೊರಕಿಸಲು ಹೆಚ್ಚು ಪ್ರಾಧಾನ್ಯತೆ ನೀಡುತ್ತದೆ. ಶಿಕ್ಷಣ ವ್ಯವಸ್ಥೆಯಲ್ಲಿ ಒಳಗೊಳ್ಳುವಿಕೆ ಮತ್ತು ರಚನೆಯ ಬದಲಾವಣೆಯನ್ನು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2020 ಪ್ರತಿಪಾದಿಸುತ್ತದೆ. ಇದು ಯಾವ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದೆಂಬ ಆಲೋಚನೆಯನ್ನು ಪ್ರತಿಧ್ವನಿಸುವ ʻಸಮಾನ ಮತ್ತು ಒಳಗೊಳ್ಳುವ ಶಿಕ್ಷಣʼವನ್ನು ಕೇಂದ್ರೀಕರಿಸುತ್ತದೆ. ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಅವರ ಗೆಳೆಯರೊಂದಿಗೆ ಸಮಾನ ಪಾಲುದಾರರಂತೆ ಬೆಸೆಯುತ್ತ ಮತ್ತು ಅವರನ್ನು ಅವರ ಸಾಮಾನ್ಯ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಸಿದ್ಧಗೊಳಿಸುತ್ತಾ, ಅವರು ಜೀವನವನ್ನು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಎದುರಿಸಲು ಸಜ್ಜುಗೊಳಿಸುತ್ತದೆ.
ವಿಶೇಷ ಅಗತ್ಯವುಳ್ಳ ಮಕ್ಕಳಿಗೆಂದೇ ಕೇಂದ್ರ ಪುರಸ್ಕೃತ ಯೋಜನೆಯಾದ ಸಮನ್ವಯ ಶಿಕ್ಷಣವನ್ನು 1992 ರಲ್ಲಿ ಜಾರಿಗೆ ತರಲಾಯಿತು. ಸಾಮಾನ್ಯ ಶಾಲೆಗಳಲ್ಲಿನ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಹೆಚ್ಚಿನ ಅವಕಾಶಗಳನ್ನು ನೀಡುವುದು ಮತ್ತು ಈ ಮಕ್ಕಳು ಶಾಲೆ ಬಿಡದಂತೆ ಅನುಕೂಲ ಮಾಡಿಕೊಡುವುದು ಇದರ ಉದ್ದೇಶವಾಗಿದೆ. ಶಾಲೆಗಳಲ್ಲಿ ತಡೆ ರಹಿತ ಪರಿಸರವನ್ನು ನಿರ್ಮಿಸುತ್ತಾ, ಹೆಚ್ಚಿನ ಮಟ್ಟದ ಮತ್ತು ತೀವ್ರತರವಾದ ನ್ಯೂನ್ಯತೆಯುಳ್ಳ ಮಕ್ಕಳಿಗೆ ಸಾರಿಗೆ ಭತ್ಯೆ ಮತ್ತು ಬೆಂಗಾವಲು ಭತ್ಯೆಯನ್ನು ನೀಡಲಾಗುತ್ತಿದೆ. ದೃಷ್ಟಿದೋಷ ಮತ್ತು ಮಿತದೃಷ್ಟಿದೋಷವುಳ್ಳ ಮಕ್ಕಳಿಗೆ ಓದಲು ಸಹಾಯಕರ ಬೆಂಬಲ ಪಡೆಯಲು ಓದುಗರ ಭತ್ಯೆ ಮತ್ತು ಹೆಣ್ಣು ಮಕ್ಕಳಿಗೆ ಭತ್ಯೆ ನೀಡಲಾಗುವುದು. ಬ್ಲಾಕ್‌ಹಂತದಲ್ಲಿ ಆಯೋಜಿಸಲಾಗುವ ವೈದ್ಯಕೀಯ ತಪಾಸಣಾ ಶಿಬಿರದ ಶಿಫಾರಸ್ಸಿನ ಅನುಸಾರ ಅರ್ಹ ವಿದ್ಯಾರ್ಥಿಗಳಿಗೆ ಸಾಧನ ಮತ್ತು ಸಲಕರಣೆಗಳನ್ನು ಒದಗಿಸಲಾಗುವುದು. ಸಮನ್ವಯ ಶಿಕ್ಷಣದ ಅಡಿಯಲ್ಲಿ CWSN ಮಕ್ಕಳಿಗೆ ವಿಶೇಷ ಶಿಕ್ಷಕರ ಬೆಂಬಲವನ್ನು ಒದಗಿಸಿದೆ.
ಶಾಲಾ ಶಿಕ್ಷಣದ ಸಮನ್ವಯ ಶಿಕ್ಷಣ ಯೋಜನೆಯು ವಿಶೇಷ ಅಗತ್ಯತೆಗಳನ್ನು ಹೊಂದಿರುವ (CWSN) ಮಕ್ಕಳನ್ನೂ ಒಳಗೊಂಡಂತೆ ಎಲ್ಲಾ ಮಕ್ಕಳ ಶಿಕ್ಷಣವನ್ನು ಪೂರ್ವ ಪ್ರಾಥಮಿಕದಿಂದ 12ನೇ ತರಗತಿಯವರೆಗೆ ನಿರಂತರವಾಗಿ ನೋಡುವ ಗುರಿಯನ್ನು ಹೊಂದಿದೆ. ಯೋಜನೆಯು ವಿಕಲಚೇತನರ ಹಕ್ಕುಗಳ (RPWD) ಕಾಯಿದೆ, 2016ರಲ್ಲಿ ಗುರುತಿಸಲ್ಪಟ್ಟಿರುವ ಒಂದು ಅಥವಾ ಹೆಚ್ಚಿನ ಅಂಗವೈಕಲ್ಯತೆಯನ್ನು ಹೊಂದಿರುವ ವಿಶೇಷ ಅಗತ್ಯವಿರುವ ಸರ್ಕಾರಿ, ಸರ್ಕಾರಿ- ಅನುದಾನಿತ ಶಾಲೆ , ಸ್ಥಳೀಯ ಸಂಸ್ಥೆಗಳ ಶಾಲೆಗಳನ್ನು ಒಳಗೊಳ್ಳುತ್ತದೆ.
ಕರ್ನಾಟಕದಲ್ಲಿ ಸಮನ್ವಯ ಶಿಕ್ಷಣದ ಆರಂಭ
ಕರ್ನಾಟಕವು Integrated Education for Disabled Children- IEDC ಯೋಜನೆಯ (ಕೇಂದ್ರ ಪ್ರಾಯೋಜಿತ) ಮೂಲಕ ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಮುಖ್ಯವಾಹಿನಿಗೆ ತಂದಿರುವ ಸುದೀರ್ಘ ಇತಿಹಾಸವನ್ನು ಹೊಂದಿದೆ ಮತ್ತು ವಿಶ್ವಸಂಸ್ಥೆಯ ಅನೇಕ ಪ್ರಾಥಮಿಕ ಯೋಜನೆಗಳನ್ನು ಪರೀಕ್ಷಿಸಿದೆ. ನಿರ್ದಿಷ್ಟ ಪ್ರಸ್ತಾವನೆಯಂತೆ ವಿಶೇಷ ಅಗತ್ಯವುಳ್ಳ ಮಕ್ಕಳ ಒಳಗೊಳ್ಳುವಿಕೆಗೆ, ಪ್ರತಿ ಮಗುವಿಗೆ ರೂ.3500/-ದರದ ಮಿತಿಯಲ್ಲಿ ಅನುದಾನವನ್ನು ಒದಗಿಸಲಾಗಿದೆ. ಜಿಲ್ಲೆಗಳು ಈ ಸೂಚಿತ ಅನುದಾನದ ಮಿತಿಯೊಳಗೆ ಯೋಜನೆಗಳನ್ನು ರೂಪಿಸುತ್ತವೆ. ಸಮಗ್ರ ಶಿಕ್ಷಣ ಕರ್ನಾಟಕದ ಮಧ್ಯವರ್ತನಾ ಚಟುವಟಿಕೆಗಳು ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಗುರುತಿಸುವಿಕೆ, ಕ್ರಿಯಾತ್ಮಕ ಮತ್ತು ಔಪಚಾರಿಕ ಮೌಲ್ಯ ಮಾಪನ ಕೈಗೊಳ್ಳುವಿಕೆ, ವೈಯಕ್ತಿಕಗೊಳಿಸಿದ ಸೂಕ್ತ ಶೈಕ್ಷಣಿಕ ಯೋಜನೆಯ (Individualised education plan) ಅನುಷ್ಠಾನ, ಸಾಧನ ಸಲಕರಣೆಗಳನ್ನು ಒದಗಿಸುವಿಕೆ, ಶಿಕ್ಷಕರ ತರಬೇತಿ, ಸಂಪನ್ಮೂಲ ಒದಗಿಸುವಿಕೆ ಹಾಗೂ ಶಾಲೆಗಳಲ್ಲಿ ತಡೆ ರಹಿತ ಪರಿಸರ ನಿರ್ಮಾಣವನ್ನು ಹೊಂದಿವೆ.
2024-25ನೇ ಸಾಲಿನಲ್ಲಿ, ರಾಜ್ಯದಲ್ಲಿ ಪ್ರಾಥಮಿಕ ವಿಭಾಗದಲ್ಲಿ ಒಟ್ಟು 62521 ಮತ್ತು ಪ್ರೌಡ ವಿಭಾಗದಲ್ಲಿ 18986 ವಿದ್ಯಾರ್ಥಿಗಳನ್ನು ವಿಶೇಷ ಅಗತ್ಯವುಳ್ಳ ಮಕ್ಕಳೆಂದು ಗುರುತಿಸಲಾಗಿದೆ.
ತರಬೇತಿ ಸಾಮಗ್ರಿಗಳ ಅಭಿವೃದ್ಧಿ ಮತ್ತು ಪ್ರಧಾನ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ:
ಸಮನ್ವಯ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿರುವ ತಜ್ಞರು, ಸರ್ಕಾರೇತರ ಸಂಸ್ಥೆಗಳು (NGO) ಮತ್ತು ವೃತ್ತಿಪರರ ಸಹಾಯದಿಂದ ತರಬೇತಿ ಮಾಡ್ಯೂಲ್‌ಗಳನ್ನು ತಯಾರಿಸಲಾಗುತ್ತದೆ. ಪ್ರಧಾನ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡಲಾಗುತ್ತಿದೆ. ಇವರು ವಿಶೇಷ ಶಿಕ್ಷಕರಿಗೆ ಪಠ್ಯಕ್ರಮ ಅಳವಡಿಕೆ, RPWD ಕಾಯಿದೆ, 2016 ರ ಅಡಿಯಲ್ಲಿನ ನ್ಯೂನ್ಯತೆಗಳ ವಿಧಗಳ ಬಗ್ಗೆ ತಿಳಿಯಲು ಹಾಗೂ ಇದರ ಸಹಾಯದಿಂದ ವಿಶೇಷ ಅಗತ್ಯವುಳ್ಳ ಮಕ್ಕಳ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳಲು, ಅವರನ್ನು ಸಮರ್ಥವಾಗಿ ನಿರ್ವಹಿಸಲು ಹಾಗೂ ಸಂವಾದಾತ್ಮಕ ಕಲಿಕೆಯಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು, ಅವರು ತರಗತಿಗೆ ನಿಗಧಿಪಡಿಸಿದ ಕಲಿಕಾಂಶಗಳನ್ನು ಹೊಂದಲು ಅನುವು ಮಾಡಿಕೊಡುತ್ತಾರೆ.
ವೈದ್ಯಕೀಯ ಮೌಲ್ಯಮಾಪನ ಮತ್ತು ಮೌಲ್ಯಾಂಕನ ಶಿಬಿರಗಳು:
ತಜ್ಞ ವೈದ್ಯರ ತಂಡದಿಂದ ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳ ಅಂಗವೈಕಲ್ಯ ಪ್ರಕಾರ, ಸ್ವಭಾವ ಮತ್ತು ಪ್ರಮಾಣವನ್ನು ಗುರುತಿಸಲು ಮತ್ತು ಅಗತ್ಯವಿರುವ ಸಾಧನ ಸಲಕರಣೆಗಳನ್ನು ನಿರ್ಧರಿಸಲು ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಈ ಚಟುವಟಿಕೆಗಳಲ್ಲಿ ಸಮಗ್ರ ಶಿಕ್ಷಣ ಕರ್ನಾಟಕದ ತಂಡದೊಂದಿಗೆ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಸಿಬ್ಬಂದಿ, ALIMCO ಹಾಗೂ ಅನೇಕ ಸರ್ಕಾರೇತರ ಸಂಸ್ಥೆ (NGO) ಕೂಡ ವೈದ್ಯಕೀಯ ಮೌಲ್ಯಾಂಕನ ಶಿಬಿರದಲ್ಲಿ ಪಾಲ್ಗೊಳ್ಳುತ್ತಾರೆ. ರಾಜ್ಯದ ಎಲ್ಲಾ 204 ಶೈಕ್ಷಣಿಕ ಬ್ಲಾಕ್‌ಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ನಡೆಸಲಾಗುತ್ತದೆ. ಅಗತ್ಯವಿರುವ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಸಾಧನಾ ಮತ್ತು ಉಪಕರಣಗಳನ್ನುಒದಗಿಸಲಾಗುತ್ತದೆ.
ಕ್ರೀಡೆ ಮತ್ತು ಕ್ಷೇತ್ರ ಭೇಟಿ:
ಬ್ಲಾಕ್‌ನ ಕ್ಷೇತ್ರಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ರೂಪಿತವಾದ ಸಮಿತಿಯು, ಆಯಾ ಬ್ಲಾಕ್‌ಗಳಿಗೆ ಕಾರ್ಯಕ್ರಮ/ಚಟುವಟಿಕೆಗಳನ್ನು ಯೋಜಿಸುತ್ತದೆ. ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿ ಐತಿಹಾಸಿಕ ಅಥವಾ ವೈಜ್ಞಾನಿಕ ಪ್ರಾಮುಖ್ಯತೆಯ ಸ್ಥಳಗಳಿಗೆ, ಸ್ಥಳೀಯ ಕಲೆ ಪರಿಚಯಕ್ಕೆ, ಸಮುದಾಯ ಪುನರ್ವಸತಿ ಕೇಂದ್ರಗಳು/ ಕೌಶಲ್ಯಕೇಂದ್ರಗಳಂತಹ ಪ್ರಮುಖ ಸ್ಥಳಗಳಿಗೆ ಕ್ಷೇತ್ರ ಭೇಟಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿವಿಧ ಕೌಶಲ್ಯಗಳು ಮತ್ತು ಕಾರ್ಯಕ್ರಮಗಳ ಕುರಿತು ಉಪನ್ಯಾಸಗಳು ಮತ್ತು ಪ್ರಾತ್ಯಕ್ಷಿಕೆಗಳನ್ನು (Demo) ಸಹ ಆಯೋಜಿಸಲಾಗುತ್ತದೆ ಹಾಗೂ ವಿವಿಧ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ.
ವಿಶ್ವ ವಿಶೇಷ ಚೇತನರ ದಿನಾಚರಣೆ:
ಡಿಸೆಂಬರ್ 03 ರಂದು ವಿಶ್ವ ವಿಶೇಷಚೇತನರ ದಿನಾಚರಣೆಯನ್ನು ಶಾಲೆ, ಬ್ಲಾಕ್ ಮತ್ತು ಜಿಲ್ಲಾ ಮಟ್ಟದಲ್ಲಿ ಆಚರಿಸಲಾಗುವುದು. ವಿಶೇಷ ಅಗತ್ಯವುಳ್ಳ ಮಕ್ಕಳ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ, ಅವರ ಸ್ವಾಭಿಮಾನವನ್ನು ಹೆಚ್ಚಿಸುವ ಮತ್ತು ಅವರ ಹಕ್ಕುಗಳನ್ನು ಸಂರಕ್ಷಿಸುವ ಹಾಗೂ ಅವರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಉದ್ದೇಶದಿಂದ ವಿಶ್ವ ವಿಶೇಷಚೇತನರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಸಾರ್ವಜನಿಕರು ವಿಶೇಷಚೇತನರಿಗೆ ಸಮಾನ ಅವಕಾಶ ನೀಡಿ, ಅವರನ್ನು ಪ್ರೋತ್ಸಾಹಿಸುವ ಕುರಿತು ಜಾಗೃತಿ ಮೂಡಿಸುವುದು ಸಹ ಈ ಕಾರ್ಯಕ್ರಮದ ಒಂದು ಭಾಗವಾಗಿದೆ.
ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ:
ಎಲ್ಲಾ ಶಾಲೆಗಳು ವಿಶೇಷ ಅಗತ್ಯವುಳ್ಳ ಮಕ್ಕಳ ಒಳಗೊಳ್ಳುವಿಕೆಗೆ ಕ್ರಮಬಧ್ಧವಾದ ದೃಷ್ಠಿಕೋನ ಹೊಂದಲು ಅಗತ್ಯ ಬೆಂಬಲ ನೀಡುವ ಗುರಿಯನ್ನು ಹೊಂದಿರುತ್ತದೆ. ಇದು ಕೇವಲ ಶಾಲಾ ಶಿಕ್ಷಕರ ಹೊಣೆ ಮಾತ್ರವಾಗಿರದೆ, ಶಾಲಾ ಪರಿವಾರ, ಸಿಬ್ಬಂದಿ, SDMC ಮತ್ತು ಹಿರಿಯ ವಿದ್ಯಾರ್ಥಿಗಳ ಜವಾಬ್ದಾರಿಯಾಗಿದೆ. ಮಕ್ಕಳ ವೈವಿಧ್ಯಮಯ ಅಗತ್ಯತೆಗಳನ್ನು ಗೌರವಿಸಿ, ಶಾಲೆಯ ಮತ್ತು ಸುತ್ತಲಿನ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿವಿಧ ಬೋಧನಾ ಶೈಲಿಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಗುಣಮಟ್ಟದ ಶಿಕ್ಷಣವನ್ನು ನೀಡುವ ಕುರಿತು ಒತ್ತು ನೀಡಲಾಗುವುದು.
ತರಗತಿಗಳಲ್ಲಿ ಮತ್ತು ಕಲಿಕಾ-ಬೋಧನಾ ಪ್ರಕ್ರಿಯೆಗಳಲ್ಲಿ ಒಳಗೊಳ್ಳುವಿಕೆಗೆ, ಶಿಕ್ಷಕರನ್ನು ಸಂವೇದನಾಶೀಲಗೊಳಿಸುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ತರಗತಿಯಲ್ಲಿ ತೊಡಗಿಸಿಕೊಳ್ಳಲು ಶಿಕ್ಷಕರಿಗೆ ಆನ್ ಲೈನ್ ಮುಖೇನ ತರಬೇತಿ ನೀಡಲಾಗುತ್ತಿದೆ. ಬ್ಲಾಕ್ ಹಂತದಲ್ಲಿನ ವಿಶೇಷ ಶಿಕ್ಷಕರು ವಿವಿಧ ಕಲಿಕಾ- ಬೋಧನಾ ಚಟುವಟಿಕೆಗಳಿಂದ ಕಲಿಕೆಯ ಅಂತರವನ್ನು ತುಂಬಲು–ತರಗತಿಯ ಶಿಕ್ಷಕರಿಗೆ ಬೆಂಬಲ ನೀಡುತ್ತಿದ್ದಾರೆ.
ಬ್ಲಾಕ್ ಸಂಪನ್ಮೂಲ ಕೇಂದ್ರಗಳು:
ರಾಜ್ಯದ ಎಲ್ಲಾ 204 ಶೈಕ್ಷಣಿಕ ಬ್ಲಾಕ್‌ಗಳಲ್ಲಿ ಶಾಲಾ ಸಿದ್ಧತಾ ಕೇಂದ್ರಗಳು/ ಬ್ಲಾಕ್ ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳಲ್ಲಿ ತೀವ್ರ ಮತ್ತು ಅತಿ ತೀವ್ರ ನ್ಯೂನ್ಯತೆಯುಳ್ಳ ಮಕ್ಕಳಿಗೆ ಥೆರಪಿ ಸೇವೆ ಒದಗಿಸಲು ಚಿಕಿತ್ಸಕ ಸಾಮಗ್ರಿಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ, ಕಲಿಕೆಯಲ್ಲಿ ನ್ಯೂನ್ಯತೆಯುಳ್ಳ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿ ಅವರ ಕಲಿಕಾ ಅಂತರವನ್ನು ಕಡಿಮೆಗೊಳಿಸುವ ಸಾಮಗ್ರಿಗಳನ್ನೂ ಸಹ ಕಲಿಕ ಕೇಂದ್ರಗಳು ಹೊಂದಿವೆ. ಅರ್ಹ ವಿದ್ಯಾರ್ಹತೆ ಮತ್ತು ತರಬೇತಿ ಹೊಂದಿರುವ ಥೆರಪಿಸ್ಟ್‌ಗಳು ಅಗತ್ಯವಿರುವ ಮಕ್ಕಳಿಗೆ ಪಿಜಿಯೋಥೆರಪಿ ಸೇವೆಗಳನ್ನು ಒದಗಿಸುತ್ತಿದ್ದಾರೆ. ಎಲ್ಲಾ 204 SRP ಕೇಂದ್ರಗಳಲ್ಲಿ ವಿಶೇಷ ಶಿಕ್ಷಕರಿಗೆ ಮತ್ತು ಥೆರಪಿಸ್ಟ್‌ಗಳಿಗೆ ಸಹಾಯ ನೀಡಲು ಆಯಾ/ಸಹಾಯಕರ ಸೇವೆಗಳನ್ನುನೀಡಲಾಗಿದೆ.
ಇದರೊಂದಿಗೆ, ವಿಶೇಷ ಸಂಪನ್ಮೂಲ ಶಿಕ್ಷಕರು ಕೂಡಾ ಕೇಂದ್ರಕ್ಕೆ ಒದಗಿಸಿರುವ ಸಾಮಗ್ರಿಗಳ ಸಹಾಯದಿಂದ ಈ ಮಕ್ಕಳಿಗೆ ಫಿಜಿಯೋ ಥೆರಪಿ ಮತ್ತು ಕಲಿಕಾ ಚಟುವಟಿಕೆಗಳಲ್ಲಿ ಸಹಾಯ ನೀಡುತ್ತಿದ್ದಾರೆ. ಸಂಪನ್ಮೂಲ ಕೇಂದ್ರಗಳನ್ನು ತಲುಪಲು ಅರ್ಹ ವಿದ್ಯಾರ್ಥಿಗಳಿಗೆ ಸಾರಿಗೆ ಮತ್ತು ಬೆಂಗಾವಲು ಭತ್ಯೆ ನೀಡಲಾಗುತ್ತದೆ.
ಕಲಿಕಾ ಕೇಂದ್ರಗಳು:
ಕಲಿಕಾ ನ್ಯೂನ್ಯತೆ ಮತ್ತು ನಿರ್ದಿಷ್ಟ ಕಲಿಕಾ ನ್ಯೂನ್ಯತೆ ಹೊಂದಿರುವ ಮಕ್ಕಳಿಗೆ ಅಗತ್ಯ ಬೆಂಬಲ ನೀಡುವ ಸಲುವಾಗಿ ಬೆಂಗಳೂರು ಗ್ರಾಮಾಂತರ, ತುಮಕೂರು, ಮಧುಗಿರಿ, ರಾಮನಗರ, ಮೈಸೂರು, ಚಾಮರಾಜನಗರ, ಕೋಲಾರ ಜಿಲ್ಲೆಗಳಲ್ಲಿನ ಆಯ್ದ 10 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಕಲಿಕಾ ಕೇಂದ್ರಗಳನ್ನು UNICEF ಸಹಯೋಗದಲ್ಲಿ ಸ್ಥಾಪಿಸಲಾಗಿದೆ. ಈ ಕೇಂದ್ರಗಳಿಗೆ ಡೆಸ್ಕ್‌ಟಾಪ್, ಅಲೆಕ್ಸಾ ಸಾಧನ, ಟ್ಯಾಬ್‌ಗಳು ಮತ್ತು ಇಂಟರ್‌ನೆಟ್ ಸೌಲಭ್ಯ ಒದಗಿಸಿದೆ. ಸದರಿ ಕೇಂದ್ರದಲ್ಲಿ ಮಕ್ಕಳು ತರಗತಿಯಲ್ಲಿ ಕಲಿತ ಅಂಶಗಳಿಗೆ ಪೂರಕವಾದ ಕಲಿಕಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ.
ಫಲಾನುಭವಿಗಳು
RPWD ಕಾಯಿದೆ, 2016 ರಲ್ಲಿ ಗುರುತಿಸಲ್ಪಟ್ಟ ನ್ಯೂನ್ಯತೆಗಳಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಅಂಗವೈಕಲ್ಯ ಹೊಂದಿರುವ ಸರ್ಕಾರಿ, ಸರ್ಕಾರಿ ಅನುದಾನಿತ ಮತ್ತು ಸ್ಥಳೀಯ ಸಂಸ್ಥೆಗಳ ಶಾಲೆಗಳಲ್ಲಿ ಕಲಿಯುತ್ತಿರುವ ಪ್ರಾಥಮಿಕ ಹಂತದಿಂದ ಸೀನಿಯರ್ ಸೆಕೆಂಡರಿ ಹಂತದವರೆಗಿನ ಎಲ್ಲಾ ಮಕ್ಕಳನ್ನು ಈ ಯೋಜನೆಯು ಒಳಗೊಳ್ಳುತ್ತದೆ.
2024-25 ನೇ ಸಾಲಿಗೆ ಅನುಮೋದಿತ ಅನುದಾನ:
|
ಕ್ರ.
ಸಂ
|
ಚಟುವಟಿಕೆ
|
ಅನುದಾನ
ರೂ.ಲಕ್ಷಗಳಲ್ಲಿ
|
ಷರಾ
|
|
1
|
ಕ್ರೀಡೆ ಮತ್ತು ಕ್ಷೇತ್ರ ಭೇಟಿ
|
1,75,000/-
|
ಜಿಲ್ಲಾ ಹಂತ
|
|
2
|
ಥೆರಪಿ ಸೇವೆ ಒದಗಿಸುವುದು
|
12,000/ ಮಾಸಿಕ
6,000/-ಮಾಸಿಕ
|
204 ಬ್ಲಾಕ್‌ಗಳ SRC ಗಳಿಗೆ
|
|
3
|
ಬೆಂಗಾವಲು ಭತ್ಯೆ ವಿತರಣೆ
|
300/- ಮಾಸಿಕ
|
10 ತಿಂಗಳಿಗೆ
|
|
4
|
ಸಾರಿಗೆ ಭತ್ಯೆ ವಿತರಣೆ
|
350/- ಮಾಸಿಕ
|
10 ತಿಂಗಳಿಗೆ
|
|
5
|
ಸಾಧನಾ-ಸಲಕರಣಗಳ ವಿತರಣೆ
|
2500/- ಮಿತಿಯಲ್ಲಿ
|
ಅರ್ಹ ವಿದ್ಯಾರ್ಥಿಗಳಿಗೆ
|
|
6
|
ಓದುಗರ ಭತ್ಯೆ ವಿತರಣೆ
|
200/- ಮಾಸಿಕ
|
10 ತಿಂಗಳಿಗೆ
|
|
7
|
ಹೆಣ್ಣುಮಕ್ಕಳ ಭತ್ಯೆ ವಿತರಣೆ
|
350/- ಮಾಸಿಕ
|
10 ತಿಂಗಳಿಗೆ
|
|
8
|
ವೈದ್ಯಕೀಯ ತಪಾಸಣೆ ಶಿಬಿರ ಆಯೋಜನೆ
|
10,000/- ಮಿತಿಯಲ್ಲಿ
|
ಬ್ಲಾಕ್ ಹಂತದಲ್ಲಿ
|
|
9
|
ವಿಶೇಷ ಶಿಕ್ಷಕರಿಗೆ ತರಬೇತಿ ಆಯೋಜನೆ
|
@5000/- ಪ್ರತಿ ಶಿಕ್ಷಕರಿಗೆ
|
ರಾಜ್ಯ ಹಂತದಲ್ಲಿ
|
|
10
|
ವಿಶೇಷ ಶಿಕ್ಷಕರಿಗೆ ಆರ್ಥಿಕ ಬೆಂಬಲ
|
6-8 ನೇ ತರಗತಿ : 20,000/- ಮಾಸಿಕ
9-12 ನೇ ತರಗತಿ: 25,000/-ಮಾಸಿಕ
|
12 ತಿಂಗಳಿಗೆ
|
ಆಧಾರಗಳು:
1. RPWD ಕಾಯಿದೆ, 2016 New Delhi, the 28th December, 2016.
2. ಕರ್ನಾಟಕ ರಾಜ್ಯ ಪತ್ರ, ಬೆಂಗಳೂರು, ದಿನಾಂಕ: 11.11.2021.
3. RCI Act 1992 [1st September, 1992.]
4. PAB aproved No.F.NO.F No.3-1/2024-IS.6 From GOI-MOE Date:09.02.2024 (AWP&B for 2024-25)