ಸಮಗ್ರ ಶಿಕ್ಷಣ ಕರ್ನಾಟಕ
ಸಮಗ್ರ ಶಿಕ್ಷಣ ಕರ್ನಾಟಕ

ಸಮಗ್ರ ಶಿಕ್ಷಣ ಕರ್ನಾಟಕ

ಶಾಲಾ ಶಿಕ್ಷಣ ಇಲಾಖೆ

×
ಅಭಿಪ್ರಾಯ
ಆವಿಷ್ಕೃತ ಚಟುವಟಿಕೆ - ರಸಪ್ರಶ್ನೆ ಸ್ಪರ್ಧೆ

Home

ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ  ವಿದ್ಯಾರ್ಥಿಗಳಿಗೆ  ಪ್ರತ್ಯೇಕವಾಗಿ ರಸಪ್ರಶ್ನೆ ಸ್ಪರ್ಧೆಯನ್ನು  ಶಾಲಾ, ಬ್ಲಾಕ್, ಜಿಲ್ಲೆ, ವಿಭಾಗ ಹಾಗೂ ರಾಜ್ಯ ಹಂತದಲ್ಲಿ  ಹಮ್ಮಿಕೊಳ್ಳಲಾಗುತ್ತದೆ.

 

ಉದ್ದೇಶಗಳು:

 

ರಸಪ್ರಶ್ನೆ ಸ್ಪರ್ಧೆಯ ಹಂತಗಳು

  1. ಜೂನಿಯರ್ ಹಂತ- (5-7 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ)
  2. ಸೀನಿಯರ್ ಹಂತ- (8-10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ)

 ಶಾಲಾ ಹಂತದಲ್ಲಿ ಶಿಕ್ಷಕರು ರಸಪ್ರಶ್ನೆ ಸ್ಪರ್ಧೆಯನ್ನು ವಿದ್ಯಾರ್ಥಿಗಳಿಗೆ ನಡೆಸಿ, ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದು ವಿಜೇತರಾದ ವಿದ್ಯಾರ್ಥಿಗಳ ಮಾಹಿತಿಯನ್ನು ವಿದ್ಯಾವಾಹಿನಿ  Webportalನಲ್ಲಿ upload ಮಾಡುವರು. ಈ ವಿದ್ಯಾರ್ಥಿಗಳು ಬ್ಲಾಕ್‌ ಹಂತದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುವರು. ಬ್ಲಾಕ್‌ ಹಂತದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ಜಿಲ್ಲಾ ಹಂತದ ಸ್ಪರ್ಧೆಯಲ್ಲಿ, ಜಿಲ್ಲಾ ಹಂತದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ವಿಭಾಗ ಹಂತದ ಸ್ಪರ್ಧೆಯಲ್ಲಿ  ಹಾಗೂ  ವಿಭಾಗ ಹಂತದ ಸ್ಪರ್ಧೆಯಲ್ಲಿ ವಿಜೇತರಾದ  ವಿದ್ಯಾರ್ಥಿಗಳು ರಾಜ್ಯ ಹಂತದ ಸ್ಪರ್ಧೆಯಲ್ಲಿ ಭಾಗವಹಿಸುವರು.

 ಪ್ರತಿ ಹಂತದ ಸ್ಪರ್ಧೆಯಲ್ಲಿಯೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಆನ್ ಲೈನ್ ಮೂಲಕ ಪ್ರಮಾಣ ಪತ್ರವನ್ನು ಹಾಗೂ  ವಿಜೇತರಾದ ವಿದ್ಯಾರ್ಥಿಗಳಿಗೆ ಟ್ರೋಫಿ, ಪ್ರಮಾಣ ಪತ್ರ, ಪದಕ ಹಾಗೂ ನಗದು ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಗುತ್ತದೆ.

 

 
ಜಿಲ್ಲಾ ಹಾಗೂ ವಿಭಾಗ ಮಟ್ಟದ ರಸಪ್ರಶ್ನೆ ಸ್ಪರ್ಧೆ