ಸಮಗ್ರ ಶಿಕ್ಷಣ ಕರ್ನಾಟಕ
ಸಮಗ್ರ ಶಿಕ್ಷಣ ಕರ್ನಾಟಕ

ಸಮಗ್ರ ಶಿಕ್ಷಣ ಕರ್ನಾಟಕ

ಶಾಲಾ ಶಿಕ್ಷಣ ಇಲಾಖೆ

×
ಅಭಿಪ್ರಾಯ
ವಿಜ್ಞಾನ ವಸ್ತು ಪ್ರದರ್ಶನ

Home

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ  ವಿಜ್ಞಾನ,  ಗಣಿತ  ಹಾಗೂ ತಂತ್ರಜ್ಞಾನ  ವಿಷಯಗಳ  ಕಲಿಕೆಯಲ್ಲಿ  ಆಸಕ್ತಿಯನ್ನು ಬೆಳೆಸಲು  ”ರಾಷ್ಟ್ರೀಯ ಆವಿಷ್ಕಾರ್‌ ಅಭಿಯಾನ್‌ “ಕಾರ್ಯಕ್ರಮದಡಿ  ಶಾಲಾ ಹಂತದಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗುವುದು. 

 

ಉದ್ದೇಶಗಳು:-

  1. ವಿದ್ಯಾರ್ಥಿಗಳಲ್ಲಿ ವಿಜ್ಞಾನ,  ಗಣಿತ  ಹಾಗೂ ತಂತ್ರಜ್ಞಾನ  ವಿಷಯಗಳ  ಕಲಿಕೆಯಲ್ಲಿ  ಆಸಕ್ತಿಯನ್ನು ಬೆಳೆಸುವುದು.
  2. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವ ಮೂಲಕ ಅವರಲ್ಲಿ ಸಂಶೋಧನೆ ಕೈಗೊಳ್ಳುವಂತೆ ಪ್ರೇರೇಪಿಸುವುದು.
  3. ವಿದ್ಯಾರ್ಥಿಗಳಲ್ಲಿ ಚಿಂತಿಸುವ, ಹೊಸದನ್ನು ಕಂಡು ಹಿಡಿಯುವ ಹಾಗೂ ವಿಮರ್ಶಿಸುವ ಕೌಶಲ್ಯಗಳನ್ನು ಬೆಳೆಸುವುದು.
  4. ಶಾಲಾ ಮಕ್ಕಳಲ್ಲಿ ವಿಜ್ಞಾನ ವಿಷಯಗಳಲ್ಲಿ ವೀಕ್ಷಣೆ, ಪ್ರಯೋಗ, ಕುತೂಹಲ, ಉತ್ಸಾಹ ಮತ್ತು ಅನ್ವೇಷಣೆಯನ್ನು ಕೈಗೊಳ್ಳುವಂತೆ  ಅವಕಾಶವನ್ನು ಒದಗಿಸುವುದು.

 

   2024-25ನೇ ಸಾಲಿನಲ್ಲಿ ರಾಜ್ಯದ 35 ಜಿಲ್ಲೆಗಳಿಂದ  ಪ್ರತಿ ಜಿಲ್ಲೆಯಿಂದ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ 10 ಶಾಲೆಗಳಂತೆ, 350  ಸರ್ಕಾರಿ  ಪ್ರೌಢ ಶಾಲೆಗಳನ್ನು ಆಯ್ಕೆ ಮಾಡಿ  ಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ಗಣಿತ, ವಿಜ್ಞಾನ ಹಾಗೂ ತಂತ್ರಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಮಾದರಿಗಳನ್ನು (ಪಠ್ಯ ವಿಷಯಗಳ ಸಂಬಂಧಿಸಿದಂತೆ) ಶಿಕ್ಷಕರ ಮಾರ್ಗದರ್ಶನದಲ್ಲಿ ಸಿದ್ದಪಡಿಸಿ, ಶಾಲಾ ಹಂತದಲ್ಲಿ  ಪ್ರದರ್ಶಿಸಿ, ಶಾಲೆಯ ಹಾಗೂ ನೆರೆಹೊರೆಯ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ವೀಕ್ಷಿಸಲು ಅನುವು ಮಾಡಿಕೊಡಲಾಯಿತು. ಈ ಮೂಲಕ ಶಾಲಾ ವಿದ್ಯಾರ್ಥಿಗಳಲ್ಲಿ ವಿಜ್ಞಾನ, ಗಣಿತ ಹಾಗೂ ತಂತ್ರಜ್ಞಾನ ವಿಷಯಗಳ ಕಲಿಕೆಯಲ್ಲಿ ಆಸಕ್ತಿಯನ್ನು ಬೆಳೆಸುವುದರ ಮೂಲಕ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಯಿತು.

   
ಶಾಲಾ ಹಂತದ ವಿಜ್ಞಾನ ವಸ್ತು ಪ್ರದರ್ಶನ