ಸಮಗ್ರ ಶಿಕ್ಷಣ ಕರ್ನಾಟಕ
ಸಮಗ್ರ ಶಿಕ್ಷಣ ಕರ್ನಾಟಕ

ಸಮಗ್ರ ಶಿಕ್ಷಣ ಕರ್ನಾಟಕ

ಶಾಲಾ ಶಿಕ್ಷಣ ಇಲಾಖೆ

×
ಅಭಿಪ್ರಾಯ
ರಂಗೋತ್ಸವ

Home

ರಂಗೋತ್ಸವ. ದೇಶದ ಸಾಂಸ್ಕೃತಿಕ ವೈವಿಧ್ಯತೆಯ ಅರಿವನ್ನು ಬೆಳೆಸಲು ವಿನ್ಯಾಸಗೊಳಿಸಲಾದ ಉಪಕ್ರಮವಾಗಿದೆ. ರಂಗೋತ್ಸವ ಕಾರ್ಯಕ್ರಮವು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಚಟುವಟಿಕೆಗಳ ಮೂಲಕ ಅನುಭವದ ಕಲಿಕೆ ಮತ್ತು ಸಂತೋಷದಾಯಕ ಕಲಿಕೆಯನ್ನುಂಟು  ಮಾಡುತ್ತದೆ. 2024-25ನೇ ಸಾಲಿನಲ್ಲಿ 2164 ವಿಶೇಷ ಶಿಕ್ಷಕರ ಶಾಲೆಗಳಿಗೆ ಅನುದಾನ ನೀಡಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಯಿತು.

ಉದ್ದೇಶಗಳು:

  1. ವಿದ್ಯಾರ್ಥಿಗಳಿಗೆ ದೇಶದ ವಿಭಿನ್ನ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದು.
  2. ವಿದ್ಯಾರ್ಥಿಗಳು ತಮ್ಮ ಕಲಾತ್ಮಕ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಲು ಸೂಕ್ತವಾದ

      ವೇದಿಕೆಯನ್ನು ಒದಗಿಸುವುದು.

  1. ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಅದರ ಎಲ್ಲಾ ವೈವಿಧ್ಯತೆಗಳೊಂದಿಗೆ ಪ್ರದರ್ಶಿಸುವುದು ಮತ್ತು ಆಚರಿಸುವುದು.
  2. "ಏಕ್ ಭಾರತ್ ಶ್ರೇಷ್ಠ ಭಾರತ್" ಗುರಿಗಳನ್ನು ಸಾಧಿಸಲು ಉತ್ತಮ ಯೋಜಿತ ಚಟುವಟಿಕೆಗಳ ಮೂಲಕ ರಾಷ್ಟ್ರೀಯ ಏಕೀಕರಣದ ಮನೋಭಾವವನ್ನು ಉತ್ತೇಜಿಸುವುದು.

ಶಾಲಾ ಹಂತದಲ್ಲಿ ಶಿಕ್ಷಕರು ರಂಗೋತ್ಸವ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಸಹ ಪಠ್ಯ ಚಟುವಟಿಕೆಗಳ ಅಭ್ಯಾಸ ಮಾಡಿಸುವರು ಹಾಗೂ ವಿದ್ಯಾರ್ಥಿಗಳು ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಲು ಪ್ರೋತ್ಸಾಹಿಸುವರು.

 

     ಕರ್ನಾಟಕ ಪಬ್ಲಿಕ್‌ ಶಾಲೆ,   ನ್ಯೂ ವಾಣಿ ವಿಲಾಸ್‌,   ಮಿನರ್ವ  ಸರ್ಕಲ್‌, ಬೆಂಗಳೂರು ದಕ್ಷಿಣ ಜಿಲ್ಲೆ