ಸಮಗ್ರ ಶಿಕ್ಷಣ ಕರ್ನಾಟಕ
ಸಮಗ್ರ ಶಿಕ್ಷಣ ಕರ್ನಾಟಕ

ಸಮಗ್ರ ಶಿಕ್ಷಣ ಕರ್ನಾಟಕ

ಶಾಲಾ ಶಿಕ್ಷಣ ಇಲಾಖೆ

×
ಅಭಿಪ್ರಾಯ
ಉಚಿತ ಸಮವಸ್ತ್ರ

Home

ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಎರಡನೇ ಜೊತೆ ಸಮವಸ್ತ್ರ ವಿತರಣೆ

ಶಾಲಾ ವಿದ್ಯಾರ್ಥಿಗಳಲ್ಲಿ ಸಮಾನತೆಯ ತತ್ವ ಏಕತೆ ಮತ್ತು ಶಿಸ್ತಿನ ಗುಣವನ್ನು ಬೆಳಸಲು ಶಾಲಾ ಸಮವಸ್ತ್ರವು ಶಾಲಾ ದಿನಗಳಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯಸರ್ಕಾರವು ವಿದ್ಯಾ ವಿಕಾಸ ಯೋಜನೆಯಡಿ 1 ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ, ಪ್ರತಿ ವರ್ಷ ಉಚಿತವಾಗಿ ಒಂದು ಜೊತೆ ಶಾಲಾ ಸಮವಸ್ತ್ರವನ್ನು ಒದಗಿಸುತ್ತಿದೆ. ಇದಕ್ಕೆ ಪೂರಕವಾಗಿ “ಸಮಗ್ರ ಶಿಕ್ಷಣ ಕರ್ನಾಟಕ” ವತಿಯಿಂದ ಎರಡನೇ ಜೊತೆ ಸಮವಸ್ತ್ರವನ್ನು ಪ್ರತಿ ವರ್ಷವೂ ಒದಗಿಸಲಾಗುತ್ತಿದೆ. ಈ ರೀತಿ ಒಟ್ಟು ಎರಡು ಜೊತೆ ಸಮವಸ್ತ್ರಗಳನ್ನು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿರುತ್ತದೆ.