ಸಮಗ್ರ ಶಿಕ್ಷಣ ಕರ್ನಾಟಕ
ಸಮಗ್ರ ಶಿಕ್ಷಣ ಕರ್ನಾಟಕ

ಸಮಗ್ರ ಶಿಕ್ಷಣ ಕರ್ನಾಟಕ

ಶಾಲಾ ಶಿಕ್ಷಣ ಇಲಾಖೆ

×
ಅಭಿಪ್ರಾಯ
ಹೆಣ್ಣು ಮಕ್ಕಳ ಸಬಲೀಕರಣ ಯೋಜನೆ

Home

ಹದಿಹರೆಯದ ಹೆಣ್ಣು ಮಕ್ಕಳು: (Adolescent Girls)

ಶಾಲಾ ಹಂತದಲ್ಲಿ ಹದಿಹರೆಯದ ಹೆಣ್ಣು ಮಕ್ಕಳಿಗೆ  ಶೈಕ್ಷಣಿಕ  ಕಾರ್ಯಕ್ರಮಗಳು

            ಹದಿಹರೆಯದ ಹೆಣ್ಣು ಮಕ್ಕಳಿಗೆ ಗುಣಾತ್ಮಕ ಕಲಿಕೆಯ ಜೊತೆಗೆ ಅವರ ದೈಹಿಕ, ಸಾಮಾಜಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅನುಕೂಲವಾಗುವ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.  ಶಾಲಾ ಹಂತದಲ್ಲಿ ಶಿಕ್ಷಕರು ಕಲಿಕೆಗೆ ಪೂರಕವಾಗುವ ಚಟುವಟಿಕೆಗಳನ್ನು ಹಮ್ಮಿಕೊಂಡು ಹದಿಹರೆಯದ ಹೆಣ್ಣು ಮಕ್ಕಳ ಕಲಿಕೆಯಲ್ಲಿ ಆಸಕ್ತಿಯನ್ನು ಬೆಳೆಸುವುದು ಪ್ರಮುಖ ಕಾರ್ಯ ಚಟುವಟಿಕೆಯಾಗಿದೆ.

 

ಹದಿಹರೆಯದ ವಯಸ್ಸು 14 ರಿಂದ 19 ರವರೆಗಿನ ಬಾಲ್ಯ ಮತ್ತು ಪ್ರೌಢಾವಸ್ಥೆಯ ನಡುವಿನ ಜೀವನದ ಹಂತವಾಗಿದೆ. ಇದು ಮಾನವ ಬೆಳವಣಿಗೆಯ ಒಂದು ವಿಶಿಷ್ಟ ಹಂತವಾಗಿದೆ ಮತ್ತು ಉತ್ತಮ ಆರೋಗ್ಯದ ಅಡಿಪಾಯವನ್ನು ಹಾಕುವ ಪ್ರಮುಖ ಸಮಯವಾಗಿದೆ. ಹದಿಹರೆಯದವರು ತ್ವರಿತ ದೈಹಿಕ, ಅರಿವಿನ ಮತ್ತು ಮಾನಸಿಕ ಬೆಳವಣಿಗೆಯನ್ನು ಅನುಭವಿಸುತ್ತಾರೆ.

 

ಹದಿಹರೆಯದ ವಯಸ್ಸಿನಲ್ಲಿ ಕಂಡು ಬರುವ ಪ್ರಮುಖ ಅಂಶಗಳು:

 

ಶಾಲಾ ಹಂತದಲ್ಲಿ ಶಿಕ್ಷಕರು ಹೆಣ್ಣು ಮಕ್ಕಳಿಗೆ ಹಮ್ಮಿಕೊಳ್ಳಬೇಕಾದ ಚಟುವಟಿಕೆಗಳು:-

  1. ಶಾಲಾ ಹಂತದಲ್ಲಿ ಮುಖ್ಯಶಿಕ್ಷಕರು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವೈದ್ಯರು ಹಾಗೂ ಅವರ ಸಿಬ್ಬಂದಿಯನ್ನು ಶಾಲೆಗೆ ಕರೆಸಿ ಹದಿಹರೆಯದ ಮಕ್ಕಳ ದೇಹದಲ್ಲಿ ಆಗುವ ದೈಹಿಕ ಬೆಳವಣೆಗೆಯ ಬದಲಾವಣೆಗಳು, ವೈಯಕ್ತಿಕ ಸ್ವಚ್ಛತೆ ಯನ್ನು ಕಾಪಾಡಿಕೊಳ್ಳುವ ವಿಧಾನಗಳ ಬಗ್ಗೆ ಉಪನ್ಯಾಸ ಒದಗಿಸುವುದು.
  2. ಪೋಲಿಸ್ ಇಲಾಖೆ ವತಿಯಿಂದ ತೆರೆದ ಮನೆ ಕಾರ್ಯಕ್ರಮದಡಿ ಮಕ್ಕಳ ರಕ್ಷಣೆಗೆ ಇರುವ ಕಾನೂನುಗಳು, ಹಕ್ಕುಗಳು ಹಾಗೂ ಮಕ್ಕಳ ಜವಾಬ್ದಾರಿಗಳು ಹಾಗೂ ಕಾನೂನು ಉಲ್ಲಂಘನೆಯಿಂದಾಗುವ ಶಿಕ್ಷೆಗಳ ಬಗ್ಗೆ ಮಾಹಿತಿ ಒದಗಿಸುವುದು.
  3. ಸ್ಥಳೀಯ ವಕೀಲರಿಂದ ಮಕ್ಕಳ ಹಕ್ಕುಗಳು ಮತ್ತು ಕರ್ತವ್ಯಗಳ ಮಾಹಿತಿ ಹಾಗೂ ಇತರೆ ಕಾನೂನು ಅಂಶಗಳ ಬಗ್ಗೆ ಮಾಹಿತಿ ಒದಗಿಸಲಾಗುತ್ತದೆ.
  4. ಶಾಲಾ ಹಂತದಲ್ಲಿ ಶಿಕ್ಷಕರು ಆಪ್ತ ಸಮಾಲೋಚನಾ  ಕೇಂದ್ರಗಳನ್ನು ಸ್ಥಾಪಿಸಿ  ಮಕ್ಕಳ ಸಮಸ್ಯೆಗಳು, ಜವಾಬ್ದಾರಿಗಳ ಬಗ್ಗೆ ಸಮಾಲೋಚನೆ  ನಡೆಸುವುದು.  ಸಾಮಾಜಿಕ ಸಮಸ್ಯೆಗಳು, ಶುಚಿತ್ವ, ಲಿಂಗ ಸಮಾನತೆ ಇತ್ಯಾದಿ ವಿಷಯಗಳ ಕುರಿತು ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ಆಶು ಭಾಷಣ ಸ್ಪರ್ಧೆ, ಚರ್ಚಾ ಸ್ಪರ್ಧೆ, ನಾಟಕ ಗಳಂತಹ ಸಾಂಸ್ಕೃತಿಕ. ಚಟುವಟಿಕೆಗಳು.

 

 

ಸರ್ಕಾರಿ ಪ್ರೌಢಶಾಲೆ,  ಸೊರಗೋನ್  ಬಾಲಕಿಯರಿಗಾಗಿ ಹದಿಹರೆಯದ ಕಾರ್ಯಕ್ರಮ: ಮುಧೋಳ ||ತಾ||  ಬಾಗಲಕೋಟೆ ಜಿಲ್ಲೆ

 

 

ಹದಿಹರೆಯದ ಹೆಣ್ಣು ಮಕ್ಕಳು  ಕಾರ್ಯಕ್ರಮದ ಪ್ರಗತಿ ವರದಿ – 31-03-2025

 

ಚಟುವಟಿಕೆ

ಪಿಎಬಿ ಅನುಮೋದನೆ -2024-25

ಖರ್ಚಾದ ಅನುದಾನ -         31-03-2025

ಕ್ರ.ಸಂ

ಭೌತಿಕ

 

ಘಟಕ ವೆಚ್ಚ

ಆರ್ಥಿಕ (ರೂ.ಲಕ್ಷಗಳಲ್ಲಿ

ಭೌತಿಕ

 

ಆರ್ಥಿಕ (ರೂ.ಲಕ್ಷಗಳಲ್ಲಿ)

1

ಹದಿಹರೆಯದ ಹೆಣ್ಣು ಮಕ್ಕಳು

5419

0.01

54.19

5419

54.19