ಶಾಲೆಗಳಲ್ಲಿನ ಕ್ರೀಡೆಗಳು ಮಕ್ಕಳಲ್ಲಿ ದೈಹಿಕ, ಮಾನಸಿಕ, ಸಾಮಾಜಿಕ-ಭಾವನಾತ್ಮಕ ಮತ್ತು ಅರಿವಿನ ಬೆಳವಣಿಗೆಯ ವಿಷಯದಲ್ಲಿ ಪ್ರಯೋಜನಗಳನ್ನು ಒದಗಿಸುತ್ತದೆ. ಕ್ರೀಡೆಯು ಈ ಪ್ರತಿಯೊಂದು ವಿಷಯಗಳ ಅಭಿವೃದ್ಧಿಗೆ ಗಮನಾರ್ಹ ಮತ್ತು ವಿಶಿಷ್ಟ ಕೊಡುಗೆಗಳನ್ನು ನೀಡುವ ಸಾಮರ್ಥವನ್ನು ಹೊಂದಿದೆ. ಇದು ಒಟ್ಟಾರೆ ವ್ಯಕ್ತಿತ್ವ ಬೆಳವಣಿಗೆಗೆ ಕಾರಣವಾಗುತ್ತದೆ. ಮಕ್ಕಳ ಮೂಲಭೂತ ಚಲನಶೀಲ ಕೌಶಲ್ಯಗಳು ಮತ್ತು ದೈಹಿಕ ಸಾಮರ್ಥ್ಯಗಳ ಬೆಳವಣಿಗೆಯಲ್ಲಿ ಕ್ರೀಡೆಗಳು ಕೊಡುಗೆ ನೀಡುತ್ತವೆ. ದೈಹಿಕ ಶಿಕ್ಷಣವು ಮಕ್ಕಳಿಗೆ ದೇಹವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಮತ್ತು ಮನಸ್ಸು ದೇಹದ ಸಮಗ್ರ ಬೆಳವಣಿಗೆಗೆ ಕೊಡುಗೆ ನೀಡುತ್ತದೆ. ನಿರ್ದಿಷ್ಟ ಸಾಮಾಜಿಕ ಕೌಶಲ್ಯಗಳನ್ನು ಕಲಿಯಲು (ಸಹನೆ ಮತ್ತು ಇತರರಿಗೆ ಗೌರವದಂತಹ) ಮತ್ತು ತಂಡ/ಸಾಮೂಹಿಕ ಉದ್ದೇಶಗಳಿಗೆ (ಸಹಕಾರ ಮತ್ತು ಒಗ್ಗಟ್ಟು) ಹೊಂದಿಕೊಳ್ಳಲು ಅವಕಾಶಗಳನ್ನು ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಒಗ್ಗೂಡಿಸಲು ಅವಕಾಶ ಕಲ್ಪಿಸುತ್ತದೆ.
ಉದ್ದೇಶಗಳು:
ಕ್ರೀಡೆಗಳನ್ನು ವಿದ್ಯಾರ್ಥಿಗಳ ದೈನಂದಿನ ದಿನಚರಿಯ ಅವಿಭಾಜ್ಯ ಅಂಗವಾಗಿ ಮಾಡುವುದು.
ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಗಳನ್ನು ಉತ್ತೇಜಿಸುವುದು. (ವಿಶೇಷವಾಗಿ, ಭಾರತದ ಸ್ಥಳೀಯ ಆಟಗಳು)
ಶಾಲಾ ಹಂತದಿಂದ ವಿದ್ಯಾರ್ಥಿಗಳಲ್ಲಿ ಆರೋಗ್ಯ ಸ್ಥಿತಿಯ ಬಗ್ಗೆ ಆಪೇಕ್ಷಿತ ಅಭ್ಯಾಸಗಳು ಮತ್ತು ವರ್ತನೆಗಳನ್ನು ಬೆಳೆಸುವುದು.
ವಿದ್ಯಾರ್ಥಿಗಳಲ್ಲಿ ಹೆಮ್ಮೆ, ಕ್ರೀಡಾ ಮನೋಭಾವ ಮತ್ತು ನೈತಿಕ ನಡವಳಿಕೆಯ ಸಕಾರಾತ್ಮಕ ಮನೋಭಾವವನ್ನು ಬೆಳೆಸುವುದು.
ವಿದ್ಯಾರ್ಥಿಗಳನ್ನು ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸದೃಢರನ್ನಾಗಿ ಮಾಡುವುದು.
ವಿದ್ಯಾರ್ಥಿಗಳ ನಡುವೆ ಉತ್ತಮ ಸಂಬಂದ ಪ್ರಜ್ಞೆಯನ್ನು ಬೆಳೆಸುವುದು ಮತ್ತು ನಿರ್ವಹಿಸುವುದು.
ಆಟಗಳು/ಕ್ರೀಡೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುವುದು.
ವಿದ್ಯಾರ್ಥಿಗಳು ತಮ್ಮ ದೈನಂದಿನ ಜೀವನದಲ್ಲಿ 30 ರಿಂದ 60 ನಿಮಿಷಗಳ ದೈಹಿಕ ಚಟುವಟಿಕೆಯನ್ನು ಮಾಡುವಂತೆ ಪ್ರೋತ್ಸಾಹಿಸುವುದು.
2024-25ನೇ ಸಾಲಿನಲ್ಲಿ ರಾಜ್ಯದ 4778 ಸರ್ಕಾರಿ ಪ್ರೌಡಶಾಲೆಗಳಿಗೆ ತಲಾ 25000/- ರೂಗಳಂತೆ ಕ್ರೀಡಾ ಅನುದಾನ PAB ಅನುಮೋದನೆಯಾಗಿರುತ್ತದೆ ಈ ಕ್ರೀಡಾ ಅನುದಾನವನ್ನು ಕ್ರೀಡಾ ಸಾಮಗ್ರಿಗಳನ್ನು ಖರೀದಿಸಲು ಶಾಲೆಗಳಿಗೆ ಬಿಡುಗಡೆ ಮಾಡಲಾಗಿದೆ.
2025-2026 ನೇ ಸಾಲಿನಲ್ಲಿ ರಾಜ್ಯದ 20167 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು, 21339 ಹಿರಿಯ ಪ್ರಾಥಮಿಕ ಶಾಲೆಗಳು, 4074 ಸರ್ಕಾರಿ ಪ್ರೌಢಶಾಲೆಗಳು ಹಾಗು 1286 SENIOR SECONDARY ತಲಾ 5000, 10000, 25000, 25000, ರೂ ನಂತೆ ಕ್ರೀಡಾ ಸಾಮಗ್ರಿಗಳನ್ನು ಖರೀದಿಸಲು PAB PLAN ನಲ್ಲಿ ಅನುಮೋದಿಸಿರುತ್ತದೆ.
ಬಿಡುಗಡೆ ಮಾಡಿದ ಅನುದಾನವನ್ನು ಶಾಲೆ/ಕಾಲೇಜುಗಳಲ್ಲಿ ಕೆಳಕಂಡಂತೆ ಬಳಕೆ ಮಾಡುವುದು.
ಕ್ರೀಡಾ ಅನುದಾನವನ್ನು ಅನುಬಂಧದಲ್ಲಿರುವ ಶಾಲಾ ಕಾಲೇಜುಗಳು ಮಾತ್ರ ಕ್ರೀಡಾ ಸಾಮಗ್ರಿಗಳನ್ನು ಖರೀದಿಸಲು ಬಳಸಿಕೊಳ್ಳಲು ತಿಳಿಸುವುದು.
ಕ್ರೀಡಾ ಸಾಮಗ್ರಿಗಳನ್ನು ಒದಗಿಸಲಾದ ಅನುದಾನದ ಮಿತಿಗೆ ಒಳಪಟ್ಟು ನಿಯಮಾನುಸಾರ ಖರೀದಿಸಲು ಸೂಚಿಸಿದೆ
ಕ್ರೀಡಾ ಅನುದಾನವನ್ನು ಶಾಲೆ/ಕಾಲೇಜು ಖಾತೆಗೆ ಬಿಡುಗಡೆ ಮಾಡುವುದು. ಸರ್ಕಾರಿ ಶಾಲಾ /ಕಾಲೇಜುಗಳಿಗೆ ವಯಸ್ಸಿಗೆ ಅನುಗುಣವಾಗಿ ಕ್ರೀಡಾ ಸಲಕರಣೆಗಳ ಸೂಚಕ ಪಟ್ಟಿಯನ್ನು ನೀಡಲಾಗಿದೆ ಆದಾಗ್ಯೂ ಇದು ಕೇವಲ ಸೂಚಕ ಪಟ್ಟಿಯಾಗಿದೆ ಶಾಲೆ/ಶಾಲಾ ಕ್ರೀಡಾ ಸಮಿತಿಯ ಮುಖ್ಯಸ್ಥರು ಎಸ್.ಡಿ.ಎಂ.ಸಿ ಸಭೆಯನ್ನು ಆಯೋಜಿಸಿ ಅವಶ್ಯಕತೆಗೆ ಅನುಗುಣವಾಗಿ ಒಳಾಂಗಣ ಮತ್ತು ಹೊರಾಂಗಣ ಆಟಗಳಿಗೆ ಕ್ರೀಡಾ ಸಾಮಗ್ರಿಗಳನ್ನು ಖರೀದಿಸಲು ನಡವಳಿಯನ್ನು ಕಡ್ಡಾಯವಾಗಿ ಶಾಲಾ /ಕಾಲೇಜಿನ ಮುಖ್ಯಸ್ಥರು ದಾಖಲಿಸಿ ನಿರ್ವಹಿಸಲು ಸೂಚಿಸಿದೆ.
ಇದರೊಂದಿಗೆ ಪ್ರಥಮ ಚಿಕಿತ್ಸೆ ಕಿಟ್ ಅನ್ನು ಕಡ್ಡಾಯವಾಗಿ ಖರೀದಿಸಲು ತಿಳಿಸುವುದು. ಇದರಲ್ಲಿ ಇರಬೇಕಾದ ಸಲಕರಣೆಗಳ ಪಟ್ಟಿಯನ್ನು ನೀಡಿದೆ.
ಖರೀದಿಸಿದ ಕ್ರೀಡಾ ಸಾಮಗ್ರಿಗಳನ್ನು ದಾಸ್ತಾನು ವಹಿಗೆ ದಾಖಲಿಸಿ ಉಪಯೋಗಿತಾ ಪ್ರಮಾಣ ಪತ್ರವನ್ನು ಕೂಡಲೇ ಉಪನಿರ್ದೇಶಕರ ಕಛೇರಿಗೆ ಸಲ್ಲಿಸಲು ಸೂಚಿಸಿದೆ
ಶಾಲಾ /ಕಾಲೇಜಿನವರು ನೀಡಿದ ಉಪಯೋಗಿತಾ ಪ್ರಮಾಣ ಪತ್ರಗಳ ಆಧಾರದ ಮೇಲೆ ನೀಡಲಾಗುವ Google Spread Sheet ಭರ್ತಿ ಮಾಡುವುದು.
ಪ್ರಥಮ ಚಿಕಿತ್ಸಾ ಕಿಟ್ ವಸ್ತುಗಳು (ಎಲ್ಲ ವಯೋಮಾನದವರಿಗೂ ಸಾಮಾನ್ಯ):
1092/102/108 ನಂತಹ ತುರ್ತು ವೈದ್ಯಕೀಯ ಸೇವೆಗಳಿಗಾಗಿ ದೂರವಾಣಿ ಸಂಖ್ಯೆ ಮತ್ತು ಪಿಸಿಯೋಥರಪಿಸ್ಟ್ /ಸಮಾಲೋಚಕರ ಸಂಪರ್ಕ ಸಂಖ್ಯೆ:
ಸಣ್ಣ, ಮಧ್ಯಮ ಮತ್ತು ದೊಡ್ಡ ಗೇಜ್ ಡ್ರೆಸಿಂಗ್ ಗಳು, ಕತ್ತರಿ, ಸುರಕ್ಷತಾ ಪಿನ್ ಗಳು, ಟ್ವೇಜರ್ ತ್ರಿಕೋನ ಅಂಟಿಕೊಳ್ಳುವ ಟೇಪ್ ಮತ್ತು ಕ್ರೆಪ್ ರೋಲ್ಡ್ ಬ್ಯಾಂಡೇಜ್ ಗಳು
ನೋವು ನಿವಾರಕಗಳು(Ibuprofen Chewable Tablet, Paracetamol Tablet ) And Antibiotics,) ಗಳಂತಹ ಔಷಧಗಳು, ಥರ್ಮಾಮೀಟರ್ (ಆದ್ಯತೆ ಡಿಜಿಟಲ್ ) ಮತ್ತು ನಂಜುನಿರೋಧಕ ಒರೆಸುವ ಬಟ್ಟೆಗಳು ಅಥವಾ ಸೋಪ್
ಕೀಟಗಳ ಕಡಿತ ಮತ್ತು ಕುಟುಕು ಮತ್ತು ಇತರ ಅಗತ್ಯ ವಸ್ತುಗಳನ್ನು ನಿವಾರಿಸಲು ನಂಜುನಿರೋಧಕ (Antiseptic) ಕ್ರೀಮ್ ಅಥವಾ ಸ್ಪ್ರೇ
ಕ್ರೀಡಾ ಸಾಮಗ್ರಿಗಳ ಪಟ್ಟಿ
ಕಿರಿಯ ಪ್ರಾಥಮಿಕ ಶಾಲೆಗಳಿಗೆ;
- ರೋಪ್ ಸ್ಕಿಪ್ಪಿಂಗ್
- ಟೆನ್ನಿಕಾಯ್ಟ್ ರಿಂಗ್
- ಲೂಡೋ
- ಹಾವು- ಏಣಿ
- ಲಗೋರಿ ಚೀಪ್ಸ್
- ಕೇರಂ ಬೋರ್ಡ್ 01 ಸೆಟ್ (ಚಿಕ್ಕದು)
- ಪ್ಲೆಯಿಂಗ್ ಡಿಸ್ಕ್
- ಶಟಲ್ ಬ್ಯಾಟ್
- ಸ್ಟಾಪ್ ವಾಚ್-01
- ವಾಲಿಬಾಲ್/ ಥ್ರೋಬಾಲ್
ಹಿರಿಯ ಪ್ರಾಥಮಿಕ ಶಾಲೆಗಳಿಗೆ.
- ರೋಪ್ ಸ್ಕಿಪ್ಪಿಂಗ್
- ಟೆನ್ನಿಕಾಯ್ಟ್ ರಿಂಗ್
- ಲೂಡೋ
- ಹಾವು- ಏಣಿ
- ಲಗೋರಿ ಚೀಪ್ಸ್
- ಕೇರಂ ಬೋರ್ಡ್ 01 ಸೆಟ್ (ದೊಡ್ಡದು)
- ಪ್ಲೆಯಿಂಗ್ ಡಿಸ್ಕ್
- ಶಟಲ್ ಬ್ಯಾಟ್
- ವಾಲಿಬಾಲ್/ ಥ್ರೋಬಾಲ್
- ಪ್ರೌಡ ಶಾಲೆಗಳಿಗೆ
- ತಾಳಬದ್ದ ಚಟುವಟಿಕೆಗಳಿಗೆ : ಹೂಪ್ಸ್-10 ಜೊತೆ, ಡಂಬಲ್ಸ್-14 ಜೊತೆ, ಲೆಸಿಮ್ಸ್-14 ಜೊತೆ (ಕಡ್ಡಾಯ)
- ವಾಲಿಬಾಲ್, ನೆಟ್ ಮತ್ತು ಪೋಲ್
- ಕೊಕ್ಕೋ ಪೋಲ್
- ಚೆಸ್ 01 ಸೆಟ್
- ಕೇರಂ ಬೋರ್ಡ್ 01 ಸೆಟ್
- ಯೋಗಾ ಮ್ಯಾಟ್ -15
- ಅಥ್ಲೆಟಿಕ್ಸ್ - ರಿಲೆ ಬ್ಯಾಟನ್ -8, ಶಾರ್ಟ್ ಪುಟ್-01, ಡಿಸ್ಕಸ್ ಥ್ರೋ -01
- ಸ್ಟಾಪ್ ವಾಚ್-01
- ಪದವಿಪೂರ್ವ ಕಾಲೇಜುಗಳಿಗೆ
- ವಾಲಿಬಾಲ್, ನೆಟ್ ಮತ್ತು ಪೋಲ್
- ಶಟಲ್ ಬ್ಯಾಡ್ ಮಿಂಟನ್
- ಕೊಕ್ಕೋ ಪೋಲ್
- ಚೆಸ್ 04 ಸೆಟ್
- ಕೇರಂ ಬೋರ್ಡ್ 02 ಸೆಟ್
- ಯೋಗಾ ಮ್ಯಾಟ್ -15
- ಅಥ್ಲೆಟಿಕ್ಸ್ - ರಿಲೆ ಬ್ಯಾಟನ್ -8, ಶಾರ್ಟ್ ಪುಟ್-01, ಡಿಸ್ಕಸ್ ಥ್ರೋ -01
- ಸ್ಟಾಪ್ ವಾಚ್-01
Yoga Day
ಶಿಕ್ಷಣ ಮಂತ್ರಾಲಯದ ಮಾರ್ಗದರ್ಶನದಲ್ಲಿ ಪ್ರತಿ ವರ್ಷ ಜೂನ್ 21ರಂದು ಅಂತರಾಷ್ಟೀಯ ಯೋಗ ದಿನಾಚರಣೆಯನ್ನು ರಾಜ್ಯದ ಇಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳ ಮೂಲಕ ಆಚರಣೆ ಕೈಗೊಳ್ಳಲಾಗುವುದು.