ಸಮಗ್ರ ಶಿಕ್ಷಣ ಕರ್ನಾಟಕ
ಸಮಗ್ರ ಶಿಕ್ಷಣ ಕರ್ನಾಟಕ

ಸಮಗ್ರ ಶಿಕ್ಷಣ ಕರ್ನಾಟಕ

ಶಾಲಾ ಶಿಕ್ಷಣ ಇಲಾಖೆ

×
ಅಭಿಪ್ರಾಯ
ಐಸಿಟಿ ಮತ್ತು ಡಿಜಿಟಲ್ ಉಪಕ್ರಮಗಳು

Home

ಐಸಿಟಿ ವಿವಿಧ ಕ್ಷೇತ್ರಗಳಲ್ಲದೆ ಶಿಕ್ಷಣ ಕ್ಷೇತ್ರದಲ್ಲೂ ಸಹ ಕ್ರಾಂತಿಯನ್ನುಂಟು ಮಾಡಿದೆ. ಡಿಜಿಟಲ್ ಉಪಕ್ರಮಗಳ ಏಕೀಕರಣವು ಶೈಕ್ಷಣಿಕ ಫಲಿತಾಂಶವನ್ನು ಸುಧಾರಿಸಲು ಅಭೂತಪೂರ್ವ ಅವಕಾಶಗಳನ್ನು ನೀಡುವುದಲ್ಲದೆ,  ಕಲಿಕೆಯಲ್ಲಿ ಸಾಕಷ್ಟು ಪರಿವರ್ತನೆ ತರುವುದಲ್ಲದೆ ವೈಯಕ್ತಿಕ ಕಲಿಕೆಯ ಸಾಮರ್ಥ್ಯವನ್ನು ಹಾಗೂ ಅವಕಾಶಗಳನ್ನು ಕಲ್ಪಿಸಿದೆ. ಶಾಲಾ ಶಿಕ್ಷಣದಲ್ಲಿ ಐಸಿಟಿ ಅನುಷ್ಠಾನವು FOSS (Free and Open Source Software) ಮತ್ತು OER (Open Educational Resources) ಸೇರಿದಂತೆ ಉಚಿತ ಮತ್ತು ಮುಕ್ತ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಕಿರಿಯ ಪ್ರಾಥಮಿಕ ವಿಭಾಗಗಳಲ್ಲಿ ಶಿಕ್ಷಕರ ಸಹಾಯದೊಂದಿಗೆ ಐಸಿಟಿ ಬಳಸುವುದನ್ನು ವಿದ್ಯಾರ್ಥಿಗಳಿಗೆ  ಹೇಳಿಕೊಡಲಾಗುತ್ತದೆ. ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳು ಐಸಿಟಿ  ಪ್ರಯೋಗಾಲಯವನ್ನು ಸ್ವತಹ ತಾವೇ ಬಳಸುತ್ತಾರೆ. ಅಗತ್ಯತೆ ಇದ್ದಲ್ಲಿ ಶಿಕ್ಷಕರ ಸಹಾಯ ಪಡೆಯುತ್ತಾರೆ.

ಬೋಧನಾ ಕಲಿಕಾ ಪ್ರಕ್ರಿಯೆ ಪ್ರೋತ್ಸಾಹಿಸಲು ಸ್ಮಾರ್ಟ್‌ ಕ್ಲಾಸ್‌ರೂಂನಲ್ಲಿ LCD, ಪ್ರೊಜೆಕ್ಟರ್‌ಗಳು ಹಾಗೂ ಸ್ಲೈಡ್‌ಗಳ ಬಳಸುವ ಮೂಲಕ ತರಗತಿಗಳಲ್ಲಿ ಹೆಚ್ಚು ಪರಿಣಾಮಕಾರಿ ಮತ್ತು ಆಸಕ್ತಿದಾಯಕ ಕಲಿಕೆಗೆ ಅನುಕೂಲವಾಗುತ್ತದೆ. ಮೊಬೈಲ್ ಅಪ್ಲಿಕೇಶನ್‌ಗಳ ಸಹಾಯದಿಂದ ವಿದ್ಯಾರ್ಥಿಗಳು ಎಲ್ಲಿಂದಲಾದರೂ ಮತ್ತು ಯಾವುದೇ ಸಮಯದಲ್ಲಿ ಕಲಿಯಬಹುದು. ಡಿಜಿಟಲ್ ಕಲಿಕೆ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಡಿಜಿಟಲ್ ಉಪಕ್ರಮಗಳ ಚಟುವಟಿಕೆಯ ವ್ಯವಸ್ಥೆಯು ಕಲಿಕೆ ಮತ್ತು ಕಂಪ್ಯೂಟರ್ ಸಾಕ್ಷರತೆಯನ್ನು ಪಡೆಯಲು ಬೆಂಬಲ ಒದಗಿಸುವುದು.

ಈ ಘಟಕವು I ರಿಂದ XII ತರಗತಿಗಳನ್ನು ಒಳಗೊಂಡಿರುತ್ತದೆ. ಇಲ್ಲಿ ಗಣಕಯಂತ್ರ ಪರಿಕರಗಳಾದ ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳು, ನೋಟ್‌ಬುಕ್‌ಗಳು, ಸಂಯೋಜಿತ ಬೋಧನಾ ಕಲಿಕಾ ಸಾಧನಗಳು ಮತ್ತು open source operating system ಅಲ್ಲದೆ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗೆ ಸಂಬಂಧಿಸಿದಂತೆ ತರಬೇತಿ ಹಾಗೂ ಸಂಪನ್ಮೂಲಗಳನ್ನು ಖರೀದಿಸಲು ಬೆಂಬಲವನ್ನು ಒದಗಿಸಲಾಗುತ್ತದೆ.

ಇದನ್ನು ಪರಿಗಣಿಸಿ, ಕರ್ನಾಟಕವು ICT ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸಿದೆ ಮತ್ತು ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮ (TALP) ಅಡಿಯಲ್ಲಿ ಎಲ್ಲಾ ತಂತ್ರಜ್ಞಾನ ಆಧಾರಿತ ಕಾರ್ಯಕ್ರಮಗಳನ್ನು ಸಂಯೋಜಿಸಿದೆ. TALP ಕಾರ್ಯಕ್ರಮದಡಿ EDUSAT SSA ಅಡಿಯಲ್ಲಿ ಕಂಪ್ಯೂಟರ್ ಆಧಾರಿತ ಕಲಿಕಾ ಕೇಂದ್ರಗಳು, ರೇಡಿಯೋ ಕಾರ್ಯಕ್ರಮಗಳು ಮತ್ತು ಕರ್ನಾಟಕದಲ್ಲಿ IT ಶಾಲೆಗಳನ್ನು ಒಳಗೊಂಡಿದೆ.

ಈ ಚಟುವಟಿಕೆಯಡಿ ಗಣಕಯಂತ್ರ ಪರಿಕರಗಳನ್ನು ಖರೀದಿಸುವ ಯೋಜನೆಯನ್ನು  ಡಿಸೆಂಬರ್, 2004 ರಲ್ಲಿ ಪ್ರಾರಂಭಿಸಲಾಯಿತು. ಪ್ರೌಢ ಶಾಲಾ ಹಂತದ ವಿದ್ಯಾರ್ಥಿಗಳಲ್ಲಿ ಮುಖ್ಯವಾಗಿ ICT ಕೌಶಲ್ಯಗಳ ಮೇಲೆ ತಮ್ಮ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಮತ್ತು ಕಂಪ್ಯೂಟರ್ ಆಧಾರಿತ ಕಲಿಕಾ ಪ್ರಕ್ರಿಯೆಯ ಮೂಲಕ ಕಲಿಯುವಂತೆ ಮಾಡಲು ಅವಕಾಶಗಳನ್ನು ಒದಗಿಸಲಾಗುತ್ತಿದೆ. ಈ ಯೋಜನೆಯು ವಿವಿಧ ಸಾಮಾಜಿಕ-ಆರ್ಥಿಕ ಮತ್ತು ಇತರ ಭೌಗೋಳಿಕ ಅಡೆತಡೆಗಳ ವಿದ್ಯಾರ್ಥಿಗಳ ನಡುವಿನ ಡಿಜಿಟಲ್ ಅಂತರವನ್ನು ಕಡಿಮೆ ಮಾಡಲು ಪ್ರಮುಖ ಪಾತ್ರವಹಿಸುತ್ತದೆ.

 

ಐಸಿಟಿಯ ಉದ್ದೇಶಗಳು:·       

·        ಪರಿಣಾಮಕಾರಿ ಬೋಧನೆ - ಕಲಿಕಾ ಪ್ರಕ್ರಿಯೆ.

·        ನೈದಾನಿಕ ಪರೀಕ್ಷೆ ಮತ್ತು ಪರಿಹಾರ ಬೋಧನೆಯ ಮೂಲಕ ಕಲಿಕಾ ಫಲಿತಾಂಶಗಳನ್ನು ಅತ್ಯುತ್ತಮವಾಗಿಸಲು ಸಹಾಯ ಮಾಡುವುದು

·        ಮೌಲ್ಯಮಾಪನ ಚಟುವಟಿಕೆಗಳ ಮೂಲಕ ಕಲಿಕಾ ಫಲಗಳನ್ನು ಅರಿಯುವುದು.   

·        ಹೆಚ್ಚುತ್ತಿರುವ ತಾಂತ್ರಿಕ ಜಗತ್ತಿನಲ್ಲಿ,ಮಕ್ಕಳು ಹೊಸ ತಂತ್ರಜ್ಞಾನಗಳ ಬಗ್ಗೆ ಕಲಿಯಲು ಹಾಗೂ ಮುಕ್ತತೆಯನ್ನು ಬೆಳೆಸಿಕೊಳ್ಳಲು ಮತ್ತು ಅವರ ಜೀವನದುದ್ದಕ್ಕೂ ಅವುಗಳನ್ನು ಹೇಗೆ ಪರಿಣಾಮಕಾರಿಯಾಗಿ ಬಳಸುವುದು ಎಂಬುದರ ಅರಿವನ್ನು ಬೆಳೆಸುವುದು. ಇದು ವಿದ್ಯಾರ್ಥಿಗಳ ಕಲಿಕೆಯನ್ನು ಉತ್ತಮಗೊಳಿಸಲು ಶಿಕ್ಷಕರಿಗೆ ಒಂದು ಸಾಧನವಾಗಿದೆ.

·        ವಿದ್ಯಾರ್ಥಿಗಳ ಕಲಿಕಾ ಫಲಿತಾಂಶಗಳನ್ನು ಸುಧಾರಿಸುವುದು ಹಾಗೂ ಬೋಧನೆ-ಕಲಿಕೆ ಮೌಲ್ಯಮಾಪನ ಪ್ರಕ್ರಿಯೆಯನ್ನು ಉತ್ತಮಗೊಳಿಸುವುದು.

·        ಹಿಂದೂಳಿದ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣದ ಸೌಲಭ್ಯ ನೀಡುವುದು.

·        ಮಕ್ಕಳು ಹೇಗೆ ಕಲಿಯುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮತ್ತು ಶೈಕ್ಷಣಿಕ ಯೋಜನೆ, ಆಡಳಿತ ಮತ್ತು ನಿರ್ವಹಣೆಯನ್ನು ಸುಗಮಗೊಳಿಸಲು ಡೇಟಾದ ಲಭ್ಯತೆಯನ್ನು ಹೆಚ್ಚಿಸಲು ಉಪಯೋಗಿಸುವುದು.

·        ಗ್ರಾಮೀಣ ಸರ್ಕಾರಿ ಶಾಲಾ ಮಕ್ಕಳಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಕಲಿಕೆಯನ್ನು ವೃದ್ಧಿಸುವುದು.

·        ಮಕ್ಕಳ ಸಾಧನೆಯ ಮಟ್ಟವನ್ನು ಸುಧಾರಿಸಲು, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗಳಿಗೆ ಆಕರ್ಷಿಸಲು ಮತ್ತು ಹಾಜರಾತಿ ಪ್ರಮಾಣವನ್ನು ಹಿಚ್ಚಿಸುವುದು.

·        ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣವನ್ನು ಪಡೆಯಲು ಮತ್ತು ಅದರ ಅನ್ವಯಿಕೆಗಳನ್ನು ಅರ್ಥಮಾಡಿಕೊಳ್ಳಲು ಸಹಕರಿಸುವುದು.

·        Multi Media ಸಾಫ್ಟ್‌ವೇರ್ ಸಿಡಿಗಳನ್ನು ಬಳಸಿಕೊಂಡು ಕಂಪ್ಯೂಟರ್ ಶಿಕ್ಷಣದ ಮೂಲಕ ಪಠ್ಯಕ್ರಮದ ವಿಷಯಗಳಲ್ಲಿ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಹೆಚ್ಚಿಸುವುದು. ವಿದ್ಯಾರ್ಥಿಗಳಿಗೆ ಇ-ಮೇಲ್ ಮತ್ತು ಇಂಟರ್ನೆಟ್‌ನ ಸಂವಹನ ಮಾಧ್ಯಮವನ್ನು