ಹಿನ್ನಲೆ:
ಸೇವಾನಿರತ ಶಿಕ್ಷಕರುಗಳ ವೃತ್ತಿ ಸಾಮರ್ಥ್ಯ ಮತ್ತು ಕೌಶಲ್ಯಗಳನ್ನು ಹೆಚ್ಚಿಸುವ ಸಲುವಾಗಿ ಕಾಲಕಾಲಕ್ಕೆ ಅಗತ್ಯ ತರಬೇತಿಯನ್ನು ನೀಡಬೇಕಾಗುತ್ತದೆ. ತರಬೇತಿಯು ಅವರುಗಳಲ್ಲಿ ಶಿಕ್ಷಣ ಕೌಶಲ್ಯಗಳನ್ನು ಹೆಚ್ಚಿಸುವುದರ ಜೊತೆಗೆ ಅವರ ತರಗತಿ ನಿರ್ವಹಣೆಯನ್ನು ಸುಧಾರಿಸುವುದು, ವೃತ್ತಿಪರ ಬೆಳವಣಿಗೆಯನ್ನು ಉತ್ತೇಜಿಸುವುದು ಮತ್ತು ಅವರು ಬದಲಾಗುತ್ತಿರುವ ಶೈಕ್ಷಣಿಕ ಅಗತ್ಯಗಳಿಗೆ ಹೊಂದಿಕೊಳ್ಳಲು ನೆರವಾಗುತ್ತದೆ. ಶಿಕ್ಷಕರಿಗೆ ನೀಡುವ ತರಬೇತಿಯು ವಿದ್ಯಾರ್ಥಿಗಳ ಫಲಿತಾಂಶಗಳನ್ನು ಸುಧಾರಿಸುವಲ್ಲಿ ಮತ್ತು ಹೆಚ್ಚು ಸಕಾರಾತ್ಮಕ ಮತ್ತು ಪರಿಣಾಮಕಾರಿ ಕಲಿಕಾ ವಾತಾವರಣವನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಉದ್ದೇಶ:
ಶಿಕ್ಷಕ ತರಬೇತಿ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ನವೀನ ಬೋಧನಾ ವಿಧಾನಗಳ ಮೂಲಕ ಪರಿಣಾಮಕಾರಿಯಾಗಿ ಕಲಿಸಲು ಮತ್ತು ಸಕಾರಾತ್ಮಕ ಕಲಿಕಾ ವಾತಾವರಣವನ್ನು ಬೆಳೆಸಲು ಅಗತ್ಯವಿರುವ ಜ್ಞಾನ, ಕೌಶಲ್ಯ ಮತ್ತು ವರ್ತನೆಗಳೊಂದಿಗೆ ಶಿಕ್ಷಕರನ್ನು ಸಿದ್ದಪಡಿಸುವ ಮತ್ತು ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ. ಶಿಕ್ಷಕರಿಗೆ ನೀಡುವ ತರಬೇತಿಯು ಅವರ ಶಿಕ್ಷಣ ಕೌಶಲ್ಯಗಳನ್ನು ಹೆಚ್ಚಿಸುತ್ತದೆ, ಅವರ ಜೀವನನ ಕಲಿಕೆಯನ್ನು ಉತ್ತೇಜಿಸುತ್ತದೆ ಮತ್ತು ಅವರು ತಮ್ಮ ಬೋಧನೆಯಲ್ಲಿ ಇತ್ತೀಚಿನ ಶೈಕ್ಷಣಿಕ ಸಂಶೋಧನೆಗಳನ್ನು ಅಳವಡಿಸಿಕೊಳ್ಳಲು ನೆರವಾಗುತ್ತದೆ.
ವ್ಯಾಪ್ತಿ:
ಶಿಕ್ಷಕರ ತರಬೇತಿಯು ಅವರು ತರಗತಿ, ಶಾಲೆ ಮತ್ತು ವಿಶಾಲ ಸಮುದಾಯದಲ್ಲಿ ತಮ್ಮ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ವ್ಯಾಪ್ತಿಯನ್ನು ಹೊಂದಿದೆ. ತರಬೇತಿಯು ಜ್ಞಾನ, ಕೌಶಲ್ಯ, ವರ್ತನೆಗಳು ಮತ್ತು ನಡವಳಿಕೆಗಳೊಂದಿಗೆ ಶಿಕ್ಷಕರನ್ನು ಸಜ್ಜುಗೊಳಿಸಲು ಅನುವಾಗುವಂತೆ ವಿನ್ಯಾಸಗೊಳಿಸಲಾದ ಕಾರ್ಯಕ್ರಮಗಳು, ನೀತಿಗಳು ಮತ್ತು ಪ್ರಕ್ರಿಯೆಗಳನ್ನು ಒಳಗೊಂಡಿದೆ. ನಾವಿನ್ಯಯುತ ಬೋಧನೆ, ಸಮರ್ಥ ತರಗತಿ ನಿರ್ವಹಣೆ ಮತ್ತು ಪರಿಣಾಮಕಾರಿ ನಾಯಕತ್ವವನ್ನು ಶಿಕ್ಷಕರಲ್ಲಿ ತರಬೇತಿಯು ಬೆಳೆಸುತ್ತದೆ.
ಅನುದಾನ ಲಭ್ಯತೆ:
ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವೃತ್ತಿ ಸಾಮಾರ್ಥ್ಯವನ್ನು ವೃದ್ದಿಸುವ ಸಲುವಾಗಿ ಸೇವಾನಿರತ ಶಿಕ್ಷಕರ ತರಬೇತಿಯನ್ನು ಹಮ್ಮಿಕೊಳ್ಳುವ ಸಲುವಾಗಿ ಪ್ರತಿ ವರ್ಷ ಪಿ.ಎ.ಬಿ ವತಿಯಿಂದ ಅನುದಾನವು ಅನುಮೋದನೆಗೊಂಡು ಬಿಡುಗಡೆಯಾಗುತ್ತದೆ. ಸದರಿ ಅನುದಾನದ ವತಿಯಿಂದ DSERT ಮೂಲಕ ಜಿಲ್ಲಾ ಮತ್ತು ಬ್ಲಾಕ್ ಹಂತಗಳಲ್ಲಿ ತರಬೇತಿ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗುತ್ತದೆ. ಅಲ್ಲದೇ ವೆಚ್ಚ ರಹಿತವಾಗಿಯೂ DSERT ಮೂಲಕ ಕೆಲವು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
2024-25ನೇ ಸಾಲಿನಲ್ಲಿ ಈ ಕೆಳಕಂಡಂತೆ ವಿವಿಧ ತರಬೇತಿ ಕಾರ್ಯಕ್ರಮಗಳನ್ನು DSERT ಮೂಲಕ ನಡೆಸಲಾಗಿದೆ.
- ಐಐಎಸ್ಸಿ ತರಬೇತಿ:
ಉದ್ದೇಶ:
- ಶಿಕ್ಷಕರಿಗೆ ತರಬೇತಿ ನೀಡಲು ನಾವೀನ್ಯ ಪರಿಕಲ್ಪನೆಗಳನ್ನು ಬಳಸಿಕೊಂಡು ಪ್ರೌಢ ಶಾಲಾ ಹಂತದಲ್ಲಿ ಹ್ಯಾಂಡ್ಸ್-ಆನ್ ಪ್ರಯೋಗಗಳನ್ನು ಬಳಸಿ ಶಿಕ್ಷಣದಲ್ಲಿ ಕಲಿಕಾ ಅಂತರವನ್ನು ಪರಿಹರಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
- ಈ ತರಬೇತಿಯನ್ನು ಪ್ರತಿ ವರ್ಷ ಜುಲೈ ಮಾಹೆಯಿಂದ ಪ್ರಾರಂಭ ಮಾಡಿ ಫೆಬ್ರವರಿ- ಅಂತ್ಯದವರೆಗೆ ನಡೆಸಲು ಯೋಜಿಸಲಾಗಿದೆ.
- 500 ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲಾ ಶಿಕ್ಷಕರಿಗೆ ಪ್ರತಿ ವರ್ಷ ತರಬೇತಿ ನೀಡುವ ಗುರಿ ಹೊಂದಿದೆ.
ಪ್ರಾಜೆಕ್ಟ್ನ ವಿನ್ಯಾಸ :
- ಪ್ರತಿ ಬ್ಯಾಚ್ನಲ್ಲಿ ಒಟ್ಟು 120 ಗಣಿತ ಮತ್ತು ವಿಜ್ಞಾನ ಶಿಕ್ಷಕರಿರುವಂತೆ 10 ದಿನಗಳ ಸನಿವಾಸ ತರಬೇತಿಯನ್ನು ಐ.ಐ.ಎಸ್.ಸಿ ರವರು ನಡೆಸುತ್ತಾರೆ.
- ಈ ತರಬೇತಿಯಲ್ಲಿ ದಿನಕ್ಕೆ 10 ರಿಂದ 12 ಗಂಟೆಗಳ ಕಾಲ 8, 9 ಮತ್ತು 10ನೇ ತರಗತಿಯ ಪಠ್ಯವಿಷಯಗಳ ಬೋಧನೆಗೆ ಸಂಬಂಧಿಸಿದಂತೆ ಚಟುವಟಿಕೆ ಆಧಾರಿತ ತರಬೇತಿ ನೀಡುತ್ತಾರೆ.
- ಗಣಿತ ವಿಷಯದಲ್ಲಿ 25ಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿ 300 ಕ್ಕೂ ಹೆಚ್ಚು ಸಮಸ್ಯೆಗಳನ್ನು ಬಿಡಿಸುವ ಕೌಶಲವನ್ನು ಹೊಂದುವಂತೆ ಮಾಡಲಾಗುತ್ತದೆ.
- ವಿಜ್ಞಾನ ವಿಷಯದಲ್ಲಿ ಭೌತಶಾಸ್ತçಕ್ಕೆ 05 ದಿನಗಳು, ರಸಾಯನಶಾಸ್ತçಕ್ಕೆ 02 ದಿನಗಳು, ಜೀವಶಾಸ್ತçಕ್ಕೆ 02 ದಿನಗಳು ಹಾಗೂ 01 ದಿನವನ್ನು ಸಾಮಾನ್ಯ ವಿಷಯಕ್ಕೆ ಹಂಚಿಕೆ ಮಾಡಿಕೊಂಡಿರುತ್ತಾರೆ.
- 01 ಬ್ಯಾಚ್ನಲ್ಲಿ 60 ಜನ ಗಣಿತ ಶಿಕ್ಷಕರು ಹಾಗೂ 60 ಜನ ವಿಜ್ಞಾನ ಶಿಕ್ಷಕರನ್ನು ತರಬೇತಿಗೆ ಆಹ್ವಾನಿಸುತ್ತಾರೆ.
- ತರಬೇತಿಯ ಮೊದಲ ದಿನ ಪೂರ್ವಪರೀಕ್ಷೆ ಹಾಗೂ ತರಬೇತಿಯ ಕೊನೆಯ ದಿನ ಸಾಫಲ್ಯ ಪರೀಕ್ಷೆ ಮತ್ತು ತರಬೇತಿ ಮಧ್ಯ ಪಠ್ಯ ಪುಸ್ತಕದ ಘಟಕಗಳ ಆಧಾರಿತವಾಗಿ ಸಾಧನಾ ಪರೀಕ್ಷೆಗಳನ್ನು ನಡೆಸಿ ಶಿಕ್ಷಕರ ಕಲಿಕಾ ಪ್ರಗತಿಯನ್ನು ಪೂರ್ವ ಮತ್ತು ಸಾಫಲ್ಯ ಪರೀಕ್ಷೆಯೊಂದಿಗೆ ಹೋಲಿಕೆ ಮಾಡುತ್ತಾರೆ.
- 2024-25ನೇ ಸಾಲಿಗೆ IISc ಚಳ್ಳಕೆರೆಯಲ್ಲಿ ನಡೆಯುವ ಗಣಿತ ಮತ್ತು ವಿಜ್ಞಾನ ಬೋಧಿಸುವ ಪ್ರೌಢಶಾಲಾ ಶಿಕ್ಷಕರ ತರಬೇತಿಗೆ ಲೆಕ್ಕ ಶೀರ್ಷಿಕೆ 2202-01-109-0-08-059ರಡಿಯಲ್ಲಿ 30 ಲಕ್ಷಗಳು ಬಿಡುಗಡೆಯಾಗಿದ್ದು, ಒಟ್ಟು 300 ಶಿಕ್ಷಕರಿಗೆ ತರಬೇತಿ ನೀಡಲು ಯೋಜಿಸಲಾಗಿತ್ತು. ನವೆಂಬರ್ ಮಾಹೆಯಿಂದ 3 ಬ್ಯಾಚ್ಗಳಲ್ಲಿ ತರಬೇತಿ ನಡೆದಿದ್ದು, ಒಟ್ಟು 293 ಶಿಕ್ಷಕರು ತರಬೇತಿ ಪಡೆದಿರುತ್ತಾರೆ ಹಾಗೂ ಈ ತರಬೇತಿಗೆ ರೂ. 38.97 ಲಕ್ಷಗಳ ಖರ್ಚು ಭರಿಸಲಾಗಿದೆ
- ವಿಷಯ ಸಂಪದೀಕರಣ:
- ಹಿನ್ನೆಲೆ:
- ಪ್ರಸ್ತುತ ಸನ್ನಿವೇಶಕ್ಕೆ ಅನುಗುಣವಾಗಿ ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಬದಲಾವಣೆಗಳನ್ನು ತರಬೇಕಾಗಿದೆ. ಶಿಕ್ಷಕರ ಅಭಿವೃದ್ಧಿಯನ್ನು ಅಲ್ಪಕಾಲೀನ ವಾರ್ಷಿಕ ಯೋಜನೆಗಳಿಂದ ಸಾಕಾರಗೊಳಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ದೀರ್ಘಾವಧಿಯ ಯೋಜನೆಯಾದ ಗುರುಚೇತನ ಕಾರ್ಯಕ್ರಮಕ್ಕೆ ಪಠ್ಯಕ್ರಮವನ್ನು ರಚಿಸಿದೆ.
- 1 ರಿಂದ 8 ನೇ ತರಗತಿಗಳಲ್ಲಿ ಕಲಿಕೆಯನ್ನು ಅನುಕೂಲಿಸುವ ಸರ್ಕಾರಿ ಶಾಲಾ ಶಿಕ್ಷಕರಿಗೆ ಗುರುಚೇತನ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕನ್ನಡ, ಹಿಂದಿ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ನಲಿ ಕಲಿ, ಶೈಕ್ಷಣಿಕ ದೃಷ್ಟಿಕೋನ ಹಾಗೂ ದೈಹಿಕ ಶಿಕ್ಷಣ ವಿಷಯಗಳಲ್ಲಿ ತರಬೇತಿ ಮಾಡ್ಯೂಲ್ಗಳನ್ನು ಸಿದ್ಧಪಡಿಸಲಾಗಿದೆ. ಈವರೆಗೆ 175 ಮಾಡ್ಯೂಲ್ಗಳನ್ನು ಸೃಜಿಸಲಾಗಿದೆ.
- ಯೋಜನೆಯ ವಿವರ:
- ಸ್ಥಾಪನೆ: ಪ್ರಸ್ತುತ ಸನ್ನಿವೇಶಕ್ಕೆ ಅನುಗುಣವಾಗಿ ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿಬದಲಾವಣೆಗಳನ್ನು ತರಬೇಕಿದೆ. ಶಿಕ್ಷಕರ ಅಭಿವೃದ್ಧಿಯನ್ನು ಅಲ್ಪಕಾಲೀನ ವಾರ್ಷಿಕ ಯೋಜನೆಗಳಿಂದ ಸಾಕಾರಗೊಳಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ದೀರ್ಘಾವಧಿಯ ಯೋಜನೆಯಾದ ಗುರುಚೇತನ ಕಾರ್ಯಕ್ರಮಕ್ಕೆ ಪಠ್ಯಕ್ರಮವನ್ನು ರಚಿಸಿದೆ.
- ಇಲ್ಲಿಯವರೆವಿಗೂ ಗುರುಚೇತನ ಕಾರ್ಯಕ್ರಮದಡಿ 175 ಮಾಡ್ಯೂಲ್ಗಳನ್ನು ರಚಿಸಿ 1 ರಿಂದ 8 ನೇ ತರಗತಿ ಭೋದಿಸುವ ಸೇವಾನಿರತ ಒಟ್ಟು 145738 ಶಿಕ್ಷಕರಿಗೆ ಟಿ.ಟಿ.ಎಂ.ಎಸ್ ಆಯ್ಕೆ ಆಧಾರಿತ ತರಬೇತಿಯನ್ನು ನೀಡಲಾಗಿದೆ. ಈ ತರಬೇತಿ ಕಾರ್ಯಕ್ರಮವು ವಿಶಿಷ್ಟವಾಗಿದ್ದು, ಶಿಕ್ಷಕರ ಆಯ್ಕೆ ಮತ್ತು ಸ್ಥಳೀಯ ಅಗತ್ಯಗಳಿಗನುಗುಣವಾಗಿ ಕಡ್ಡಾಯ ತರಬೇತಿಗಳನ್ನು ಇದರಡಿ ಆಯೋಜಿಸಲಾಗುತ್ತದೆ.
ಉದ್ದೇಶಗಳು:
- ಶಿಕ್ಷಕರನ್ನು ಚಿಂತನಶೀಲ ಅಭ್ಯಾಸಿಗರನ್ನಾಗಿ (Reflective Practitioner)ಮಾಡುವುದು.
- ಶಿಕ್ಷಕರು ಸ್ವ ಪ್ರೇರಣೆಯಿಂದ ವೃತ್ತಿಪರ ಅಭಿವೃಧ್ಧಿಯಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸುವುದು.
ಶಾಲಾ ಶಿಕ್ಷಣದ ಸಂದರ್ಭದಲ್ಲಿ ಮಕ್ಕಳ ಸ್ವಕಲಿಕೆಯ ಅವಕಾಶಗಳನ್ನು ಅರ್ಥೈಸಲು ಮತ್ತು ಅನುಕೂಲಿಸಲು ಸ್ವಾಯತ್ತ & ಸಮರ್ಥ ಶಿಕ್ಷಕರನ್ನು ರೂಪಿಸುವುದು.
2023-24ನೇ ಸಾಲಿನಲ್ಲಿ ಸೃಜಿಸಿರುವ ವಿಷಯ ಸಂಪಧೀಕರಣ ಮಾಡ್ಯೂಲ್ಗಳಿಗೆ ಬ್ಯಾಚ್ ಕ್ರಿಯೇಷನ್ ಮಾಡಲು ಲೆಕ್ಕ ಶೀರ್ಷಿಕೆ 2202-01-109-0-08-059ರಡಿಯಲ್ಲಿ ಶೂನ್ಯ ಬಜೆಟ್ರಡಿಯಲ್ಲಿ ರಾಜ್ಯದ 7 ಜಿಲ್ಲೆಗಳಾದ ದಾವಣಗೆರೆ, ಕೋಲಾರ, ತುಮಕೂರು, ಬಳ್ಳಾರಿ, ಚಿಕ್ಕಮಗಳೂರು, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಿಗೆ ತಲಾ 1.50 ಲಕ್ಷಗಳಂತೆ ಒಟ್ಟು ರೂ. 10.50 ಲಕ್ಷಗಳು ಬಿಡುಗಡೆಯಾಗಿದ್ದು, ಒಟು 8.54 ಲಕ್ಷಗಳ ಖರ್ಚು ಭರಿಸಿದೆ ಮತ್ತು ಬ್ಯಾಚ್ ಕ್ರಿಯೇಷನ್ ಕಾರ್ಯ ಪ್ರಗತಿಯಲ್ಲಿದೆ.
3. ಗಣಿತ ಗಣಕ: · ಕರ್ನಾಟಕ ಸರ್ಕಾರದ ಒಂದು ಉಪಕ್ರಮವಾದ ಗಣಿತ ಗಣಕ, ವೈಯಕ್ತಿಕಗೊಳಿಸಿದ 1 ರಿಂದ 1 ಫೋನ್ ಟ್ಯೂಟರಿಂಗ್ ಮೂಲಕ 3-5 ನೇ ತರಗತಿಯ ವಿದ್ಯಾರ್ಥಿಗಳಿಗೆ ಅಡಿಪಾಯದ ಸಂಖ್ಯಾಶಾಸ್ತ್ರವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಸೊರಬ ಮತ್ತು ರಾಯಚೂರಿನಲ್ಲಿ ಯಶಸ್ವಿ ಪ್ರಾಯೋಗಿಕ ನಂತರ, ಕಾರ್ಯಕ್ರಮವು 2024-25 ರಲ್ಲಿ 17 ಜಿಲ್ಲೆಗಳಲ್ಲಿ 93 ಮಹತ್ವಾಕಾಂಕ್ಷೆಯ ಬ್ಲಾಕ್ಗಳಿಗೆ ವಿಸ್ತರಿಸಿದೆ. ಸ್ಕೇಲ್-ಅಪ್ಗಾಗಿ ತರಬೇತಿ ಪೂರ್ಣಗೊಂಡಿದೆ, 68 ಮಾಸ್ಟರ್ ಸಂಪನ್ಮೂಲ ವ್ಯಕ್ತಿಗಳು (MRPs) ತರಬೇತಿ ~1,300 ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು (CRPs), ಅವರು ಪ್ರತಿಯಾಗಿ ~33,000 ಶಿಕ್ಷಕರಿಗೆ ತರಬೇತಿ ನೀಡಿದರು. ತರಬೇತಿ ಪ್ರಕ್ರಿಯೆಯ ಭಾಗವಾಗಿ, ಪರಿಣಾಮಕಾರಿ ತರಬೇತಿ ಮತ್ತು ಅನುಷ್ಠಾನವನ್ನು ಬೆಂಬಲಿಸಲು MRP ಗಳು ಮತ್ತು CRP ಗಳಿಗೆ ವೀಡಿಯೊ ಸಂಪನ್ಮೂಲಗಳೊಂದಿಗೆ ನಾವು ಶಿಕ್ಷಕರಿಗಾಗಿ ಗಣಿತ ಗಣಕದಲ್ಲಿ ಬಹು ವೀಡಿಯೊಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಹೆಚ್ಚುವರಿಯಾಗಿ, ಪ್ರೋಗ್ರಾಂನಲ್ಲಿ ವ್ಯಾಪಕವಾದ ಪ್ರಭಾವ ಮತ್ತು ಸ್ಪಷ್ಟತೆಯನ್ನು ಖಚಿತಪಡಿಸಿಕೊಳ್ಳಲು ನಾವು ಎಲ್ಲಾ ಶಿಕ್ಷಕರು, CRP ಗಳು ಮತ್ತು ಕ್ಷೇತ್ರ ಅಧಿಕಾರಿಗಳಿಗೆ DSERT ಸಹಾಯದಿಂದ YouTube ಲೈವ್ ಸ್ಟ್ರೀಮ್ ಅನ್ನು ನಡೆಸಿದ್ದೇವೆ. ಶಿಕ್ಷಕರು ಈಗ ತಲಾ ನಾಲ್ವರು ವಿದ್ಯಾರ್ಥಿಗಳಿಗೆ ಐದು ವಾರಗಳ ಚಕ್ರಗಳಲ್ಲಿ ಬೋಧನೆಯನ್ನು ಪ್ರಾರಂಭಿಸಿದ್ದಾರೆ, ಪೋಷಕರ ಬೆಂಬಲದೊಂದಿಗೆ ಮೂಲಭೂತ ಗಣಿತ ಕೌಶಲ್ಯಗಳನ್ನು ಬಲಪಡಿಸುತ್ತಾರೆ. · 1,398 ಕ್ಲಸ್ಟರ್ಗಳಲ್ಲಿ 1,000 ಕ್ಕೂ ಹೆಚ್ಚು ವರದಿಗಳನ್ನು ಈಗಾಗಲೇ ಸ್ವೀಕರಿಸಿ, ಅನುಷ್ಠಾನವು ಪೂರ್ಣ ಸ್ವಿಂಗ್ನಲ್ಲಿದೆ. ಸಿಆರ್ಪಿಗಳು ವರದಿ ಮಾಡಿದಂತೆ, ಈಗಿನಂತೆ, ಸರಿಸುಮಾರು 24,000 ಶಿಕ್ಷಕರಿಂದ ಸುಮಾರು 1,80,000 ಫೋನ್ ಟ್ಯೂಟರಿಂಗ್ ಕರೆಗಳನ್ನು ಮಾಡಲಾಗಿದೆ. ವಾಟ್ಸಾಪ್ ಬೋಟ್ ಮೂಲಕ 2 ಲಕ್ಷಕ್ಕೂ ಹೆಚ್ಚು ಕರೆಗಳನ್ನು ಲಾಗ್ ಮಾಡಲಾಗಿದೆ, ಪಾರದರ್ಶಕತೆ ಮತ್ತು ವಿದ್ಯಾರ್ಥಿಗಳ ಪ್ರಗತಿಯ ಮೇಲ್ವಿಚಾರಣೆಯನ್ನು ಖಾತ್ರಿಪಡಿಸಲಾಗಿದೆ. · ಶಿಕ್ಷಕರಿಂದ ಆರಂಭಿಕ ಪ್ರತಿಕ್ರಿಯೆ ಮುಖ್ಯಾಂಶಗಳು ಬಲವಾದ ವಿದ್ಯಾರ್ಥಿ ನಿಶ್ಚಿತಾರ್ಥ ಮತ್ತು ಪೋಷಕ-ಶಿಕ್ಷಕರ ಸಂಬಂಧಗಳಲ್ಲಿ ಧನಾತ್ಮಕ ಬದಲಾವಣೆಗಳು. · ಸರ್ಕಾರ ಮತ್ತು ಪಾಲುದಾರರಿಂದ ನಡೆಯುತ್ತಿರುವ ಬೆಂಬಲದೊಂದಿಗೆ-ಅಲೋಕಿತ್ (ತಂತ್ರ ಮತ್ತು ಅನುಷ್ಠಾನ), J-PAL (ಮೇಲ್ವಿಚಾರಣೆ ಮತ್ತು ಸಂಶೋಧನೆ), ಮತ್ತು ಯೂತ್ ಇಂಪ್ಯಾಕ್ಟ್ (ಜ್ಞಾನ)-ಗಣಿತ ಗಣಕ ಅವರು ಕರ್ನಾಟಕದಲ್ಲಿ ಗಣಿತ ಕಲಿಕೆಯ ಮೇಲೆ ಶಾಶ್ವತವಾದ ಪ್ರಭಾವವನ್ನು ಸೃಷ್ಟಿಸಲು ಸಿದ್ಧರಾಗಿದ್ದಾರೆ.
· 2024-25ನೇ ಸಾಲಿನಲ್ಲಿ ಲೆಕ್ಕ ಶೀರ್ಷಿಕೆ 2202-02-107-0-06 ಅಭ್ಯುದಯ ಯೋಜನೆ 051 ಸಾಮಾನ್ಯ ವೆಚ್ಚಗಳ ಅಡಿಯಲ್ಲಿ ಗಣಿತ ಗಣಕ ತರಬೇತಿಗಾಗಿ ರೂ. 1,16,88,000 ಗಳನ್ನು ಬಿಡುಗಡೆ ಮಾಡಿರುತ್ತಾರೆ. ಇದರಲ್ಲಿ 72 ಎಂ.ಆರ್.ಪಿಗಳಿಗೆ ಡಯಟ್ ಮಂಡ್ಯದಲ್ಲಿ 2024ರ ಅಕ್ಪೋಬರ್ 15 ಮತ್ತು 16 ರಂದು ತರಬೇತಿ ಆಯೋಜಿಸಲಾಗಿದೆ. ಇದರಲ್ಲಿ ಒಟ್ಟು 66 ಶಿಬಿರಾರ್ಥಿಗಳು ಮತ್ತು 6 ಎಸ್.ಆರ್.ಪಿಗಳು ಭಾಗವಹಿಸಿರುತ್ತಾರೆ. ಈ ತರಬೇತಿಗೆ ಒಟ್ಟು ರೂ. 1,50,307/- ಗಳು ಖರ್ಚು ಭರಿಸಲಾಗಿದೆ.
ಗಣಿತ ಗಣಕ ಶಿಕ್ಷಕರ ತರಬೇತಿಯು ರಾಜ್ಯದ 17 ಜಿಲ್ಲೆಗಳಲ್ಲಿ ನಡೆದಿದ್ದು, ಒಟ್ಟು 34960 ಗುರಿ ಹೊಂದಲಾಗಿದೆ, ಇದುವರೆಗೆ ಸಿ.ಆರ್.ಪಿ ಮತ್ತು ಶಿಕ್ಷಕರು ಸೇರಿದಂತೆ ಒಟ್ಟು 35142 ಶಿಕ್ಷಕರು ತರಬೇತಿ ಪಡೆದಿರುತ್ತಾರೆ. ಇದುವರೆಗೂ ರೂ. 70.07 ಲಕ್ಷಗಳ ಖರ್ಚು ಭರಿಸಲಾಗಿದೆ ಹಾಗೂ ಕೆ2 ನಲ್ಲಿ ಹಣ ಸೆಳೆಯುವ ಕಾರ್ಯ ಪ್ರಗತಿಯಲ್ಲಿದೆ.
4. ಮರುಸಿಂಚನ ತರಬೇತಿ: ಮರುಸಿಂಚನ ಕಾರ್ಯಕ್ರಮವು 2023-2024 ಮತ್ತು 2024-2025 ರ ಬಜೆಟ್ ಭಾಷಣದಲ್ಲಿ ಘೋಷಿಸಿದಂತೆ ಕರ್ನಾಟಕ ಸರ್ಕಾರದ ಉಪಕ್ರಮವಾಗಿದೆ. ಟ್ರಾನ್ಸ್ಫಾರ್ಮ್ ಸ್ಕೂಲ್ಸ್, ಪೀಪಲ್ ಫಾರ್ ಆಕ್ಷನ್ ತಾಂತ್ರಿಕ ಬೆಂಬಲ ಪಾಲುದಾರ. ಇದು ಐದು ಶೈಕ್ಷಣಿಕ ವರ್ಷಗಳಲ್ಲಿ ಪ್ರತಿ ತರಗತಿಗೆ 50 ಗಂಟೆಗಳಕಲಿಕೆಯ ಕಾರ್ಯಕ್ರಮವಾಗಿದೆ ಮತ್ತು ಅಡಿಪಾಯ ಮತ್ತು ಪೂರ್ವ-ಅವಶ್ಯಕ ಸಾಮರ್ಥ್ಯಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ, ಕಲಿಕೆಯ ಅಂತರವನ್ನು ನಿವಾರಿಸುತ್ತದೆ ಮತ್ತು 6-10 ತರಗತಿಯ ವಿದ್ಯಾರ್ಥಿಗಳಿಗೆ ವರ್ಗ-ಸೂಕ್ತವಾದ ಕಲಿಕೆಯ ಮಟ್ಟವನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ. ಕಾರ್ಯಕ್ರಮವು SSLC ಫಲಿತಾಂಶಗಳ ಗುಣಮಟ್ಟವನ್ನು ಸುಧಾರಿಸಲು ಪ್ರಯತ್ನಿಸುತ್ತದೆ. 2023-2024 ಮತ್ತು 2024-2025 ರಲ್ಲಿ ತನ್ನ ಮೊದಲ ಹಂತದ ಬಿಡುಗಡೆಯಲ್ಲಿ, ಮರುಸಿಂಚನವು ಕರ್ನಾಟಕದ 17 ಜಿಲ್ಲೆಗಳಾದ್ಯಂತ 69 ಮಹತ್ವಾಕಾಂಕ್ಷೆಯ ತಾಲೂಕುಗಳಲ್ಲಿ ಎಲ್ಲಾ ಕನ್ನಡ ಮಾಧ್ಯಮದ ಸರ್ಕಾರಿ ಪ್ರೌಢಶಾಲೆಗಳು ಮತ್ತು ಸಂಯೋಜಿತ ಕಾಲೇಜುಗಳನ್ನು ಗುರಿಯಾಗಿಸಿಕೊಂಡಿದೆ. ಇದು ಇಂಗ್ಲಿಷ್, ಕನ್ನಡ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಒಳಗೊಂಡಿದೆ. ಈ ಉಪಕ್ರಮವು 8,821 ಶಾಲೆಗಳಲ್ಲಿ 46,554 ಶಿಕ್ಷಕರೊಂದಿಗೆ ಕಾರ್ಯನಿರ್ವಹಿಸುತ್ತದೆ. ಗುಣಮಟ್ಟದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು, ರಾಜ್ಯ ಸಂಪನ್ಮೂಲ ಗುಂಪು, ಮಾಸ್ಟರ್ ಸಂಪನ್ಮೂಲ ವ್ಯಕ್ತಿಗಳು, ಅಧಿಕಾರಿಗಳು, ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ತರಬೇತಿ ಮತ್ತು ಆಧಾರಿತರಾಗಿದ್ದಾರೆ, ತರಬೇತಿ ಪಡೆದ ಶಿಕ್ಷಕರ ಶೇಕಡಾವಾರು ಮತ್ತು ತರಬೇತಿಯ ಪೂರ್ವ ಮತ್ತು ನಂತರದ ಜ್ಞಾನದಲ್ಲಿನ ಬದಲಾವಣೆಯಿಂದ ಪ್ರಭಾವವನ್ನು ಅಳೆಯಲಾಗುತ್ತದೆ.
ಮರುಸಿಂಚನ 6 ರಿಂದ 7ನೇ ತರಗತಿ ಸಾಹಿತ್ಯ ರಚನೆ, ಎಂ.ಆರ್.ಪಿ ಮತ್ತು ಶಿಕ್ಷಕರ ತರಬೇತಿ:
ಮರುಸಿಂಚನ 6 ಮತ್ತು 7ನೇ ತರಗತಿಯ ಸಾಹಿತ್ಯ ರಚನೆಗಾಗಿ 5 ಜಿಲ್ಲೆಗಳಿಗೆ (ಡಯಟ್ ತುಮಕೂರು, ಮೈಸೂರು, ದಾವಣಗೆರೆ, ಬೆಂಗಳೂರು ನಗರ ಮತ್ತು ಶಿವಮೊಗ್ಗ) ರೂ.13.17 ಲಕ್ಷಗಳು ಬಿಡುಗಡೆ ಮಾಡಲಾಗಿದೆ ಹಾಗೂ ಸಾಹಿತ್ಯ ರಚನೆಗೆ ಒಟ್ಟು ರೂ.9.39 ಲಕ್ಷಗಳ ಖರ್ಚು ಭರಿಸಲಾಗಿದೆ.
ಮರುಸಿಂಚನ 6 ಮತ್ತು 7ನೇ ತರಗತಿಯ ಎಂ.ಆರ್.ಪಿ ತರಬೇತಿಗೆ ರೂ. 14,00,000/- ಬಿಡುಗಡೆಯಾಗಿದೆ. ಒಟ್ಟು 340 ಗುರಿ ಹೊಂದಿದ್ದು, 321 ಗುರಿಯನ್ನು ಸಾಧಿಸಿ ರೂ. 9.14 ಲಕ್ಷಗಳ ಖರ್ಚು ಭರಿಸಲಾಗಿದೆ.
ಮರುಸಿಂಚನ 6 ಮತ್ತು 7ನೇ ತರಗತಿಯ 36520 ಶಿಕ್ಷಕರ ತರಬೇತಿ ಗುರಿ ಹೊಂದಲಾಗಿದೆ. ಇದುವರೆಗೆ 31009 ಶಿಕ್ಷಕರು ತರಬೇತಿ ಪಡೆದಿರುತ್ತಾರೆ. ಈ ತರಬೇತಿಗೆ ಇತರೆ ತರಬೇತಿಯ ಉಳಿಕೆ ಅನುದಾನವನ್ನು ಭರಿಸಿ ರೂ.169.95 ಲಕ್ಷಗಳ ಖರ್ಚು ಮಾಡಲಾಗಿದೆ.
ಮರುಸಿಂಚನ 8, 9 ಮತ್ತು 10ನೇ ತರಗತಿ ಸಾಹಿತ್ಯ ರಚನೆ, ಎಂ.ಆರ್.ಪಿ ಮತ್ತು ಶಿಕ್ಷಕರ ತರಬೇತಿ:
ಮರುಸಿಂಚನ 8, 9 ಮತ್ತು 10ನೇ ತರಗತಿಯ ಸಾಹಿತ್ಯ ರಚನೆಗಾಗಿ 5 ಜಿಲ್ಲೆಗಳಿಗೆ (ಡಯಟ್ ತುಮಕೂರು, ಮೈಸೂರು, ದಾವಣಗೆರೆ, ಬೆಂಗಳೂರು ನಗರ ಮತ್ತು ಶಿವಮೊಗ್ಗ) ರೂ. 7,77,710/- ಗಳು ಬಿಡುಗಡೆ ಮಾಡಲಾಗಿದೆ ಹಾಗೂ ಸಾಹಿತ್ಯ ರಚನೆಗೆ ಒಟ್ಟು ರೂ.7.72 ಲಕ್ಷಗಳ ಖರ್ಚು ಭರಿಸಲಾಗಿದೆ.
ಮರುಸಿಂಚನ 8, 9 ಮತ್ತು 10ನೇ ತರಗತಿಯ ಎಂ.ಆರ್.ಪಿ ತರಬೇತಿಗೆ ಒಟ್ಟು ರೂ. 10,20,000/-ಗಳು ಎಸ್.ಎಸ್.ಕೆ ರಾಜ್ಯ ಕಛೇರಿಯಿಂದ ಬಿಡುಗಡೆಯಾಗಿದೆ. ಈ ತರಬೇತಿಯ ಒಟ್ಟು ಗುರಿ 344 ಹೊಂದಿದ್ದು, ಇದುವರೆಗೆ 333 ಗುರಿಯನ್ನು ಸಾಧಿಸಿ ರೂ.9.99 ಲಕ್ಷಗಳ ಖರ್ಚು ಭರಿಸಲಾಗಿದೆ.
ಮರುಸಿಂಚನ 8, 9 ಮತ್ತು 10ನೇ ತರಗತಿಯ 10034 ಶಿಕ್ಷಕರ ತರಬೇತಿಗೆ ರೂ. 90,30,600/-ಗಳು ಬಿಡುಗಡೆಯಾಗಿದೆ. ಇದುವರೆಗೆ 9169 ಶಿಕ್ಷಕರು (ಅತಿಥಿ ಶಿಕ್ಷಕರು ಸೇರಿದಂತೆ) ತರಬೇತಿ ಪಡೆದಿರುತ್ತಾರೆ. ಈ ತರಬೇತಿಗೆ ಒಟ್ಟು ರೂ. 83.47 ಲಕ್ಷಗಳ ಖರ್ಚು ಭರಿಸಲಾಗಿದೆ.
- ಪಿ.ಎ.ಬಿ. ಅನುಮೋದಿತ ಸೇವಾನಿರತ ಶಿಕ್ಷಕರ ತರಬೇತಿ:
*2024-25ನೇ ಸಾಲಿನ ಪಿ.ಎ.ಬಿ. ಅನುಮೋದಿತ ಚಟುವಟಿಕೆಗಳಡಿಯಲ್ಲಿ ಸೇವಾನಿರತ ಶಿಕ್ಷಕರ ತರಬೇತಿಗೆ ಮೊದಲ ಕಂತಿನಲ್ಲಿ ರೂ. 519.1550 ಲಕ್ಷಗಳು 20,767 ಪ್ರಾಥಮಿಕ ಶಾಲಾ (6 ರಿಂದ 8) ಶಿಕ್ಷಕರ ತರಬೇತಿಗಾಗಿ ಎಸ್.ಎಸ್.ಕೆ ರಾಜ್ಯ ಕಛೇರಿಯಿಂದ ಬಿಡುಗಡೆ ಮಾಡಲಾಗಿದೆ. ಈ ವರೆಗೆ 19343 ಶಿಕ್ಷಕರು ತರಬೇತಿ ಪೂರ್ಣಗೊಳಿಸಿದ್ದಾರೆ. ಇದುವರೆಗೆ ರೂ. 505.99 ಲಕ್ಷಗಳ ಖರ್ಚು ಭರಿಸಲಾಗಿದೆ.
*2024-25ನೇ ಸಾಲಿನ ಪಿ.ಎ.ಬಿ. ಅನುಮೋದಿತ ಚಟುವಟಿಕೆಗಳಡಿಯಲ್ಲಿ ಸೇವಾನಿರತ ಶಿಕ್ಷಕರ ತರಬೇತಿಗೆ ಮೊದಲ ಕಂತಿನನಲ್ಲಿ ರೂ. 235.8935 ಲಕ್ಷಗಳು 9439 ಪ್ರೌಢಶಾಲಾ ಶಿಕ್ಷಕರ (9 ರಿಂದ 10) ತರಬೇತಿಗಾಗಿ ಎಸ್.ಎಸ್.ಕೆ ರಾಜ್ಯ ಕಛೇರಿಯಿಂದ ಬಿಡುಗಡೆ ಮಾಡಲಾಗಿದೆ. ಈ ವರೆಗೆ 8168 ಶಿಕ್ಷಕರು ತರಬೇತಿ ಪೂರ್ಣಗೊಳಿಸಿದ್ದಾರೆ. ಇದುವರೆಗೆ ರೂ. 227.98 ಲಕ್ಷಗಳ ಖರ್ಚು ಭರಿಸಲಾಗಿದೆ
- ನಲಿ ಕಲಿ ಹಾಗೂ ಇಂಗ್ಲಿಷ್ ನಲಿ ಕಲಿ ತರಬೇತಿ:
2024-25ನೇ ಶೈಕ್ಷಣಿಕ ಸಾಲಿಗೆ ಪೂರಕವಾಗಿ ಕನ್ನಡ ಹಾಗೂ ಇಂಗ್ಲಿಷ್ ನಲಿ ಕಲಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಜಿಲ್ಲಾ ಹಂತದಲ್ಲಿ ಸಂಪನ್ಮೂಲವ್ಯಕ್ತಿಗಳ ತರಬೇತಿ ಆಯೋಜಿಸಲು ನಲಿ ಕಲಿ ಕೋಶದ ವತಿಯಿಂದ ರೂ. 21,51,000/- ಗಳನ್ನು ಬಿಡುಗಡೆ ಮಾಡಿರುತ್ತಾರೆ. ಎಂ.ಆರ್.ಪಿ ಮತ್ತು ಶಿಕ್ಷಕರು ಸೇರಿದಂತೆ ಒಟ್ಟು 1195 ಗುರಿ ಹೊಂದಿದ್ದು, ಇದುವರೆಗೆ 1146 ಗುರಿ ಸಾಧಿಸಲಾಗಿದೆ ಹಾಗೂ ಒಟ್ಟು ರೂ. 18.25 ಲಕ್ಷಗಳ ಖರ್ಚು ಭರಿಸಲಾಗಿದೆ.
- ಇಂಡಕ್ಷನ್ ತರಬೇತಿ:
2022-23ನೇ ಸಾಲಿನಲ್ಲಿ ಹೊಸದಾಗಿ ನೇಮಕಾತಿ ಹೊಂದಿರುವ ಪ್ರಾಥಮಿಕ ಶಾಲಾ (ಪದವಿಧರ) ಶಿಕ್ಷಕರಿಗೆ 10 ದಿನಗಳ ಬುನಾದಿ ತರಬೇತಿಯನ್ನು ನೀಡಲು ಆಯೋಜಿಸಲಾಗಿತ್ತು. ಈ ತರಬೇತಿಗೆ ಸಂಬಂಧಿಸಿದಂತೆ ಮೊದಲು ಎಂ.ಆರ್.ಪಿ ತರಬೇತಿಯನ್ನು ಡಯಟ್ ಮಂಡ್ಯದಲ್ಲಿ ಆಯೋಜಿಸಿ ಯಶಸ್ವಿಗೊಳಿಸಲಾಗಿದೆ. ಒಟ್ಟು 136 ಎಂ.ಆರ್.ಪಿ ಗಳ ಗುರಿ ಹೊಂದಿದ್ದು, ಪೂರ್ಣಗುರಿ ಸಾಧಿಸಲಾಗಿದೆ. ಎಂ.ಆರ್.ಪಿ ತರಬೇತಿಗೆ TBF ನಿಂದ ಒಟ್ಟು 10,40,400 ಗಳನ್ನು ಬಿಡುಗಡೆ ಮಾಡಿ 7,99780/- ಖರ್ಚು ಭರಿಸಲಾಗಿದೆ
ಇದೇ ರೀತಿ ಶಿಕ್ಷಕರಿಗೆ 10 ದಿನಗಳ ಬುನಾದಿ ತರಬೇತಿಯನ್ನು ರಾಜ್ಯದ 21 ಜಿಲ್ಲೆಗಳಲ್ಲಿ ಆಯೋಜಿಸಿ ಮೊದಲ ಹಂತದ 5 ದಿನಗಳ ತರಬೇತಿಯನ್ನು ಪೂರ್ಣಗೊಳಿಸಲಾಗಿದೆ. 2ನೇ ಹಂತದ ತರಬೇತಿ ಪ್ರಗತಿಯಲ್ಲಿದೆ. ಇದರ ಒಟ್ಟು ಗುರಿ 6209 ಇದುವರೆಗೆ 5496 ಶಿಕ್ಷಕರು ಮೊದಲ ಹಂತದ ತರಬೇತಿ ಪಡೆದಿರುತ್ತಾರೆ. ಈ ತರಬೇತಿಗೆ TBF ನಿಂದ ರೂ. 1,70,74,750/- ಗಳ ಅನುದಾನವನ್ನು ಪಡೆಯಲಾಗಿದೆ. ಇದುವರೆಗೆ ಈ ತರಬೇತಿಗೆ ಒಟ್ಟು 141.32 ಲಕ್ಷಗಳ ಖರ್ಚು ಭರಿಸಲಾಗಿದೆ.
- ಗಣಿತ ಕಲಿಕಾ ಆಂದೋಲನಾ
GKA 1.0 ಗಣಿತದ ಕಿಟ್ ಅನ್ನು ಕರ್ನಾಟಕದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಸರಬರಾಜು ಮಾಡಲಾಗಿದೆ. 4 ಮತ್ತು 5 ನೇ ತರಗತಿಗಳಿಗೆ ಬೋಧಿಸುವ ಶೇ. 80% ರಷ್ಟುಗಣಿತ ಶಿಕ್ಷಕರಿಗೆ ಮುಖಾಮುಖಿ ತರಬೇತಿಯನ್ನು 2023-24 ರಲ್ಲಿ ಡಿಎಸ್ಇಆರ್ಟಿ ಸಹಯೋಗದೊಂದಿಗೆ ನೀಡಲಾಗಿದೆ.
2024-2025 ರ ಅವಧಿಯಲ್ಲಿ ಅಕ್ಷರ ಫೌಂಡೇಶನ್ರವರು ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಮೂಲಕ ಗಣಿತ ಕಲಿಕಾ ಆಂದೋಲನಾಕ್ಕೆ ಸಂಬಂಧಿಸಿದಂತೆ ಶಿಕ್ಷಕರಿಗೆ ತರಬೇತಿಯನ್ನು ನೀಡಲು ಆನ್ಲೈನ್ ಕೋರ್ಸ್ಗಳನ್ನು ರಚಿಸಲಾಗಿದೆ. ನಿಗದಿತ ಗುರಿಯನ್ನು ಸಾಧಿಸಲು ಡಿ.ಎಸ್.ಇ.ಆರ್.ಟಿಯ ಇ-ಕಂಟೆಂಟ್ ವಿಭಾಗದಿಂದ 10-12 ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರವನ್ನು ಅಕ್ಷರ ಫೌಂಡೇಶನ್ನಲ್ಲಿ ನಡೆಸಲಾಗಿದೆ. ಇದರ ಜೊತೆಗೆ ತರಬೇತಿ ಮಾಡ್ಯೂಲ್ಗಳನ್ನು ಪುನರ್ ಮನನ ಮಾಡಲು ಡಿ.ಎಸ್.ಇ.ಆರ್.ಟಿಯ ಸಹಯೋಗದೊಂದಿಗೆ ಸುಮಾರು 5 ಟೆಲಿ ಕಾನ್ಫರೆನ್ಸ್ಗಳನ್ನು ನಡೆಸಲಾಗಿದೆ. ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮದ ಯಶಸ್ಸಿನ ಪ್ರಮುಖ ಸೂಚಕಗಳು :· ಶಿಕ್ಷಕರು GKA ವಿಧಾನದ ಬಗ್ಗೆ ತರಬೇತಿ ಪಡೆಯುವುದು.· ಶಿಕ್ಷಕರು ನಿಯಮಿತವಾಗಿ TLM ಕೈಪಿಡಿಯನ್ನು ಬಳಸುವುದು.· ಶಿಕ್ಷಕರು ಗಣಿತದ ಅವಧಿಗಳಲ್ಲಿ TLM ಕಿಟ್ ಅನ್ನು ವಾರದಲ್ಲಿ ಒಂದು ಅಥವಾ ಎರಡು ಬಾರಿ ಬಳಸುವುದು.· ತರಗತಿಯಲ್ಲಿ ಶಿಕ್ಷಕರು CRA ವಿಧಾನಗಳನ್ನು ಅಳವಡಿಸುವುದು.· ಶಿಕ್ಷಕರು ತರಗತಿಯಲ್ಲಿ ಗುಂಪು ಕಲಿಕೆಯನ್ನು ಸುಗಮಗೊಳಿಸುವುದು. ಪ್ರಮುಖ ಫಲಿತಾಂಶಗಳು: · ಒಟ್ಟು 90 ಶಿಕ್ಷಕರು, ಎಂ.ಆರ್.ಪಿಗಳು ಮತ್ತು ಎಸ್.ಆರ್.ಪಿಗಳಿಗೆ ರಿಫ್ರೆಶರ್ ತರಬೇತಿಗಳನ್ನು ನಡೆಸಲಾಗಿದೆ.· ಎಲ್ಲಾ 90 ಶಾಲೆಗಳು ಮತ್ತು 9 ಉರ್ದು ಶಾಲೆಗಳಲ್ಲಿ TLM ಕಿಟ್ಗಳನ್ನು ನೀಡಲಾಗಿದೆ.· ಬೇಸ್ ಲೈನ್ ಮತ್ತುಎಂಡ್ಲೈನ್ ಮೌಲ್ಯಮಾಪನಗಳನ್ನು ನಡೆಸಲಾಗಿದೆ - ಕಲಿಕೆಯ ಮಟ್ಟದಲ್ಲಿ ~12% ಬೆಳವಣಿಗೆ ಗುರುತಿಸಲಾಗಿದೆ.· ತರಗತಿಯ ಅವಲೋಕನಗಳು - ಪ್ರತಿಕ್ರಿಯೆ/ಕಲಿಕೆಗಳನ್ನು whatsapp ಗುಂಪಿನ ಮೂಲಕ ಹಂಚಿಕೊಳ್ಳಲಾಗಿದೆ.· ಕೈಪಿಡಿಗಳಲ್ಲಿನ ಸುಧಾರಣೆಗಳು - ಬದಲಾವಣೆಗಳಿಗಾಗಿ ಪೂರೈಕೆದಾರರೊಂದಿಗೆ ಯು ಟ್ಯೂಬ್ ಲೈವ್ ಮೂಲಕ 5 ಕಾರ್ಯಾಗಾರಗಳನ್ನು ನಡೆಸಲಾಗಿದೆ.· ತಾಂತ್ರಿಕವಾಗಿ ಸುಧಾರಣೆಗಳನ್ನು ತರುವುದು.