ಸಮಗ್ರ ಶಿಕ್ಷಣ ಕರ್ನಾಟಕ
ಸಮಗ್ರ ಶಿಕ್ಷಣ ಕರ್ನಾಟಕ

ಸಮಗ್ರ ಶಿಕ್ಷಣ ಕರ್ನಾಟಕ

ಶಾಲಾ ಶಿಕ್ಷಣ ಇಲಾಖೆ

×
ಅಭಿಪ್ರಾಯ
ಕಾರ್ಯಕ್ರಮಗಳು
ಸಮಗ್ರ ಶಿಕ್ಷಣ ಕರ್ನಾಟಕ
ಪಿ ಎಂ ಶ್ರೀ ಶಾಲೆಗಳು
ಪಿ ಎಂ - ಜನಮನ್
ಪಿ ಎಂ - ದಾಜ್ಗುವಾ
ರಾಜ್ಯ ಸರ್ಕಾರದ ಕಾರ್ಯಕ್ರಮಗಳು
ಸಮಗ್ರ ಶಿಕ್ಷಣ ಕರ್ನಾಟಕ

 

2018-19ರ ಕೇಂದ್ರ ಬಜೆಟ್, ಪ್ರಿ-ನರ್ಸರಿಯಿಂದ 12 ನೇ ತರಗತಿಯವರೆಗೆ ವಿಭಾಗೀಕರಣವಿಲ್ಲದೆ ಶಾಲಾ ಶಿಕ್ಷಣವನ್ನು ಸಮಗ್ರವಾಗಿ ಪರಿಗಣಿಸಲು ಪ್ರಸ್ತಾಪಿಸಿದೆ. ಸಮಗ್ರ ಶಿಕ್ಷಾ - ಪ್ರಿ-ಸ್ಕೂಲ್‌ನಿಂದ 12 ನೇ 
ತರಗತಿಯವರೆಗೆ ವಿಸ್ತರಿಸಿರುವ ಶಾಲಾ ಶಿಕ್ಷಣ ವಲಯಕ್ಕೆ ಒಂದು ಸಮಗ್ರ ಕಾರ್ಯಕ್ರಮವಾಗಿದ್ದು, ಶಾಲಾ ಶಿಕ್ಷಣಕ್ಕೆ ಸಮಾನ ಅವಕಾಶಗಳು ಮತ್ತು ಸಮಾನ ಕಲಿಕೆಯ ಫಲಿತಾಂಶಗಳ ದೃಷ್ಟಿಯಿಂದ ಶಾಲಾ
ಪರಿಣಾಮಕಾರಿತ್ವವನ್ನು ಸುಧಾರಿಸುವ ವಿಶಾಲ ಗುರಿಯೊಂದಿಗೆ ಇದನ್ನು ಸಿದ್ಧಪಡಿಸಲಾಗಿದೆ. ಇದು ಸರ್ವ ಶಿಕ್ಷಾ ಅಭಿಯಾನ (SSA), ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ (RMSA) ಮತ್ತು ಶಿಕ್ಷಕರ ಶಿಕ್ಷಣ (TE)
ಎಂಬ ಹಿಂದಿನ ಮೂರು ಯೋಜನೆಗಳನ್ನು ಒಳಗೊಳ್ಳುತ್ತದೆ.
 1. ಪೂರ್ವ ಪ್ರಾಥಮಿಕ  ಶಿಕ್ಷಣ 
   
 2. ನಿಪುಣ ಭಾರತ 
   
a. ಆಂಗ್ಲ ಕೋಶ
b. ನಲಿಕಲಿ ಕಾರ್ಯಕ್ರಮ ಬಲವರ್ಧನೆ
c. ವಿದ್ಯಾ ಪ್ರವೇಶ ಕಾರ್ಯಕ್ರಮ ಬಲವರ್ಧನೆ
   
 3. ಆಕ್ಸಸ್‌ ಮತ್ತು ರಿಟೆಷ್ನ್
    
a. ಆಕ್ಸೆಸ್
b. ಆರ್ ಟಿ ಇ
c. ನೇತಾಜಿ ಸುಭಾಷ್ ಚಂದ್ರ ಬೋಸ್ ಆವಾಸ್ಯ ವಿದ್ಯಾಲಯಗಳು (ನಿರ್ದಿಷ್ಟ ವರ್ಗಗಳ ಮಕ್ಕಳಿಗೆ ವಸತಿ ಶಾಲೆ)
d. ಓ.ಒ.ಎಸ್.ಸಿ ಕಾರ್ಯಕ್ರಮ
   
 4. ಸಿವಿಲ್‌ ಕಾಮಗಾರಿ 
   
 5. ಗುಣಾತ್ಮಕ ಮತ್ತು ಆವಷ್ಕೃತ ಚಟುವಟಿಕೆ
    
1 ಸ್ವಚ್ಛತಾ ಪಕ್ವಾಡ
2 ಸ್ವಚ್ಛತಾ ಹೀ ಸೇವಾ
3 ಶಾಲಾ ಸುರಕ್ಷತೆ ಮತ್ತು ಭದ್ರತೆ
4 ವೀರಗಾಥಾ
5 PARAKH ರಾಷ್ಟ್ರೀಯ ಸರ್ವೇಕ್ಷಣೆ 2024
6 ರಾಷ್ಟ್ರೀಯ ಏಕತಾ ದಿನ
7 ವೀರ ಬಾಲ ದಿವಸ್‌ 
8 ಪರೀಕ್ಷ ಪೇ ಚರ್ಚಾ 
9 ಕಲೋತ್ಸವ
10 ರಸಪ್ರಶ್ನೆ ಸ್ಪರ್ಧೆ
11 ವಿಜ್ಞಾನ ವಸ್ತು ಪ್ರದರ್ಶನ
12 ರಂಗೋತ್ಸವ
13 ಯೂತ್‌ ಮತ್ತು ಇಕೋ ಕ್ಲಬ್
14 ಗ್ರಂಥಾಲಯ
15

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳು (SCPCR)

16 ಉಚಿತ ಸಮವಸ್ತ್ರ
17
ಕ್ರೀಡೆ ಮತ್ತು ದೈಹಿಕ ಶಿಕ್ಷಣ
   
 6. ಲಿಂಗ ಮತ್ತು ಸಮಾನತೆ
   
a. ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ 
b. ರಾಣಿ ಲಕ್ಷ್ಮೀಬಾಯಿ ಆತ್ಮರಕ್ಷಣಾ  ಪ್ರಶಿಕ್ಷಣ
 ಸಮಾನತೆಗಾಗಿ ವಿಶೇಷ ಯೋಜನೆಗಳು:
c. ಹೆಣ್ಣು ಮಕ್ಕಳ ಸಬಲೀಕರಣ ಯೋಜನೆ
d. ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ
 7. ಸಮನ್ವಯ ಶಿಕ್ಷಣ   
   
 8. ಶಿಕ್ಷಕರ ಶಿಕ್ಷಣ ಬಲವರ್ಧನೆ 
   
a. ಬಿಆರ್‌ಸಿ ಹಾಗೂ ಸಿಆರ್‌ಸಿ  ಕೇಂದ್ರಗಳ ಶೈಕ್ಷಣಿಕ ಬಲವರ್ಧನೆ 
b.  ಶಿಕ್ಷಕರ ತರಬೇತಿ
   
 9. ವೃತ್ತಿ ಶಿಕ್ಷಣ 
   
 10. ಐ.ಸಿ.ಟಿ ಮತ್ತು ತಂತ್ರಜ್ಞಾನ 
   
 11. ಸಮುದಾಯ ಸಂಚಯನ 
   
a ಮಾಧ್ಯಮ ಮತ್ತು ಸಮುದಾಯ ಸಂಚಯನ
b ವಿದ್ಯಾಂಜಲಿ
c ಶಗುನ್ ಪೋರ್ಟಲ್

 

ಪಿ ಎಂ ಶ್ರೀ ಶಾಲೆಗಳು

PM SHRI   (PM Schools for Rising India) ಶಾಲೆಗಳು ಎಂಬ ಹೊಸ ಯೋಜನೆಯು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು ಸದರಿ ಯೋಜನೆಯು 2022-23 ರಿಂದ 2026-27 ನೇ ಸಾಲಿನವರೆಗೆ ದೇಶದಾದ್ಯಂತ ಸರ್ಕಾರದಿಂದ ಪ್ರಸ್ತುತ ನಿರ್ವಹಿಸಲಾಗುತ್ತಿರುವ ಆಯ್ದ ಸುಮಾರು 14500 ಶಾಲೆಗಳನ್ನು ಬಲಪಡಿಸುವ ಮೂಲಕ ಪಿಎಂಶ್ರಿ ಶಾಲೆಗಳಾಗಿ ಅಭಿವೃದ್ಧಿಪಡಿಸುವುದಾಗಿದೆ.

 

UDISE+ ಕೋಡ್ ಹೊಂದಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳು (1-5/1-8ನೇ ತರಗತಿ) ಮತ್ತು ಮಾಧ್ಯಮಿಕ/ ಪ್ರೌಢ ಶಾಲೆಗಳನ್ನು (1-10/1-12/6-10/6-12ನೇ ತರಗತಿ) ಈ ಯೋಜನೆಯಡಿ ಆಯ್ಕೆಗೆ ಪರಿಗಣಿಸಲಾಗುತ್ತದೆ. ಪಿಎಂಶ್ರಿ ಶಾಲೆಗಳ ಆಯ್ಕೆಯನ್ನು ಸವಾಲಿನ ವಿಧಾನದ (Challenge Method) ಮೂಲಕ ಮಾಡಲಾಗುತ್ತದೆ. ಸರ್ಕಾರಿ ಶಾಲೆಗಳು ಆನ್ ಲೈನ್ ಪೋರ್ಟಲ್ ನಲ್ಲಿ ಸ್ವಯಂ-ಅರ್ಜಿ ಸಲ್ಲಿಸಿ, ಪಿಎಂಶ್ರಿ ಶಾಲೆಗಳಾಗಿ ಆಯ್ಕೆಯಾಗಲು ಸ್ಪರ್ಧಿಸುತ್ತವೆ. ಈ ಆಧಾರದ ಮೇಲೆ ರಾಜ್ಯಕ್ಕೆ 585 ಶಾಲೆಗಳು ಪಿಎಂಶ್ರಿ ಶಾಲೆಗಳಾಗಿ ಆಯ್ಕೆಯಾಗಿ ಮಾದರಿ ಶಾಲೆಗಳಾಗಿರುತ್ತವೆ.

 ಈ ಶಾಲೆಗಳು ತಮ್ಮ ಸುತ್ತಲಿನ ಶಾಲೆಗಳಿಗೆ ಮಾರ್ಗದರ್ಶಿ ಶಾಲೆಗಳಾಗಿ ವಿದ್ಯಾರ್ಥಿಗಳ ಜ್ಞಾನಾತ್ಮಕ ಬೆಳವಣಿಗೆಗೆ ಗುಣಮಟ್ಟದ ಬೋಧನೆಯನ್ನು ಒದಗಿಸುತ್ತವೆ ಹಾಗೂ 21ನೇ ಶತಮಾನದ ಕೌಶಲ್ಯಗಳ ಸಹಿತ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತವೆ.

 

ಪ್ರಮುಖ ಲಕ್ಷಣಗಳು:-

  • ಪಿಎಂಶ್ರಿ ಶಾಲೆಗಳು ಮಕ್ಕಳ ವೈವಿಧ್ಯಮಯ ಹಿನ್ನೆಲೆ, ಬಹುಭಾಷಾ ಅಗತ್ಯಗಳು ಮತ್ತು ವಿವಿಧ ಶೈಕ್ಷಣಿಕ ಸಾಮರ್ಥ್ಯಗಳನ್ನು ನೋಡಿಕೊಳ್ಳುವ ಕಲಿಕಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವ ಶಾಲಾ ವಾತಾವರಣದಲ್ಲಿ ಉನ್ನತ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು.  
  • ಪಿಎಂಶ್ರಿ ಶಾಲೆಗಳು ತಮ್ಮ ತಮ್ಮ ಪ್ರದೇಶಗಳ ಇತರ ಶಾಲೆಗಳಿಗೆ ಮಾರ್ಗದರ್ಶನ ನೀಡುವ ಮೂಲಕ ನಾಯಕತ್ವವನ್ನು ಒದಗಿಸುವುದು.
  • ಪಿಎಂಶ್ರಿ ಶಾಲೆಗಳನ್ನು ಪರಿಸರ ಸ್ನೇಹಿ ಅಂಶಗಳನ್ನು ಒಳಗೊಂಡ ಹಸಿರು ಶಾಲೆಗಳಾಗಿ ಅಭಿವೃದ್ಧಿಪಡಿಸಲಾಗುವುದು.
  • ಈ ಶಾಲೆಗಳಲ್ಲಿ ಅಳವಡಿಸಿಕೊಳ್ಳಲಾದ ಬೋಧನಾ ವಿಧಾನವು ಹೆಚ್ಚು ಅನುಭವಾತ್ಮಕ, ಸಮಗ್ರ, ಆಟ/ಆಟಿಕೆ-ಆಧಾರಿತ (ವಿಶೇಷವಾಗಿ, ಆರಂಭಿಕ ವರ್ಷಗಳಲ್ಲಿ) ಆವಿಷ್ಕಾರ-ಆಧಾರಿತ, ಕಲಿಕೆ-ಕೇಂದ್ರಿತ ಹೊಂದಿರುವುದು.
  • ಪ್ರತಿ ಗ್ರೇಡ್ ನಲ್ಲಿ ಪ್ರತಿ ಮಗುವಿನ ಕಲಿಕೆಯ ಫಲಿತಾಂಶಗಳ ಮೇಲೆ ಗಮನ ಹರಿಸಿ ಎಲ್ಲಾ ಹಂತಗಳಲ್ಲಿ ಮೌಲ್ಯಮಾಪನವು ಪರಿಕಲ್ಪನೆಯ ತಿಳಿವಳಿಕೆ ಮತ್ತು ನಿಜ ಜೀವನದ ಸನ್ನಿವೇಶಗಳಿಗೆ ಜ್ಞಾನದ ಅನ್ವಯವನ್ನು ಆಧರಿಸಿರುತ್ತದೆ ಮತ್ತು ಸಾಮರ್ಥ್ಯ-ಆಧಾರಿತವಾಗಿರುವುದು.
  • ಉದ್ಯೋಗಾವಕಾಶವನ್ನು ಹೆಚ್ಚಿಸಲು ಮತ್ತು ಉತ್ತಮ ಉದ್ಯೋಗಾವಕಾಶಗಳನ್ನು ಒದಗಿಸಲು ಸೆಕ್ಟರ್ ಕೌಶಲ್ಯ ಮಂಡಳಿಗಳು ಮತ್ತು ಸ್ಥಳೀಯ ಉದ್ಯಮದೊಂದಿಗಿನ ಸಂಪರ್ಕವನ್ನು ಸಾಧಿಸಲಾಗುವುದು.
  • ಫಲಿತಾಂಶಗಳನ್ನು ಅಳೆಯಲು ಪ್ರಮುಖ ಕಾರ್ಯಕ್ಷಮತೆಯ ಸೂಚಕಗಳನ್ನು ನಿರ್ದಿಷ್ಟಪಡಿಸಿ, ಶಾಲಾ ಗುಣಮಟ್ಟ ಮೌಲ್ಯಮಾಪನ ಚೌಕಟ್ಟನ್ನು (ಎಸ್.ಕ್ಯು.ಎ.ಎಫ್.) ಅಭಿವೃದ್ಧಿಪಡಿಸಲಾಗುತ್ತಿದೆ. ಅಪೇಕ್ಷಿತ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಲು ಈ ಶಾಲೆಗಳ ಗುಣಮಟ್ಟದ ಮೌಲ್ಯಮಾಪನವನ್ನು ನಿಯಮಿತ ಮಧ್ಯಂತರದಲ್ಲಿ ಕೈಗೊಳ್ಳಲಾಗುವುದು.

                

 

 

 

ಸೌಲಭ್ಯಗಳು:-

  • ಗುಣಮಟ್ಟ ಮತ್ತು ನಾವಿನ್ಯತೆ ಕಲಿಕೆ (ಕಲಿಕಾ ವರ್ಧನೆ ಕಾರ್ಯಕ್ರಮ, ಸಮಗ್ರ ಪ್ರಗತಿ ಕಾರ್ಡ್, ನವೀನ ಬೋಧನೆಗಳು, ಬ್ಯಾಗ್ ರಹಿತ ದಿನಗಳು, ಸ್ಥಳೀಯ ಕುಶಲಕರ್ಮಿಗಳೊಂದಿಗೆ ತರಬೇತಿ, ಸಾಮರ್ಥ್ಯ ವರ್ಧನೆ ಇತ್ಯಾದಿ).
  • ಆರ್.ಟಿ.ಇ ಕಾಯ್ದೆಯಡಿ ಫಲಾನುಭವಿ ಆಧಾರಿತ ಹಕ್ಕುಗಳು.
  • ವಿಜ್ಞಾನ ಮತ್ತು ಗಣಿತ ಕಿಟ್.
  • ವಾರ್ಷಿಕ ಅನುದಾನಗಳು (ಸಂಯೋಜಿತ ಶಾಲಾ ಅನುದಾನ, ಗ್ರಂಥಾಲಯ ಅನುದಾನ, ಕ್ರೀಡಾ ಅನುದಾನ)
  • ಬಾಲವಾಟಿಕಾ ಮತ್ತು ಬುನಾದಿ ಅಕ್ಷರಜ್ಞಾನ ಹಾಗೂ ಸಂಖ್ಯಾಜ್ಞಾನ ಸೇರಿದಂತೆ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ.
  • ಬಾಲಕಿಯರು ಮತ್ತು ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸುರಕ್ಷಿತ ಮತ್ತು ಸೂಕ್ತ ಮೂಲಸೌಕರ್ಯವನ್ನು ಒದಗಿಸುವುದೂ ಸೇರಿದಂತೆ ಸಮಾನತೆ ಮತ್ತು ಸೇರ್ಪಡೆ.
  • ಐಸಿಟಿ, ಸ್ಮಾರ್ಟ್ ತರಗತಿಗಳು ಮತ್ತು ಡಿಜಿಟಲ್ ಗ್ರಂಥಾಲಯಗಳು, ಡಿಜಿಟಲ್ ಬೋಧನಾಶಾಸ್ತ್ರದ ಬಳಕೆ.
  • ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳನ್ನು ಬಲಪಡಿಸುವುದು.
  • ವೃತ್ತಿಪರ ಚಟುವಟಿಕೆಗಳು ಮತ್ತು ತರಬೇತಿ/ಉದ್ಯಮಶೀಲತೆಯ ಅವಕಾಶಗಳನ್ನು ವಿಶೇಷವಾಗಿ ಸ್ಥಳೀಯ ಉದ್ಯಮದೊಂದಿಗೆ ಹೆಚ್ಚಿಸುವುದು.
  • ಎಲ್ಲಾ ಶಾಲೆಗಳಿಗೆ ವಿಜ್ಞಾನ ಪ್ರಯೋಗಾಲಯಗಳು, ಗ್ರಂಥಾಲಯ, ಮತ್ತು ವೃತ್ತಿಪರ ಪ್ರಯೋಗಾಲಯಗಳು ಇತ್ಯಾದಿಗಳನ್ನು ಒದಗಿಸಲಾಗುವುದು.
  • ಹಸಿರು ಶಾಲಾ ಉಪಕ್ರಮಗಳು.

 

  • PMSHRI ಶಾಲೆಗಳ ಯೋಜನೆಯ ಪ್ರಮುಖ 06 ಉದ್ದೇಶಗಳು:

 

  1. ಪಠ್ಯಕ್ರಮ, ಪಾಠಶೈಲಿ ಮತ್ತು ಮೌಲ್ಯಮಾಪನ

ನಾವಿನ್ಯ ಮತ್ತು ಕಲಿಕಾ ಅನುಭವಗಳ ಮೂಲಕ ಶೈಕ್ಷಣಿಕ ಪ್ರಗತಿಯನ್ನು ಉತ್ತೇಜಿಸುವುದು. ರಾಜ್ಯ ಮಾನದಂಡಗಳಿಗೆ ಅನುಗುಣವಾದ ಪಠ್ಯಕ್ರಮ ವೃದ್ಧಿಸುವುದು.ಶಿಕ್ಷಕರ ವೃತ್ತಿಪರ ಅಭಿವೃದ್ಧಿಗೆ ನೆರವು ನೀಡುವುದು. ತರಗತಿಗಳಲ್ಲಿ ತಂತ್ರಜ್ಞಾನದ ಬಳಕೆ.ಅನುಭವಾತ್ಮಕ ಮತ್ತು ಪರಸ್ಪರ ಕ್ರಿಯಾತ್ಮಕ ಪಾಠಶೈಲಿಯನ್ನು ವೃದ್ಧಿಸುವುದು.ಸಮಗ್ರ ಮತ್ತು ಸಾಮರ್ಥ್ಯಾಧಾರಿತ ಮೌಲ್ಯಮಾಪನ ವಿಧಾನಗಳನ್ನು ಬೆಳೆಸುವುದು.

ಪ್ರಮುಖ ಚಟುವಟಿಕೆಗಳು:ಪೂರ್ವ ಪ್ರಾಥಮಿಕ/ಬಾಲವಾಟಿಕೆಗೆ ಬೆಂಬಲ (ECCE),ಪ್ರಾಥಮಿಕ ಶಾಲೆಗಳಿಗಾಗಿ ಪಾಠೋಪಕರಣ,ಕಲಿಕಾ ವೃದ್ಧಿ ಕಾರ್ಯಕ್ರಮ (LEP), ಸಾಮರ್ಥ್ಯಾಧಾರಿತ ಮೌಲ್ಯಮಾಪನ ಮತ್ತು ಸಮಗ್ರ ಶೈಕ್ಷಣಿಕ ಪ್ರಗತಿ ಕಾರ್ಡ್‌ಗಳು, ಶಾಲಾ ಸಿದ್ಧತೆ ಕೈಪಿಡಿಗಳು, ಶಿಕ್ಷಕರ ಸಂಪನ್ಮೂಲ ಕೈಪಿಡಿಗಳು, ರಾಷ್ಟ್ರೀಯ ಅವಿಷ್ಕಾರ ಅಭಿಯಾನ, ಪ್ರೌಢಶಾಲಾ ಮಟ್ಟದಲ್ಲಿ ವೃತ್ತಿಪರ ಶಿಕ್ಷಣ ಪರಿಚಯ, ಗ್ರಂಥಾಲಯ ಅನುದಾನಗಳು, ಕ್ರೀಡೆ ಮತ್ತು ದೈಹಿಕ ಶಿಕ್ಷಣ, ನವೀನ ಯೋಜನೆಗಳ ಅಡಿಯಲ್ಲಿ ಚಟುವಟಿಕೆಗಳು

 

  1. ಪ್ರವೇಶ, ಮೂಲಸೌಕರ್ಯ, ಸುರಕ್ಷತೆ ಮತ್ತು ಕಾರ್ಯವೈಖರಿ

ಎಲ್ಲರಿಗೂ ಸುರಕ್ಷಿತ ಮತ್ತು ಕಲಿಕೆಗೆ ಅನುಕೂಲಕರ ವಾತಾವರಣವನ್ನು ಒದಗಿಸುವುದು. ತರಗತಿ ಕೊಠಡಿಗಳ ನವೀಕರಣ ಮತ್ತು ಆಧುನಿಕೀಕರಣ, ಡಿಜಿಟಲ್ ಮೂಲಸೌಕರ್ಯ ಮತ್ತು ಗ್ರಂಥಾಲಯ ಸುಧಾರಣೆ, ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರವೇಶ ಸಾಮರ್ಥ್ಯ ವೃದ್ಧಿ ಮತ್ತು ಸುರಕ್ಷತೆ.

ಪ್ರಮುಖ ಚಟುವಟಿಕೆಗಳು: ಶಾಲೆಗಳ ಮೂಲ ಸೌಕರ್ಯಗಳ ಅಭಿವೃದ್ಧಿ, ಹಸಿರು ಶಾಲಾ ಅಭಿಯಾನ, ಡಿಜಿಟಲ್ ಗ್ರಂಥಾಲಯಗಳು ಮತ್ತು ಐಸಿಟಿ ಸವಲತ್ತುಗಳು,ವಾರ್ಷಿಕ ಶಾಲಾ ಅನುದಾನ,ಸಾರಿಗೆ/ಎಸ್ಕಾರ್ಟ್ ಸೌಲಭ್ಯ

 

  1. ಸಮನ್ವಯ ಶಿಕ್ಷಣ ಮತ್ತು ಲಿಂಗ ಸಮಾನತೆ

ಎಲ್ಲ ವಿದ್ಯಾರ್ಥಿಗಳಿಗೆ ಸಮಾನ ಶೈಕ್ಷಣಿಕ ಅವಕಾಶಗಳ ಒದಗಿಸುವುದು. ವಿಶೇಷ ಅಗತ್ಯವಿರುವ ಮಕ್ಕಳಿಗೆ (CWSN) ಸಮನ್ವಯ ಶಿಕ್ಷಣವನ್ನು ನೀಡುವುದು. ಸಮನ್ವಯ ಶಿಕ್ಷಣ ಪಾಠಶೈಲಿಗಳ ಬಗ್ಗೆ ಶಿಕ್ಷಕರ ತರಬೇತಿ. ಹೆಣ್ಣು ಮಕ್ಕಳ ಬಲವರ್ಧನೆ ಮತ್ತು ಲಿಂಗ ಸಂವೇದನಾಶೀಲತೆ ಅಭಿವೃದ್ದಿಗೆ ಪೂರಕ ಕಾರ್ಯಕ್ರಮಗಳು.

ಪ್ರಮುಖ ಚಟುವಟಿಕೆಗಳು: ವಿಶೇಷ ಅಗತ್ಯವಿರುವ ಮಕ್ಕಳಿಗೆ ಸೌಲಭ್ಯ, ಹೆಣ್ಣು ಮಕ್ಕಳಿಗೆ ಆತ್ಮರಕ್ಷಣಾ ತರಬೇತಿ, ವಿದ್ಯಾರ್ಥಿಗಳಿಗೆ ವೃತ್ತಿಮಾರ್ಗದರ್ಶನ ಮತ್ತು ಲಿಂಗ ಸಮಾನತೆ ಕಾರ್ಯಕ್ರಮಗಳು

 

  1. ನಿರ್ವಹಣೆ, ಮೇಲ್ವಿಚಾರಣೆ ಮತ್ತು ಆಡಳಿತ

ಶಾಲಾ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿತ್ವ ವೃದ್ಧಿ. ಶಿಸ್ತುಬದ್ಧ ಮೇಲ್ವಿಚಾರಣೆ ವ್ಯವಸ್ಥೆಗಳ ಸ್ಥಾಪನೆ ಮತ್ತು ಅಭಿವೃದ್ದಿ.ಶಾಲಾ ನಾಯಕರಿಗೆ ನಿರ್ವಹಣಾ ಹಾಗೂ ನಿರ್ಧಾರಾತ್ಮಕ ನೈಪುಣ್ಯತೆ ತರಬೇತಿಗಳು. ಆಂಕಿಯ ಆಧಾರಿತ ನಿರ್ಧಾರ ಮಾದರಿಗಳ ಅನುಷ್ಠಾನ.

ಪ್ರಮುಖ ಚಟುವಟಿಕೆಗಳು: ಮಕ್ಕಳ ಹಾಜರಾತಿ ಪತ್ತೆ (Child Tracking) ಮತ್ತು ಕಾರ್ಯಕ್ರಮ ನಿರ್ವಹಣೆ

 

  1. ಸಹಭಾಗಿತ್ವ/ ಸಮುದಾಯ/ ಫಲಾನುಭವಿಗಳ ಭಾಗವಹಿಸುವಿಕೆ

ವಿದ್ಯಾರ್ಥಿಗಳು, ಪೋಷಕರು ಹಾಗೂ ಶಾಲಾ ಸಮುದಾಯದ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು. ಅಭಿಪ್ರಾಯ ಸಂಗ್ರಹ ವ್ಯವಸ್ಥೆಗಳ ಸ್ಥಾಪನೆ. ಸಮಸ್ಯೆಗಳಿಗೆ ಸ್ಪಂದಿಸುವ ಯೋಜನೆಗಳ ರೂಪು,  ಸಮುದಾಯ ಮತ್ತು ಶಾಲೆಗಳ ನಡುವೆ ಉತ್ತಮ ಸಂವಹನದ ನಿರ್ಮಾಣ ಮಾಡುವುದು.

 

  1. ಮಾನವ ಸಂಪತ್ತು ಮತ್ತು ಶಾಲಾ ನಾಯಕತ್ವ

ಉತ್ತಮ ಶಿಕ್ಷಕರನ್ನು ನಿರ್ಮಿಸಲು ಹಾಗೂ ಶಾಲಾ ನಾಯಕರಲ್ಲಿ ಬಲವರ್ಧನೆ ಮಾಡುವುದು. ಶಿಕ್ಷಕರ ನಿರಂತರ ವೃತ್ತಿಪರಾಭಿವೃದ್ಧಿಗೆ ಪೂರಕ ಯೋಜನೆಗಳು. DIETಗಳ ಮೂಲಕ ಶಾಲಾ ಮುಖ್ಯೋಪಾಧ್ಯಾಯರ ತರಬೇತಿ ಮತ್ತು ಮಾರ್ಗದರ್ಶನ.

 

ಶಾಲೆಗಳ ವಿವರ:-

ಶಾಲಾ ವಿಧ

ಮೊದಲ ಹಂತದ ಶಾಲೆಗಳ ಸಂಖ್ಯೆ

ಎರಡನೇ ಹಂತದ ಶಾಲೆಗಳ ಸಂಖ್ಯೆ

ಮೂರನೇ ಹಂತದ ಶಾಲೆಗಳ ಸಂಖ್ಯೆ

ನಾಲ್ಕನೇ ಹಂತದ ಶಾಲೆಗಳ ಸಂಖ್ಯೆ

ಐದನೇ ಹಂತದ ಶಾಲೆಗಳ ಸಂಖ್ಯೆ

ಆರನೇ ಹಂತದ ಶಾಲೆಗಳ ಸಂಖ್ಯೆ

ಒಟ್ಟು

ಕಿರಿಯ ಪ್ರಾಥಮಿಕ ಶಾಲೆ

1

11

0

0

0

0

12

ಹಿರಿಯ ಪ್ರಾಥಮಿಕ ಶಾಲೆ

119

192

65

15

29

0

420

ಪ್ರೌಢ ಶಾಲೆ

9

39

4

20

48

29

149

ಪದವಿ ಪೂರ್ವ ಕಾಲೇಜು

0

2

0

0

1

1

4

ಒಟ್ಟು ಶಾಲೆಗಳ ಸಂಖ್ಯೆ

129

244

69

35

78

30

585

 

 

 

 

 

 

 

ಜಿಲ್ಲಾವಾರು ಆಯ್ಕೆಯಾದ ಪಿಎಂಶ್ರೀ ಶಾಲೆಗಳ ಮಾಹಿತಿ

ಕ್ರ.ಸಂ.

ಜಿಲ್ಲೆ

ಶಾಲೆಗಳ ಸಂಖ್ಯೆ

1

ಬಾಗಲಕೋಟೆ

32

2

ಬಳ್ಳಾರಿ

19

3

ಬೆಳಗಾವಿ ಚಿಕ್ಕೋಡಿ

36

4

ಬೆಳಗಾವಿ

20

5

ಬೆಂಗಳೂರು ಗ್ರಾಮಾಂತರ

9

6

ಬೆಂಗಳೂರು ಉತ್ತರ

6

7

ಬೆಂಗಳೂರು ದಕ್ಷಿಣ

10

8

ಬೀದರ್

13

9

ಚಾಮರಾಜನಗರ

13

10

ಚಿಕ್ಕಬಳ್ಳಾಪುರ

16

11

ಚಿಕ್ಕಮಗಳೂರು

16

12

ಚಿತ್ರದುರ್ಗ

15

13

ದಕ್ಷಿಣ ಕನ್ನಡ

20

14

ದಾವಣಗೆರೆ

12

15

ಧಾರವಾಡ

19

16

ಗದಗ

20

17

ಹಾಸನ

17

18

ಹಾವೇರಿ

23

19

ಕಲಬುರಗಿ

24

20

ಕೊಡಗು

7

21

ಕೋಲಾರ

12

22

ಕೊಪ್ಪಳ

20

23

ಮಂಡ್ಯ

12

24

ಮೈಸೂರು

21

25

ರಾಯಚೂರು

23

26

ರಾಮನಗರ

11

27

ಶಿವಮೊಗ್ಗ

14

28

ತುಮಕೂರು

12

29

ತುಮಕೂರು ಮಧುಗಿರಿ

9

30

ಉಡುಪಿ

13

31

ಉತ್ತರ ಕನ್ನಡ

10

32

ಉತ್ತರ ಕನ್ನಡ ಶಿರಸಿ

15

33

ವಿಜಯನಗರ

14

34

ವಿಜಯಪುರ

33

35

ಯಾದಗಿರಿ

19

ಒಟ್ಟು

585

 



ಪಿ ಎಂ - ಜನಮನ್

ಪ್ರಧಾನ ಮಂತ್ರಿ ಜನ್‌ಜಾತಿಯ ಆದಿವಾಸಿ  ನ್ಯಾಯ ಮಹಾ ಅಭಿಯಾನ್‌

Pradhan Mantri Janjati Adivasi Nyaya Maha Abhiyan.(PM- Janman)

 

2011 ರ ಜನಗಣತಿಯ ಪ್ರಕಾರ ಭಾರತದಲ್ಲಿ 10.45 ಕೋಟಿ ಜನಸಂಖ್ಯೆ ಹೊಂದಿರುವ 700 ಕ್ಕೂ ಹೆಚ್ಚು ST ಸಮುದಾಯಗಳಿವೆ, ಅವುಗಳಲ್ಲಿ 18 ರಾಜ್ಯಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್ ಕೇಂದ್ರಾಡಳಿತ ಪ್ರದೇಶಗಳಲ್ಲಿ ನೆಲೆಗೊಂಡಿರುವ 75 ಸಮುದಾಯಗಳನ್ನು ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳು (PVTGs) ಎಂದು ವರ್ಗೀಕರಿಸಲಾಗಿದೆ.

2023-24ನೇ ಸಾಲಿನಲ್ಲಿ, ಭಾರತ ಸರ್ಕಾರವು ಪ್ರಧಾನ ಮಂತ್ರಿ ಪಿವಿಟಿಜಿ ಅಭಿವೃದ್ಧಿ ಮಿಷನ್ ಅನ್ನು ಘೋಷಿಸಿತು. ಪಿವಿಟಿಜಿ ಮನೆಗಳು ಮತ್ತು ವಾಸಸ್ಥಳಗಳನ್ನು ನಿಗದಿತ ಸಮಯದ ಚೌಕಟ್ಟಿನೊಳಗೆ ಮೂಲಭೂತ ಸೌಲಭ್ಯಗಳೊಂದಿಗೆ ಸ್ಯಾಚುರೇಟ್ ಮಾಡುವ ಮೂಲಕ ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ (ಪಿವಿಟಿಜಿಗಳು) ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸಲು ಕೇಂದ್ರ ಸಚಿವ ಸಂಪುಟವು 9-ಸಚಿವಾಲಯಗಳು/ಇಲಾಖೆಗಳ ಮೂಲಕ 11 ನಿರ್ಣಾಯಕ ಮಧ್ಯಸ್ಥಿಕೆಗಳ ಮೇಲೆ ಕೇಂದ್ರೀಕರಿಸಲು ರೂ.24,104 ಕೋಟಿ ವೆಚ್ಚದಲ್ಲಿ ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (ಪಿಎಂಜನ್‌ಮಾನ್) ಅನ್ನು ಅನುಮೋದಿಸಿತು.

ಗೌರವಾನ್ವಿತ ಪ್ರಧಾನ ಮಂತ್ರಿಗಳು 2023 ರ ನವೆಂಬರ್ 15 ರಂದು ಜನಜಾತಿಯಾ ಗೌರವ್ ದಿವಸ್‌ ರಂದು ಪ್ರಧಾನ ಮಂತ್ರಿ ಜನಜಾತಿ ಮಿಷನ್ ಅನ್ನು ಪ್ರಾರಂಭಿಸಿದರು.

ಉದ್ದೇಶಗಳು.

  • ಬುಡಕಟ್ಟು ಪ್ರದೇಶಗಳನ್ನು ಸಂಪೂರ್ಣ ಅಭಿವೃದ್ದಿಗೊಳಿಸುವುದರೊಂದಿಗೆ ಈ ಸಮುದಾಯಗಳ ಜನರ ಜೀವನಮಟ್ಟವನ್ನು ಉತ್ತಮಗೊಳಿಸುವುದು.
  • ಸರ್ಕಾರಿ ಯೋಜನೆಗಳನ್ನು ವಿಲೀನಗೊಳಿಸುವ ಮೂಲಕ ಸುಸ್ಥಿರ ಬೆಳವಣಿಗೆಯನ್ನು ಹೆಚ್ಚಿಸುವುದು.
  • ಬುಡಕಟ್ಟು ಸಮುದಾಯಗಳಿಗೆ ಮೂಲಭೂತ ಮೂಲಸೌಕರ್ಯಗಳನ್ನು ಒದಗಿಸುವುದರ ಮೂಲಕ ಸಾಮಾಜಿಕ-ಆರ್ಥಿಕ ಸವಾಲುಗಳನ್ನು ನಿವಾರಿಸಲು ಸಬಲೀಕರಣಗೊಳಿಸುವುದು.

ರಾಜ್ಯದ 5 ಜಿಲ್ಲೆಗಳಾದ ಮೈಸೂರು, ಕೊಡಗು, ಉಡುಪಿ, ಚಾಮರಾಜನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಜೇನುಕುರುಬ ಮತ್ತು ಕೊರಗ ಸಮುದಾಯಗಳನ್ನು ಕೇಂದ್ರ ಸರ್ಕಾರ ನೈಜ ದುರ್ಬಲ ಬುಡಕಟ್ಟು ಎಂದು ಗುರುತಿಸಿದ್ದು, ಆ ಸಮುದಾಯದ (PVTG) ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳಾದ ರಸ್ತೆ ನಿರ್ಮಾಣ, ಪಕ್ಕಾ ಮನೆಗಳು, ಕುಡಿಯುವ ನೀರು ಹಾಗೂ ಇತರೇ ಸೌಲಭ್ಯಗಳೊಂದಿಗೆ ಹಾಸ್ಟೆಲ್‌ಗಳ ನಿರ್ಮಾಣ, ಶಾಲೆಗಳ ಸಬಲೀಕರಣ ಹಾಗೂ ಇನ್ನಿತರೇ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗಿದೆ.

  • 2023-24 ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಅಯ್ಯನಕೆರೆ ಹಾಡಿಯಲ್ಲಿ ಜೇನುಕುರುಬ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಸತಿ ನಿಲಯ ನಿರ್ಮಾಣ ಮಾಡಲು ಕೇಂದ್ರ ಸರ್ಕಾರದಿಂದ ರೂ.2.3 ಕೋಟಿಗಳು ಅನುಮೋದನೆಯಾಗಿರುತ್ತದೆ. ಇದರ ಪೈಕಿ ಈಗಾಗಲೇ ಪ್ರಥಮ ಕಂತಿನಲ್ಲಿ ರೂ. 100.00 ಲಕ್ಷಗಳ ಅನುದಾನ ವಿದ್ಯಾರ್ಥಿನಿಲಯ ಆರಂಭಿಸಲು ಬಿಡುಗಡೆಯಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ.
  • 2024-25 ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ “ಹಾಲಾಡಿ”ಯಲ್ಲಿ ಘಟಕ ವೆಚ್ಚ ತಲಾ ರೂ. 230.00 ಲಕ್ಷಗಳಂತೆ, 50 ಬಾಲಕಿಯರಿಗೆ 1 ವಸತಿ ನಿಲಯ ಹಾಗೂ 50 ಬಾಲಕರಿಗೆ 1 ವಸತಿ ನಿಲಯ ಒಟ್ಟು 2 ವಸತಿನಿಲಯಗಳಿಗೆ ರೂ.460.00 ಲಕ್ಷಗಳ ಅನುದಾನ ಅನುಮೋದನೆಯಾಗಿರುತ್ತದೆ.

 

             ಈ ವಸತಿ ನಿಲಯ ನಿರ್ಮಾಣದಿಂದ  ದೂರದ ಪ್ರದೇಶದಲ್ಲಿರುವ ಬುಡಕಟ್ಟು  ವಿದ್ಯಾರ್ಥಿಗಳಿಗೆ  ಶಿಕ್ಷಣ ಪಡೆಯಲು ಸುರಕ್ಷಿತ ಮತ್ತು ಬೆಂಬಲ ವಾತಾವರಣವನ್ನು ಒದಗಿಸಿದಂತಾಗುತ್ತದೆ ಹಾಗೂ  ಉನ್ನತ ಶಿಕ್ಷಣ ಪಡೆಯಲು ಅವಕಾಶ ದೊರಕಿ, ಬುಡಕಟ್ಟು ಸಮುದಾಯಗಳ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಹಾಯಕವಾಗಿದೆ. 

 

 

ಪಿ ಎಂ - ದಾಜ್ಗುವಾ

ಪ್ರಧಾನಮಂತ್ರಿಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನ್

(PM- DAJGUA)

 

 2011ರ ಜನಗಣತಿಯ ಪ್ರಕಾರ, ಭಾರತವು 10.45 ಕೋಟಿ ಪರಿಶಿಷ್ಟ ಪಂಗಡ (ST) ಜನಸಂಖ್ಯೆಯನ್ನು ಹೊಂದಿದ್ದುದೇಶದ ಒಟ್ಟು ಜನಸಂಖ್ಯೆಯ 8.6% ಮತ್ತು ಗ್ರಾಮೀಣ ಜನಸಂಖ್ಯೆಯ 11.3%ರಷ್ಟಿದೆ. 705 ಕ್ಕೂ ಹೆಚ್ಚು ಬುಡಕಟ್ಟು ಸಮುದಾಯಗಳು ದೂರದ ಮತ್ತು ಪ್ರವೇಶಿಸಲು ಕಷ್ಟಕರವಾದ ಪ್ರದೇಶಗಳಲ್ಲಿ ವಾಸಿಸುತ್ತಿವೆ, ಪ್ರತಿಯೊಂದೂ ಬುಡಕಟ್ಟು ಸಮುದಾಯ ವಿಶಿಷ್ಟ ಸಾಂಸ್ಕೃತಿಕ ಮತ್ತು ಭಾಷಾ ಲಕ್ಷಣಗಳನ್ನು ಹೊಂದಿವೆ. ಬುಡಕಟ್ಟು ಜನಸಂಖ್ಯೆಯು ಶಿಕ್ಷಣ, ಆರೋಗ್ಯ ಮೂಲಸೌಕರ್ಯ ಮತ್ತು ಸಂಬಂಧಿತ ಸಾಮಾಜಿಕ -ಆರ್ಥಿಕ ಸೂಚಕಗಳಲ್ಲಿ ಇನ್ನೂ ಸವಾಲುಗಳನ್ನು ಎದುರಿಸುತ್ತಿದೆ.

ಭಾರತ ಸರ್ಕಾರ ಸ್ವಾತಂತ್ರ್ಯದ ನಂತರ, ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ವಿವಿಧ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ.

ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯಾದ ಅಕ್ಟೋಬರ್-2, 2024 ರಂದು ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ಗೌರವಾನ್ವಿತ ಪ್ರಧಾನಮಂತ್ರಿಯವರು “ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನ್”‌ಕಾರ್ಯಕ್ರಮ ಪ್ರಾರಂಭಿಸಿದರು. ದೇಶದ 30 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಬುಡಕಟ್ಟು ಬಹುಸಂಖ್ಯಾತ ಗ್ರಾಮಗಳು ಮತ್ತು ಮಹತ್ವಾಕಾಂಕ್ಷೆಯ ಬ್ಲಾಕ್‌ಗಳಲ್ಲಿ ಹರಡಿರುವ 2,911 ಬ್ಲಾಕ್‌ಗಳಲ್ಲಿ 5 ಕೋಟಿಗೂ ಹೆಚ್ಚು ಬುಡಕಟ್ಟು ಜನರು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆಯಲಿದ್ದಾರೆ.

ಉದ್ದೇಶಗಳು

  1. ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು.
  2. ಬುಡಕಟ್ಟು ಜನರ ಆರೋಗ್ಯ, ರಕ್ಷಣೆ, ಶಿಕ್ಷಣ ಮತ್ತು ಜೀವನೋಪಾಯದಲ್ಲಿನ ನಿರ್ಣಾಯಕ ಅಂತರವನ್ನು ಪರಿಹರಿಸುವುದು.
  3. ಬುಡಕಟ್ಟು ಸಮುದಾಯಗಳ ಸಮಗ್ರ, ಸುಸ್ಥಿರ ಮತ್ತು ಅಂತರ್ಗತ ಬೆಳವಣಿಗೆಯನ್ನು ಖಚಿತಪಡಿಸುವುದು.

 

    ಕೇಂದ್ರ ಬುಡಕಟ್ಟು ಸಚಿವಾಲಯವು ಕರ್ನಾಟಕ ರಾಜ್ಯದ ಬೆಳಗಾವಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ಮೈಸೂರು, ದಾವಣಗೆರೆ, ಚಿತ್ರದುರ್ಗ, ಹಾಸನ, ಮಂಡ್ಯ, ಬೀದರ್‌ ಹಾಗೂ ಯಾದಗಿರಿ ಜಿಲ್ಲೆಗಳನ್ನು  ಪರಿಶಿಷ್ಟ ಪಂಗಡದ ಸಮುದಾಯಗಳ ಪ್ರದೇಶಗಳೆಂದು ಗುರುತಿಸಿದೆ.

 

      ಈ ಸಮುದಾಯಗಳ ಜನರ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗಾಗಿ ಕೇಂದ್ರ ಬುಡಕಟ್ಟು ಸಚಿವಾಲಯ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ವಸತಿ ನಿಲಯಗಳನ್ನು ನಿರ್ಮಿಸಲು ಕ್ರಮಕೈಗೊಂಡಿದೆ.

 

 

ಮೊದಲನೇ ಹಂತದಲ್ಲಿ

 

ಕ್ರಸಂ

ಜಿಲ್ಲೆಯ ಹೆಸರು

ತಾಲ್ಲೂಕಿನ ಹೆಸರು

ಶಾಲೆಯ ಹೆಸರು ಮತ್ತು ವಿಳಾಸ

1

ಚಿತ್ರದುರ್ಗ

ಚಳ್ಳಕೆರೆ

ಸ.ಹಿ.ಪ್ರಾ. ಶಾಲೆ ಕಾರ್ತಿಕೇಯನ ಹಟ್ಟಿ

2

ಬೀದರ್

ಔರಾದ್

ಸ.ಪ್ರೌ.ಶಾಲೆ ಯೆನುಗುಂದ

3

ಮಂಡ್ಯ

ಕೆ.ಆರ್‌.ಪೇಟೆ

ಸ.ಹಿ.ಪ್ರಾ.ಶಾಲೆ,ಗಂಜಿಗಟ್ಟಿ(ಅಕ್ಕಿಹೆಬ್ಬಾಳು),

 

4

ರಾಯಚೂರು

ಮಸ್ಕಿ

ಸ.ಹಿ.ಪ್ರಾ.ಶಾಲೆ ಯತಗಲ್‌


 

 

ಎರಡನೇ ಹಂತದಲ್ಲಿ

 

ಕ್ರಸಂ

ಜಿಲ್ಲೆಯ ಹೆಸರು

ತಾಲ್ಲೂಕಿನ ಹೆಸರು

ಶಾಲೆಯ ಹೆಸರು ಮತ್ತು ವಿಳಾಸ

1

ಚಿತ್ರದುರ್ಗ

ಚಳ್ಳಕೆರೆ

ಸ.ಹಿ.ಪ್ರಾ. ಶಾಲೆ, ವರವು

2

 

ಚಳ್ಳಕೆರೆ

ಸ.ಹಿ.ಪ್ರಾ.ಶಾಲೆ ,ಭೀಮನಗೊಂಡನ  ಹಳ್ಳಿ

3

ಚಳ್ಳಕೆರೆ

ಸ.ಹಿ.ಪ್ರಾ. ಶಾಲೆ, ಮೋದೂರು

4

ಚಿತ್ರದುರ್ಗ

ಸ.ಹಿ.ಪ್ರಾ. ಶಾಲೆ ,ಹುಣಸೆಕಟ್ಟೆ

5

ರಾಯಚೂರು

ಮಾನ್ವಿ

ಸ.ಹಿ.ಪ್ರಾ. ಶಾಲೆ, ದೇವಿಪುರ

6

ಮಾನ್ವಿ

ಸ.ಹಿ.ಪ್ರಾ. ಶಾಲೆ ,ಸಾದಾಪುರ

7

ಮಾನ್ವಿ

ಸ.ಹಿ.ಪ್ರಾ. ಶಾಲೆ ,  ನೀರ್‌ ಮಾನ್ವಿ

8

ಕೊಪ್ಪಳ

ಕುಷ್ಟಗಿ

ಸ.ಹಿ.ಪ್ರಾ. ಶಾಲೆ,  ಹಿರೆತಮ್ಮಿನಹಾಳ

9

ಕುಷ್ಟಗಿ

ಸ.ಹಿ.ಪ್ರಾ. ಶಾಲೆ,    ಲಿಂಗದ ಹಳ್ಳಿ

10

ವಿಜಯನಗರ

ಕೂಡ್ಲಗಿ

ಸ.ಹಿ.ಪ್ರಾ. ಶಾಲೆ, ಸಿಡೆಗಲ್ಲು

 

 

 

 

 

    ಒಟ್ಟು 14 ಹಾಸ್ಟೆಲ್‌ಗಳಿಗೆ ಘಟಕ ವೆಚ್ಚ 575.00 ರಂತೆ ಒಟ್ಟು ರೂ.8050.00 ಲಕ್ಷಗಳ ಅನುದಾನ ಕೇಂದ್ರ  ಮತ್ತು ರಾಜ್ಯ ಸರ್ಕಾರಗಳು 60:40 ಅನುಪಾತದಂತೆ ಅನುಮೋದನೆ ದೊರೆತಿದೆ. ಈ ವಸತಿ ನಿಲಯಗಳ ನಿರ್ಮಾಣದಿಂದ  ದೂರದ ಪ್ರದೇಶದಲ್ಲಿರುವ ಪರಿಶಿಷ್ಟ  ಪಂಗಡ ಜನಾಂಗದ ವಿದ್ಯಾರ್ಥಿಗಳಿಗೆ  ಶಿಕ್ಷಣ ಪಡೆಯಲು ಸುರಕ್ಷಿತ ಮತ್ತು ಬೆಂಬಲ ವಾತಾವರಣವನ್ನು ಒದಗಿಸಿದಂತಾಗುತ್ತದೆ ಹಾಗೂ  ಉನ್ನತ ಶಿಕ್ಷಣ ಪಡೆಯಲು ಅವಕಾಶ ದೊರಕಿ, ಬುಡಕಟ್ಟು ಸಮುದಾಯಗಳ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಹಾಯಕವಾಗುತ್ತದೆ.

 

 

 

 

 

ರಾಜ್ಯ ಸರ್ಕಾರದ ಕಾರ್ಯಕ್ರಮಗಳು

 

1. ಆದರ್ಶ ವಿದ್ಯಾಲಯ
2. ಕರ್ನಾಟಕ ಪಬ್ಲಿಕ್ ಶಾಲೆಗಳು
   
ಗುಣಮಟ್ಟ ಮತ್ತು ನಾವೀನ್ಯತೆ ಮಧ್ಯಸ್ಥಿಕೆಗಳು
1 ನಲಿಕಲಿ ಕಾರ್ಯಕ್ರಮ ಬಲವರ್ಧನೆ